ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಮನೆ ಸ್ವಚ್ಛಗೊಳಿಸುವಾಗ ಪಾಲಿಸಬೇಕು ಕೆಲವು ನಿಯಮ

ಮನೆಯಲ್ಲಿ ಹೆಚ್ಚಿನ ಸಮಸ್ಯೆಗಳು ಸ್ವಚ್ಛತೆ ವೇಳೆ ನಾವು ಮಾಡುವ ಲೋಪದಿಂದಲೇ ಉಂಟಾಗುತ್ತದೆ. ಹೀಗಾಗಿ ಮನೆ ಸ್ವಚ್ಛಗೊಳಿಸುವಾಗ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಇಲ್ಲವಾದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುವುದಿಲ್ಲ. ಇದು ನಾನಾ ತೆರನಾದ ಸಮಸ್ಯೆಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ. ಮನೆಯ ಸ್ವಚ್ಛತೆ ಕಾರ್ಯಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಮಾಡಬೇಕು. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಸದಾ ಕಾಲ ನೆಲೆಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಸ್ವಚ್ಛತೆ ಕಾರ್ಯಗಳನ್ನು ಹೇಗೆ ಮಾಡಬೇಕು, ಈ ವೇಳೆ ಪಾಲಿಸಬೇಕಾದ ನಿಯಮಗಳೇನು, ಯಾವ ರೀತಿಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಕುರಿತು ವಾಸ್ತು ತಜ್ಞರು ಹೇಳುವುದು ಹೀಗೆ...

ಮನೆ ಸ್ವಚ್ಛತೆ ವೇಳೆ ಪಾಲಿಸಬೇಕಾದ ನಿಯಮ ಏನು ಗೊತ್ತೇ?

-

ಬೆಂಗಳೂರು: ಸಾಮಾನ್ಯವಾಗಿ ನಾವು ಮನೆ (Vastu for home) ಶುಚಿ (vastu for cleaning) ಮಾಡುವಾಗ ಕೇವಲ ಸ್ವಚ್ಛತೆ ಬಗ್ಗೆ ಮಾತ್ರ ಗಮನ ಕೊಡುತ್ತೇವೆ. ಆದರೆ ಇಲ್ಲಿ ಪಾಲಿಸಬೇಕಾದ ನಿಯಮಗಳನ್ನು ನಿರ್ಲಕ್ಷಿಸುತ್ತೇವೆ. ವಾಸ್ತು (vastu tips) ಶಾಸ್ತ್ರದ ಪ್ರಕಾರ ಮನೆ ಸ್ವಚ್ಛತೆ ವೇಳೆ ನಾವು ನಿರ್ಲಕ್ಷಿಸುವ ಕೆಲವೊಂದು ಅಂಶಗಳು ಮನೆಗೆ, ಮನೆ ಮಂದಿಗೆ ಸಂಕಷ್ಟವನ್ನು ತಂದೊಡ್ಡಬಹುದು. ವಾಸ್ತು ಶಾಸ್ತ್ರದ (vastu shastra) ಪ್ರಕಾರ ನಾವು ಮನೆಯ ಸ್ವಚ್ಛತೆ ಕಾರ್ಯಗಳನ್ನು ಮಾಡಿದರೆ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುವುದು ಸಾಧ್ಯವಿದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸ್ವಚ್ಛತೆ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದು ಹೆಚ್ಚು ಪ್ರಯೋಜನಕಾರಿ. ವಾಸ್ತು ಶಾಸ್ತ್ರವು ಮನೆಯ ಸ್ವಚ್ಛತೆಗಾಗಿ ಹಲವಾರು ನಿಯಮಗಳನ್ನು ಹೇಳಿದೆ. ಇವುಗಳನ್ನು ಸರಿಯಾಗಿ ಅನುಸರಿಸುವುದರಿಂದ ಮನೆಯ ಹೆಚ್ಚಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಹೀಗಾಗಿ ಈ ನಿಯಮಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು.

ಇದನ್ನೂ ಓದಿ: Vastu Tips: ಜೀವನದ ಪ್ರಗತಿಯನ್ನು ನಿರ್ಧರಿಸುತ್ತದೆ ಕೈ ಗಡಿಯಾರ

ಎಲ್ಲಿಂದ ಪ್ರಾರಂಭಿಸಬೇಕು?

ಮನೆಯ ಸ್ವಚ್ಛತಾ ಕಾರ್ಯವನ್ನು ಯಾವಾಗಲೂ ಈಶಾನ್ಯ ಮೂಲೆಯಿಂದ ಪ್ರಾರಂಭಿಸಬೇಕು. ಬಳಿಕ ನೈಋತ್ಯದ ಕಡೆಗೆ ಶುಚಿಗೊಳಿಸಬೇಕು. ಈ ರೀತಿಯಾಗಿ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ವೃದ್ಧಿಯಾಗುತ್ತದೆ.

ಸರಿಯಾದ ಸಮಯ ಯಾವುದು?

ಮನೆಯನ್ನು ಶುಚಿಗೊಳಿಸಲು ಕೂಡ ವಾಸ್ತು ಶಾಸ್ತ್ರ ಸಮಯವನ್ನು ನಿಗದಿಪಡಿಸಿದೆ. ಮನೆ ಸ್ವಚ್ಛತೆಗೆ ಬ್ರಹ್ಮ ಮುಹೂರ್ತ ಉತ್ತಮ ಸಮಯ ಎನ್ನುತ್ತದೆ ವಾಸ್ತು ಶಾಸ್ತ್ರ. ಈ ಸಮಯದಲ್ಲಿ ಮನೆಯನ್ನು ಶುಚಿಗೊಳಿಸಿದರೆ ಮನೆಯಲ್ಲಿ ಸಕಾರಾತ್ಮಕತೆ ವೃದ್ಧಿಯಾಗುತ್ತದೆ. ಬ್ರಹ್ಮ ಮುಹೂರ್ತವೆಂದರೆ ಸೂರ್ಯೋದಯಕ್ಕೆ ಮುಂಚಿನ ಸಮಯ. ಈ ಸಮಯಕ್ಕೆ ಮೊದಲು ಮನೆಯನ್ನು ಶುಚಿಗೊಳಿಸಿದರೆ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುವುದು.

ವಾಸ್ತು ಶಾಸ್ತ್ರದ ಪ್ರಕಾರ ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯೋದಯದ ಅನಂತರದ ಸಮಯ ಮನೆಯನ್ನು ಸ್ವಚ್ಛಗೊಳಿಸಲು ತುಂಬಾ ಉತ್ತಮ ಸಮಯವೆಂದು ಪರಿಗಣಿಸಲಾಗಿದೆ. ಮನೆಯನ್ನು ಸ್ವಚ್ಛಗೊಳಿಸಿದ ನಂತರವೇ ಉಳಿದ ಕೆಲಸವನ್ನು ಮಾಡಬೇಕು. ರಾತ್ರಿ ವೇಳೆ ಮನೆ ಸ್ವಚ್ಛ ಮಾಡುವಾಗ ಕಸವನ್ನು ಹೊರಗೆ ಬಿಸಾಡಬಾರದು. ಮನೆಯ ಒಳಗೆ ಸಂಗ್ರಹಿಸಿ ಇಟ್ಟುಕೊಳ್ಳಬೇಕು.

ಇದನ್ನೂ ಓದಿ: Vastu Tips: ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಈ ವಸ್ತುಗಳು

ಏನು ಮಾಡಬೇಕು?

ಮನೆಯನ್ನು ಸ್ವಚ್ಛಗೊಳಿಸುವ ನೀರಿಗೆ ನಿಂಬೆ ರಸ ಅಥವಾ ಕಲ್ಲು ಉಪ್ಪು ಸೇರಿಸುವುದರಿಂದ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದರಿಂದ ಮನೆಯಿಂದ ನಕಾರಾತ್ಮಕ ಶಕ್ತಿ ದೂರವಾಗುವುದು.

ಯಾವಾಗ ಮಾಡಬಾರದು?

ಯಾವುದೇ ಕಾರಣಕ್ಕೂ ಮನೆ ಒರೆಸುವ ಕಾರ್ಯವನ್ನು ಮಧ್ಯಾಹ್ನ ಮಾಡಬಾರದು. ಮನೆಯಿಂದ ಯಾರಾದರೂ ಹೊರಗಡೆ ಹೋದ ತಕ್ಷಣವೂ ಮನೆ ಗುಡಿಸಿ, ಒರೆಸುವುದು ಸರಿಯಲ್ಲ ಎನ್ನುತ್ತದೆ ವಾಸ್ತು ಶಾಸ್ತ್ರ. ಯಾಕೆಂದರೆ ಇದು ಆರೋಗ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮನೆಯ ಸ್ವಚ್ಛತಾ ಕಾರ್ಯವನ್ನು ಮಾಡಬೇಕು. ನಾವು ಮನೆ ಸ್ವಚ್ಛತೆ ವೇಳೆ ಮಾಡುವ ಸಣ್ಣ ಸಣ್ಣ ಲೋಪಗಳು ಕೂಡ ನಾನಾ ತೆರನಾದ ಸಮಸ್ಯೆಗಳಿಗೆ ಅಹ್ವಾನ ಕೊಟ್ಟಂತಾಗುತ್ತದೆ. ಆದ್ದರಿಂದ ವಾಸ್ತು ಶಾಸ್ತ್ರ ಹೇಳುವ ಈ ನಿಯಮಗಳನ್ನು ಪಾಲಿಸುವುದರಿಂದ ಮನೆ ಸುಖ, ಶಾಂತಿ, ನೆಮ್ಮದಿಯ ತಾಣವನ್ನಾಗಿ ಮಾಡಬಹುದು.