ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ

ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ನಡೆಸಿರುವ ನಡುವೆಯೇ, ಮುಸ್ಲಿಂ ಬಾಹುಳ್ಯದ ಅಲ್ಲಿನ ಮುರ್ಷಿದಾಬಾದ್ ಜಿಲ್ಲೆಯಲ್ಲಿ 150 ಕಚ್ಚಾ ಬಾಂಬ್ ಗಳು ಪತ್ತೆಯಾಗಿರುವುದು ವರದಿ ಯಾಗಿದೆ.

Vishwavani Editorial: ಇದು ನಿರ್ಲಕ್ಷಿಸುವ ಸಂಗತಿಯಲ್ಲ

-

Ashok Nayak
Ashok Nayak Nov 11, 2025 10:19 AM

ಭಾರತದ ಚುನಾವಣಾ ಆಯೋಗವು ಪಶ್ಚಿಮ ಬಂಗಾಳ ರಾಜ್ಯದಲ್ಲಿನ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್) ನಡೆಸಿರುವ ನಡುವೆಯೇ, ಮುಸ್ಲಿಂ ಬಾಹುಳ್ಯದ ಅಲ್ಲಿನ ಮುರ್ಷಿದಾಬಾದ್ ಜಿಲ್ಲೆಯಲ್ಲಿ 150 ಕಚ್ಚಾ ಬಾಂಬ್ ಗಳು ಪತ್ತೆಯಾಗಿ ರುವುದು ವರದಿಯಾಗಿದೆ.

ಇದು ಬಾಂಗ್ಲಾದೇಶದ ಗಡಿಗೆ ಸಮೀಪವಿರುವ ಪ್ರದೇಶ ಎಂಬುದು ಗಮನಾರ್ಹ. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಏಕೆಂದರೆ, ಬಹುತೇಕರಿಗೆ ಗೊತ್ತಿರುವಂತೆ ಪಶ್ಚಿಮ ಬಂಗಾಳದಲ್ಲಿ ‘ಬಾಂಗ್ಲಾ ಒಳನುಸುಳುಕೋರರ’ ಹಾವಳಿ ಸಾಕ ಷ್ಟಿದೆ ಮತ್ತು ಕೆಲ ತಿಂಗಳ ಹಿಂದೆ ಬಾಂಗ್ಲಾದೇಶದಲ್ಲಿನ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಿಂಸಾಚಾರಗಳು, ಅವರ ಸ್ವತ್ತುಗಳ ಮೇಲೆ ದಾಳಿಗಳು ಕೂಡ ಆಗಿದ್ದುಂಟು.

ಇದನ್ನೂ ಓದಿ:Vishwavani Editorial: ದಂಡಂ ದಶಗುಣಂ ಭವೇತ್...

ಜಗತ್ತಿನ ಭೂಪಟದಲ್ಲಿ ಭಾರತಕ್ಕೆ ದಕ್ಕುತ್ತಿರುವ ಪಾರಮ್ಯವನ್ನು ಸಹಿಸಲಾಗದ ಕುತ್ಸಿತ ಕ್ತಿಗಳು ಈ ನೆಲದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಿ ಜನರ ಶಾಂತಿ-ನೆಮ್ಮದಿಗಳಿಗೆ ಸಂಚಕಾರ ತರಲು ಹೊಂಚುಹಾಕುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಪಂಜಾಬ್, ಜಮ್ಮು-ಕಾಶ್ಮೀರ, ಮಣಿಪುರ ಮುಂತಾದ ಗಡಿ ಪ್ರದೇಶಗಳಲ್ಲಿ ಈ ದುಷ್ಟ ಶಕ್ತಿಗಳು ಒಂದ ಲ್ಲಾ ಒಂದು ಸಮಯದಲ್ಲಿ ಕಿತಾಪತಿ ಮಾಡಿಕೊಂಡೇ ಬಂದಿವೆ.

ಇವಕ್ಕೆ ಭಾರತವು ಸರಿಯಾದ ತಿರುಗೇಟು ನೀಡುತ್ತ ಬಂದಿದ್ದರೂ, ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯ ತರುವಾಯದ ಘಟನೆಗಳನ್ನು ಅವಲೋಕಿಸಿದಾಗ, ಇಂಥ ಬೆಳವಣಿಗೆ ಗಳನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಿ ಸೇನಾ ಸನ್ನದ್ಧತೆಗೆ ಒತ್ತು ನೀಡಬೇಕಾದ ಅಗತ್ಯ ವಿದೆ.

ವಿವಿಧ ನೆಲೆಗಳಲ್ಲಿ ‘ವಿಶ್ವಗುರು’ ಆಗಲು ದಾಪುಗಾಲಿಟ್ಟು ಹೊರಟಿರುವ ಭಾರತಕ್ಕೆ ತೊಡರುಗಾಲು ಹಾಕಿ ಬೀಳಿಸುವಂಥ ಸಂಚುಗಳನ್ನು ಅಲ್ಲಲ್ಲೇ ತುಂಡರಿಸಬೇಕಿದೆ. ಈ ನಿಟ್ಟಿನಲ್ಲಿ ಯಾವುದೇ ದಯೆ-ದಾಕ್ಷಿಣ್ಯ ತೋರಬಾರದು ಎಂಬುದು ದೇಶಭಕ್ತ ಭಾರತೀ ಯರ ಆಶಯ ಮತ್ತು ನಿರೀಕ್ಷೆ..