ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಮಾನಸಿಕ ಆರೋಗ್ಯಕ್ಕೆ ಆದ್ಯತೆ ಬೇಕು

ಕುಟುಂಬ ಕಲಹಗಳು, ದಾಂಪತ್ಯ ಸಮಸ್ಯೆಗಳು, ಪ್ರೇಮಭಂಗ ಇದಕ್ಕೆ ಪ್ರಮುಖ ಕಾರಣಗಳು. ಹಣಕಾಸಿನ ಸಮಸ್ಯೆಗಳು, ಸಾಲದ ಬಾಧೆ, ಷೇರು ಮಾರುಕಟ್ಟೆ ನಷ್ಟ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ ಜನರನ್ನು ಒತ್ತಡಕ್ಕೆ ತಳ್ಳುತ್ತಿದೆ. ಕೆಲಸದ ಒತ್ತಡ, ಒಂಟಿತನ, ಸ್ನೇಹ ಸಂಬಂಧಗಳ ಕೊರತೆ ಮತ್ತು ಓದಿನ ಒತ್ತಡ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ.

Vishwavani Editorial: ಮಾನಸಿಕ ಆರೋಗ್ಯಕ್ಕೆ ಆದ್ಯತೆ ಬೇಕು

-

Profile
Ashok Nayak May 9, 2026 11:20 AM

ಆತಂಕಕಾರಿ ಸಂಗತಿಯೊಂದನ್ನು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ ವರದಿ ಹೊರಗೆಡಹಿದೆ. ಬೆಂಗಳೂರಿನಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಗಂಭೀರವಾಗಿದ್ದು, ಭಾರತದ ದೊಡ್ಡ ನಗರಗಳಲ್ಲೆಲ್ಲ ಆತ್ಮಹತ್ಯೆಗಳ ಸಂಖ್ಯೆ ಇಲ್ಲಿ ಅತ್ಯಧಿಕವಾಗಿದೆ. ಎನ್‌ಸಿಆರ್‌ಬಿ ಮಾಹಿತಿ ಪ್ರಕಾರ ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2024ರಲ್ಲಿ ಬೆಂಗಳೂರಿನಲ್ಲಿ 2403 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು.

ದೆಹಲಿಯ ನಂತರ ಇದು ಎರಡನೇ ಅತಿ ಹೆಚ್ಚು ಸಂಖ್ಯೆ. ಆದರೆ ಜನಸಂಖ್ಯೆ ಅನುಪಾತ ದಲ್ಲಿ ಬೆಂಗಳೂರಿನ ಆತ್ಮಹತ್ಯೆ ಪ್ರಮಾಣ ಹೆಚ್ಚು. ಇಲ್ಲಿ ಪ್ರತಿ ಒಂದು ಲಕ್ಷಕ್ಕೆ ಸುಮಾರು 16.7ರಿಂದ 20 ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಇದು ದೇಶದ ಸರಾಸರಿ ಪ್ರಮಾಣವಾದ 12.4ಕ್ಕಿಂತ ಬಹಳ ಹೆಚ್ಚು. ಪ್ರತಿದಿನ ಸುಮಾರು 6 ರಿಂದ 7 ಜನ ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ; ಅಂದರೆ ಸುಮಾರು ಪ್ರತಿ 3.5 ಗಂಟೆಗೆ ಒಬ್ಬರಂತೆ. 2022-2025ರ ಅವಧಿಯಲ್ಲಿ 9450 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: Self Harming: ಶೇರ್ ಮಾರ್ಕೇಟ್ ನಲ್ಲಿ ನಷ್ಟ: ಯುವಕ ನೇಣಿಗೆ ಶರಣು

ಕುಟುಂಬ ಕಲಹಗಳು, ದಾಂಪತ್ಯ ಸಮಸ್ಯೆಗಳು, ಪ್ರೇಮಭಂಗ ಇದಕ್ಕೆ ಪ್ರಮುಖ ಕಾರಣಗಳು. ಹಣಕಾಸಿನ ಸಮಸ್ಯೆಗಳು, ಸಾಲದ ಬಾಧೆ, ಷೇರು ಮಾರುಕಟ್ಟೆ ನಷ್ಟ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚ ಜನರನ್ನು ಒತ್ತಡಕ್ಕೆ ತಳ್ಳುತ್ತಿದೆ. ಕೆಲಸದ ಒತ್ತಡ, ಒಂಟಿತನ, ಸ್ನೇಹ ಸಂಬಂಧಗಳ ಕೊರತೆ ಮತ್ತು ಓದಿನ ಒತ್ತಡ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಐಟಿ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತಿದೆ.

ದೀರ್ಘಕಾಲದ ಅನಾರೋಗ್ಯ ಮತ್ತು ಚಿಕಿತ್ಸೆ ಪಡೆಯದ ಮಾನಸಿಕ ಆರೋಗ್ಯ ಸಮಸ್ಯೆಗಳು ಕೂಡ ಹಲವಾರು ಪ್ರಕರಣಗಳಿಗೆ ಕಾರಣವಾಗಿವೆ. ಒಟ್ಟಾರೆ ಮಾನಸಿಕ ಆರೋಗ್ಯದ ಗುಣಮಟ್ಟದಲ್ಲಿ ಹೆಚ್ಚಳ ಮಾಡಲೇಬೇಕಾದ ಅಗತ್ಯವನ್ನು ಇದು ಒತ್ತಿ ಹೇಳುತ್ತಿದೆ.

ಮಾನಸಿಕ ಆರೋಗ್ಯದ ಕೌನ್ಸೆಲಿಂಗ್ ನೀಡುವ ನಿಮ್ಹಾನ್ಸ್‌ನಂಥ ಸಂಸ್ಥೆಗಳನ್ನು ಬಲಪಡಿಸ ಬೇಕು. ಅಲ್ಲಿಗೆ ಅನುದಾನ ಹೆಚ್ಚಿಸಬೇಕು. ತಜ್ಞರ ಸಂಖ್ಯೆಯನ್ನು ಏರಿಸಬೇಕು. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಮಾನಸಿಕ ಸಮಸ್ಯೆ, ಖಿನ್ನತೆ ಎಂದು ಬಂದವರನ್ನು ಮೊದಲ ಆದ್ಯತೆಯಲ್ಲಿ ಪರಿಗಣಿಸಿದ ಕೌನ್ಸೆಲಿಂಗ್ ಅಥವಾ ಚಿಕಿತ್ಸೆ ಒದಗಿಸುವ ರೂಢಿ ಬೆಳೆಸಿಕೊಳ್ಳ ಬೇಕು.

ಬೆಂಗಳೂರು ಉದ್ಯಾನಗಳ ನಗರ, ಐಟಿ ಸಿಟಿ, ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿತ್ತು. ಇದೀಗ ಆತ್ಮಹತ್ಯೆಗಳ ರಾಜಧಾನಿ ಎಂದು ಅನ್ನಿಸಿಕೊಳ್ಳದಿರಲಿ.