ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ತಿಳಿಯುವುದು ಹೇಗೆ?

ರಾತ್ರಿ ಸರಿಯಾಗಿ ನಿದ್ದೆ ಬರುವುದಿಲ್ಲ, ಹೆಚ್ಚಿನ ಮಾನಸಿಕ ಕಿರಿಕಿರಿ, ಒತ್ತಡವನ್ನು ಅನುಭವಿಸುತ್ತಿದ್ದೀರಾ? ಹಾಗಿದ್ದರೆ ನೀವು ಮಲಗುವ ಕೋಣೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶ ಪಡೆದಿದೆ ಎಂದರ್ಥ. ಇದನ್ನು ಹೋಗಲಾಡಿಸಲು ಸುಲಭವಾದ ಉಪಾಯಗಳಿವೆ. ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಗುರುತಿಸುವುದು ಹೇಗೆ, ಅದನ್ನು ಪರಿಹರಿಸುವುದು ಹೇಗೆ ? ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಮಲಗುವ ಕೋಣೆಯಲ್ಲಿದೆಯೇ ನಕಾರಾತ್ಮಕತೆ?

-

ಬೆಂಗಳೂರು: ಸರಿಯಾಗಿ ನಿದ್ದೆ (Vastu for sleep) ಬರುವುದಿಲ್ಲ, ಎಷ್ಟು ನಿದ್ದೆ ಮಾಡಿದರೂ ಸುಸ್ತು, ಮಾನಸಿಕ ಕಿರಿಕಿರಿ, ಒತ್ತಡ ಅನುಭವಿಸುತ್ತಿದ್ದೀರಾ ? ಹಾಗಿದ್ದರೆ ನಕಾರಾತ್ಮಕ ಶಕ್ತಿ ಮಲಗುವ ಕೋಣೆಯೊಳಗೆ ಪ್ರವೇಶ ಪಡೆದಿದೆ ಎಂದರ್ಥ. ಮಲಗುವ ಕೋಣೆಯಲ್ಲಿ (Vastu for bedroom) ಮಾನಸಿಕ ತೊಂದರೆ ಉಂಟು ಮಾಡುವ ಹಲವು ಕಾರಣಗಳು ಇರುತ್ತವೆ. ಇದು ನಕಾರಾತ್ಮಕ ಶಕ್ತಿ ಇರುವುದನ್ನು ನಮಗೆ ತೋರ್ಪಡಿಸುತ್ತದೆ. ಅವುಗಳ ಬಗ್ಗೆ ತಿಳಿದುಕೊಂಡು ಪರಿಹಾರ ಪ್ರಯತ್ನಗಳನ್ನು ಮಾಡಿದರೆ ಹೆಚ್ಚು ಸುಖಕರವಾದ ನಿದ್ರೆ, ವಿಶ್ರಾಂತಿ ನಮ್ಮದಾಗುತ್ತದೆ ಎನ್ನುತ್ತಾರೆ ವಾಸ್ತು (Vastu tips) ತಜ್ಞರು.

ಸಾಮಾನ್ಯವಾಗಿ ನಾವು ಮನೆಯನ್ನು ವಾಸ ಮಾಡುವ ಸ್ಥಳವಷ್ಟೇ ಎಂದು ಪರಿಗಣಿಸುತ್ತೇವೆ. ಆದರೆ ವಾಸ್ತು ಪ್ರಕಾರ ಮನೆಯ ಪ್ರತಿಯೊಂದು ಮೂಲೆಯೂ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಾಢವಾದ ಪರಿಣಾಮ ಬೀರುವ ಸ್ಥಳ. ನಾವು ಶಾಂತಿ ಮತ್ತು ವಿಶ್ರಾಂತಿಯನ್ನು ಬಯಸುವ ಮಲಗುವ ಕೋಣೆಯಲ್ಲಿ ಸಕಾರಾತ್ಮಕ ಶಕ್ತಿ ಇದ್ದರೆ ಮಾತ್ರ ಹೆಚ್ಚು ಆರಾಮದಾಯಕ ನಿದ್ದೆ, ಮಾನಸಿಕ ಶಾಂತಿ ನಮ್ಮದಾಗುತ್ತದೆ.

ಮಲಗುವ ಕೋಣೆಯ ವಾತಾವರಣವು ಯಾವಾಗಲೂ ಸಕಾರಾತ್ಮಕವಾಗಿರಬೇಕು. ಇದಕ್ಕಾಗಿ ಸಾಕಷ್ಟು ಗಾಳಿ, ಬೆಳಕು ಈ ಕೋಣೆಗೆ ಪ್ರವೇಶಿಸುವಂತಿರಬೇಕು. ನಕಾರಾತ್ಮಕ ಶಕ್ತಿ ಇರುವ ಮಲಗುವ ಕೋಣೆಯು ಅನೇಕ ಸಮಸ್ಯೆಗಳನ್ನು ಉಂಟುಮಾಡಬಹುದು. ಮಲಗುವ ಕೋಣೆ ಸಕಾರಾತ್ಮಕ ಶಕ್ತಿಯಿಂದ ತುಂಬಿಲ್ಲದಿದ್ದರೆ ಎಷ್ಟೇ ನಿದ್ರೆ ಮಾಡಿದರೂ ಆಯಾಸ, ಒತ್ತಡ ಮತ್ತು ಸಂಬಂಧಗಳಲ್ಲಿ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಸೂಚಿಸುವ ಹಲವಾರು ಅಂಶಗಳಿವೆ. ಅವುಗಳ ಕುರಿತು ಜ್ಯೋತಿಷಿ ಪಂಡಿತ್ ರಮೇಶ್ ಭೋಜರಾಜ್ ದ್ವಿವೇದಿ ಹೇಳುವುದು ಹೀಗೆ.

ಹೇಗೆ ಗುರುತಿಸುವುದು?

  • ಬೆಳಗ್ಗೆ ಏಳುವಾಗ ಹೆಚ್ಚು ಸುಸ್ತು ಅನುಭವಿಸುತ್ತಿದ್ದರೆ ಅದು ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಮಾನಸಿಕ ಶಕ್ತಿ ಕ್ಷೀಣಿಸಲು ಪ್ರಾರಂಭಿಸುತ್ತದೆ.
  • ಒಳ್ಳೆಯ ನಿದ್ರೆಯ ಅನಂತರವೂ ಒತ್ತಡ ಅನುಭವಿಸಿ ಪದೇ ಪದೆ ಎಚ್ಚರವಾಗುತ್ತಿದ್ದರೆ ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂಬುದನ್ನು ಸೂಚಿಸುತ್ತದೆ.
  • ನಿದ್ರಿಸಿದ ಅನಂತರ ದುಃಸ್ವಪ್ನಗಳು ಕಂಡು ಬಂದರೆ ಅದು ನಕಾರಾತ್ಮಕ ಶಕ್ತಿಯ ಪ್ರಭಾವ. ಪದೇ ಪದೆ ಬರುವ ದುಃಸ್ವಪ್ನಗಳು ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.
  • ಪ್ರತಿದಿನ ರಾತ್ರಿ 2 ಅಥವಾ 3 ಗಂಟೆಯ ಸುಮಾರಿಗೆ ಎಚ್ಚರಗೊಳ್ಳುವುದು ಕೂಡ ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇರುವುದರ ಸಂಕೇತ. ಈ ಸಮಯದಲ್ಲಿ ದೇಹವು ಅತ್ಯಂತ ಸೂಕ್ಷ್ಮ ಸ್ಥಿತಿಯಲ್ಲಿರುತ್ತದೆ. ಹೀಗಾಗಿ ನಕಾರಾತ್ಮಕ ಶಕ್ತಿಯು ಬಹುಬೇಗನೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ.
  • ಮನೆಯಲ್ಲಿ ಸಂಗಾತಿಯೊಂದಿಗೆ ನಿರಂತರ ಜಗಳವಾಗುತ್ತಿದ್ದರೆ ನಕಾರಾತ್ಮಕ ಶಕ್ತಿಯ ಪ್ರಭಾವ ಎನಿಸಿಕೊಳ್ಳಲಿದೆ. ಇದು ಸಂಬಂಧಗಳಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: Vastu Tips: ಅದೃಷ್ಟವನ್ನು ಮನೆಗೆ ತರುವ ಮೀನುಗಳು

ಏನು ಪರಿಹಾರ?

ಮಲಗುವ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದನ್ನು ತೆಗೆದುಹಾಕಲು ಕೆಲವು ಸರಳ ಪರಿಹಾರಗಳಿವೆ. ಪ್ರತಿ ರಾತ್ರಿ ಮಲಗುವ ಮುನ್ನ ಕರ್ಪೂರವನ್ನು ಸುಟ್ಟುಹಾಕಿ. ಇದು ಮಲಗುವ ಕೋಣೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ ಮತ್ತು ವಾತಾವರಣವನ್ನು ಶುದ್ಧ ಮತ್ತು ಸಕಾರಾತ್ಮಕಗೊಳಿಸುತ್ತದೆ.

ಮಲಗುವ ಕೋಣೆಯ ಒಂದು ಮೂಲೆಯಲ್ಲಿ ಉಪ್ಪು ತುಂಬಿದ ಗಾಜಿನ ಬಟ್ಟಲನ್ನು ಇರಿಸಿ. ಇದು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ವಾತಾವರಣವನ್ನು ಶುದ್ಧೀಕರಿಸುತ್ತದೆ. ಮಲಗುವ ಕೋಣೆಗೆ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.