Vishwavani Editorial: ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿ
ರೈತರ ಈ ಚಳವಳಿಯು ರಾಜ್ಯವು ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ಕೃಷಿ ಸಂಘರ್ಷ ಗಳಲ್ಲಿ ಒಂದಾಗಿ ಬೆಳೆದಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಹಾಲಿ-ಮಾಜಿ ಸಚಿವರು, ಶಾಸಕ ರದ್ದೇ ಇವೆ. ಜಿಲ್ಲೆಯ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರ ಒಡೆತನದಲ್ಲೇ ಸಕ್ಕರೆ ಕಾರ್ಖಾನೆಗಳು ಇದ್ದು, ಅವರು ಕೂಡ ಈವರೆಗೂ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಆಲಿಸಿಲ್ಲ
-
ಪ್ರತಿ ಟನ್ ಕಬ್ಬಿಗೆ 3500 ರುಪಾಯಿ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಕಬ್ಬು ಬೆಳೆಗಾರರು ಹಮ್ಮಿ ಕೊಂಡಿದ್ದ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದೆ.
ಇದೀಗ ಈ ಪ್ರತಿಭಟನೆಗೆ ಬೆಳಗಾವಿ ಮಾತ್ರವಲ್ಲದೇ ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ, ದಾವಣ ಗೆರೆ, ಮಂಡ್ಯ ಜಿಲ್ಲೆಯ ರೈತರು ಕೂಡ ಸಾಥ್ ನೀಡಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಹೆದ್ದಾರಿ ಗಳನ್ನು ಬಂದ್ ಮಾಡಲಾಗಿದೆ.
ರೈತರ ಈ ಚಳವಳಿಯು ರಾಜ್ಯವು ಇತ್ತೀಚಿನ ದಿನಗಳಲ್ಲಿ ಕಂಡ ಅತಿದೊಡ್ಡ ಕೃಷಿ ಸಂಘರ್ಷಗಳಲ್ಲಿ ಒಂದಾಗಿ ಬೆಳೆದಿದೆ. ಬಹುತೇಕ ಸಕ್ಕರೆ ಕಾರ್ಖಾನೆಗಳು ಹಾಲಿ-ಮಾಜಿ ಸಚಿವರು, ಶಾಸಕರದ್ದೇ ಇವೆ. ಜಿಲ್ಲೆಯ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳಕರ ಅವರ ಒಡೆತನದಲ್ಲೇ ಸಕ್ಕರೆ ಕಾರ್ಖಾನೆಗಳು ಇದ್ದು, ಅವರು ಕೂಡ ಈವರೆಗೂ ಪ್ರತಿಭಟನಾ ಸ್ಥಳಕ್ಕೆ ಬಂದು ರೈತರ ಸಮಸ್ಯೆಯನ್ನು ಆಲಿಸಿಲ್ಲ.
ಇದನ್ನೂ ಓದಿ: Vishwavani Editorial: ಕಟ್ಟೆಚ್ಚರದ ಅಗತ್ಯವಿದೆ
ಹೀಗಾಗಿ ಈ ಚಳವಳಿಯು ಪರೋಕ್ಷವಾಗಿ ಆಡಳಿತ ವ್ಯವಸ್ಥೆಯ ವಿರುದ್ಧದ ಜನಾಕ್ರೋಶ ವಾಗಿ ಮಾರ್ಪಟ್ಟಿದೆ, ಇದು ಸಿದ್ದರಾಮಯ್ಯ ಸರಕಾರಕ್ಕೆ ಪ್ರಮುಖ ರಾಜಕೀಯ ಸವಾಲಾ ಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ‘ಕಬ್ಬಿಗೆ ಗರಿಷ್ಠ ಚಿಲ್ಲರೆ ಮಾರಾಟ ದರ (ಎಂಆರ್‌ಪಿ) ದರ ಮಾಡುವುದು ಕೇಂದ್ರ ಸರಕಾರವೇ ಹೊರತು ರಾಜ್ಯ ಸರಕಾರವಲ್ಲ’ ಎಂದು ಹೇಳಿದ್ದಾರೆ.
ಆದರೆ ಕೇಂದ್ರ ಸರಕಾರ ನಿಗದಿಪಡಿಸಿದ ನ್ಯಾಯಸಮ್ಮತ ಮತ್ತು ಲಾಭದಾಯಕ ದರ (ಎಫ್ಆರ್‌ಪಿ) ವನ್ನೂ ನೀಡಲು ಕಾರ್ಖಾನೆಗಳು ಹಿಂದೆ ಮುಂದೆ ನೋಡುತ್ತಿವೆ. ಕೇಂದ್ರವು ಶೇ.೧೦.೨೫ರಷ್ಟು ಇಳುವರಿ ದರ ಆಧರಿಸಿ ಎಫ್ ಆರ್‌ಪಿ ನಿಗದಿಪಡಿಸಿದೆ. ಆ ಪ್ರಕಾರ ಒಂದು ವೇಳೆ ಇಳುವರಿ ಪ್ರಮಾಣ ಶೇ.೧ರಷ್ಟು ಹೆಚ್ಚಿದ್ದರೆ ರೂ.346 ಹೆಚ್ಚುವರಿ ನೀಡಬೇಕು.
ಬೆಳಗಾವಿ ಜಿಲ್ಲೆಯಲ್ಲಿ ಬೆಳೆಯುತ್ತಿರುವ ಕಬ್ಬಿನ ಇಳುವರಿ ಪ್ರಮಾಣ ಶೇ.೧೨-ಶೇ.೧೩ ರವರೆಗೂ ಇದೆ. ಈ ಲೆಕ್ಕದಲ್ಲಿ ಕಾರ್ಖಾನೆಗಳು ಹೆಚ್ಚು ದರ ನೀಡಬೇಕು. ಆದರೆ, ಯಾವ ಕಾರ್ಖಾನೆಗಳೂ ನೀಡುತ್ತಿಲ್ಲ. ಇನ್ನೊಂದೆಡೆ ರಾಜ್ಯದ ಬಹುತೇಕ ಕಾರ್ಖಾನೆಗಳು ತೂಕ, ಇಳುವರಿ ದರದಲ್ಲಿ ಮೋಸ ಮಾಡುವುದರ ಜತೆಗೆ ಕಟಾವು, ಸಾಗಣೆ ವೆಚ್ಚವನ್ನು ಹೆಚ್ಚು ಕಡಿತ ಮಾಡುತ್ತವೆ.
ವಿಳಂಬವಾಗಿ ಪಾವತಿ ಮಾಡುತ್ತವೆ ಎಂಬ ಆರೋಪ ಇದೆ. ಹೀಗಾಗಿ ಸಹಕಾರಿ ಕಾರ್ಖಾನೆ ಗಳು ಹೆಚ್ಚಿನ ಸಂಖ್ಯೆಯಲ್ಲಿರುವ, ಉತ್ತಮ ಬೆಲೆ ಜತೆಗೆ ಸಕಾಲದಲ್ಲಿ ಹಣ ಪಾವತಿ ಮಾಡುವ ಮಹಾರಾಷ್ಟ್ರಕ್ಕೆ ರೈತರು ಕಬ್ಬು ಮಾರಾಟ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸ ಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಕೂಡಲೇ ಸರಕಾರ ಮಧ್ಯ ಪ್ರವೇಶಿಸಿ, ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. ಆ ಮೂಲಕ ರೈತರಿಗೆ, ರಾಜ್ಯದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ತಪ್ಪಿಸಬೇಕು.