ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಪಾಕಿಸ್ತಾನ ಎಂಬ ಊಸರವಳ್ಳಿ

‘ಭಾರತವನ್ನು ಉಡಾಯಿಸಬಲ್ಲಂಥ ಮಾರಕ ಅಸ್ತ್ರಗಳು ನಮ್ಮಲ್ಲಿವೆ. ಅವನ್ನು ನಾವು ಇಟ್ಟುಕೊಂಡಿರು ವುದು ಪ್ರದರ್ಶನಕ್ಕಲ್ಲ, ಪೂಜೆ ಮಾಡುವುದಕ್ಕಲ್ಲ’ ಎಂಬರ್ಥದ ಉಡಾಫೆಯ ಮಾತುಗಳು ಪಾಕ್ ಸೇನಾ ಧಿಕಾರಿಯೊಬ್ಬರಿಂದ ಹೊಮ್ಮಿದ್ದುಂಟು. ಆದರೆ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಭಾರತ ಶುರುವಿಟ್ಟು ಕೊಳ್ಳುತ್ತಿದ್ದಂತೆ ಪಾಕಿಸ್ತಾನ ತಡವರಿಸತೊಡಗಿತು ಮತ್ತು ಅದರ ‘ಉತ್ತರ ಕುಮಾರನ ಪೌರುಷ’ ಜಗತ್ತಿಗೇ ಗೊತ್ತಾಯಿತು

ಪಾಕಿಸ್ತಾನ ಎಂಬ ಊಸರವಳ್ಳಿ

Profile Ashok Nayak May 19, 2025 5:15 AM

ʼಸಮಯಕ್ಕೊಂದು ಸುಳ್ಳು’ ಎಂಬ ಮಾತಿಗೆ ಪುಷ್ಟಿ ನೀಡುವಂತೆ ಪಾಕಿಸ್ತಾನ ನಡೆದುಕೊಳ್ಳುತ್ತಿದೆ. ಪಹಲ್ಗಾಮ್ ಮಾರಣಹೋಮದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲಿನ ಭಾರತದ ದಾಳಿಯ ಸಂಭಾವ್ಯತೆಯ ಕುರಿತು ಮಾತುಗಳಿನ್ನೂ ಕೇಳಿ ಬರುತ್ತಿದ್ದಾಗ, ‘ಭಾರತವನ್ನು ಉಡಾಯಿಸಬಲ್ಲಂಥ ಮಾರಕ ಅಸ್ತ್ರಗಳು ನಮ್ಮಲ್ಲಿವೆ. ಅವನ್ನು ನಾವು ಇಟ್ಟುಕೊಂಡಿರುವುದು ಪ್ರದರ್ಶನಕ್ಕಲ್ಲ, ಪೂಜೆ ಮಾಡುವುದಕ್ಕಲ್ಲ’ ಎಂಬರ್ಥದ ಉಡಾಫೆಯ ಮಾತುಗಳು ಪಾಕ್ ಸೇನಾಧಿಕಾರಿಯೊಬ್ಬರಿಂದ ಹೊಮ್ಮಿದ್ದುಂಟು. ಆದರೆ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯನ್ನು ಭಾರತ ಶುರುವಿಟ್ಟು ಕೊಳ್ಳುತ್ತಿದ್ದಂತೆ ಪಾಕಿಸ್ತಾನ ತಡವರಿಸತೊಡಗಿತು ಮತ್ತು ಅದರ ‘ಉತ್ತರ ಕುಮಾರನ ಪೌರುಷ’ ಜಗತ್ತಿಗೇ ಗೊತ್ತಾಯಿತು.

ಇದನ್ನೂ ಓದಿ: Operation Sindoor: ಆಪರೇಷನ್‌ ಸಿಂದೂರ್‌ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಪ್ರಾಧ್ಯಾಪಕ ಅಲಿ ಖಾನ್ ಅರೆಸ್ಟ್‌

ನಂತರದಲ್ಲಿ, ಶುರುವಾಗಿದ್ದು ಪಾಕ್ ಪ್ರಧಾನಿ ಶಹಬಾಜ್ ಷರೀಫರ ಸುಳ್ಳಿನ ಕಂತೆ. ‘ಭಾರತವು ಪಾಕಿಸ್ತಾನದ ವಾಯುನೆಲೆಗಳ ಮೇಲೆ ದಾಳಿಯನ್ನೇ ಮಾಡಿಲ್ಲ’ ಎಂದೇ ಕಥೆ ಕಟ್ಟುತ್ತಿದ್ದ ಅವರು, ಈಗ ಕೊನೆಗೂ ಈ ದಾಳಿ ನಡೆದಿರುವುದನ್ನು ದೃಢೀಕರಿಸಿದ್ದಾರೆ; ಭಾರತದ ಸೇನಾಪಡೆಗಳಿಂದ ಆದ ದಾಳಿಗೆ ಪಾಕಿಸ್ತಾನದ ಪ್ರಮುಖ ವಾಯು ನೆಲೆಗಳು ಹುಡಿಗಟ್ಟಲ್ಪಟ್ಟಿರುವುದನ್ನು ಒಪ್ಪಿಕೊಂಡಿ ದ್ದಾರೆ.

ಇದು ಪಾಕಿಸ್ತಾನದ ಜನನಾಯಕರ ಮತ್ತು ಸೇನಾಧಿಕಾರಿಗಳ ಸಾರ್ವಕಾಲಿಕ ಹಾಗೂ ಸಹಜ ಜಾಯ ಮಾನ. ಇದನ್ನು ದಶಕಗಳಿಂದಲೂ ಅರಿತಿರುವ ಭಾರತವು, ಉಗ್ರವಾದವನ್ನು ಬೆನ್ನಿಗಿಟ್ಟು ಕೊಂಡು ಪಾಕಿಸ್ತಾನ ಮೆರೆಯುತ್ತಾ ಬಂದಿರುವ ರಕ್ಕಸತನವನ್ನು ವಿವಿಧ ದೇಶಗಳಿಗೆ ಮನವರಿಕೆ ಮಾಡಿಕೊಡ ಲೆಂದು 7 ಸಂಸದರ ಸರ್ವಪಕ್ಷ ನಿಯೋಗವನ್ನು ಸಜ್ಜುಗೊಳಿಸಿರುವುದು ಶ್ಲಾಘನೀಯ ಸಂಗತಿ. ಅಮೆರಿಕ, ಬ್ರಿಟನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಮುಂತಾದ ದೇಶಗಳಿಗೆ ಸದ್ಯದಲ್ಲೇ ಪ್ರವಾಸ ಕೈಗೊಳ್ಳಲಿರುವ ಈ ನಿಯೋಗವು ತನ್ನ ಪಾಲಿನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಲಿ ಎಂಬುದು ಸಹೃದಯಿ ದೇಶಪ್ರೇಮಿಗಳ ಆಶಯ. ಉಗ್ರವಾದದ ರಫ್ತನ್ನೇ ಉಸಿರಾಗಿಸಿಕೊಂಡಿರುವ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಪಾಠ ಕಲಿಸಲು ಇದಕ್ಕಿಂತ ಸೂಕ್ತ ಸಮಯ ಮತ್ತೊಂದು ಸಿಗಲಾರದು.