ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಹಸಿರಾಗಲಿ ಉಸಿರಾಗಲಿ ಕನ್ನಡ

ಇಂದು 70ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷಿಕ ಪ್ರದೇಶ ಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ದಿನವಿದು. ಇದು ಜರುಗಿದ್ದು 1956 ನವೆಂಬರ್ ೧ರಂದು. ಆಗ ನಮ್ಮ ನಾಡು ಕರೆಸಿಕೊಂಡಿದ್ದು ‘ಮೈಸೂರು ರಾಜ್ಯ’ ಎಂಬ ಹೆಸರಿನಿಂದ.

Vishwavani Editorial: ಹಸಿರಾಗಲಿ ಉಸಿರಾಗಲಿ ಕನ್ನಡ

-

Ashok Nayak Ashok Nayak Nov 1, 2025 8:19 AM

ಇಂದು 70ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷಿಕ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವಾಗಿ ಘೋಷಣೆ ಮಾಡಿದ ದಿನವಿದು. ಇದು ಜರುಗಿದ್ದು 1956 ನವೆಂಬರ್ ೧ರಂದು. ಆಗ ನಮ್ಮ ನಾಡು ಕರೆಸಿಕೊಂಡಿದ್ದು ‘ಮೈಸೂರು ರಾಜ್ಯ’ ಎಂಬ ಹೆಸರಿನಿಂದ.

ತರುವಾಯದಲ್ಲಿ, ರಾಜ್ಯದ ಎಲ್ಲ ಭಾಗಗಳ ಜನರ ಭಾವನಾತ್ಮಕ ತೊಡಗಿಸಿಕೊಳ್ಳುವಿಕೆಗೆ ಅನುವು ಮಾಡಿ ಕೊಡಲು ಮತ್ತು ಅವರ ತರ್ಕದ ಮಾನ್ಯತೆಯ ದ್ಯೋತಕವಾಗಿ 1973ರ ನವೆಂಬರ್ ೧ರಂದು ‘ಮೈಸೂರು’ ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು ಎಂಬುದೆಲ್ಲ ಬಹು ಜನರಿಗೆ ಗೊತ್ತಿರುವ ಸಂಗತಿಯೇ.

ಇದನ್ನೂ ಓದಿ:Vishwavani Editorial: ಲೈಂಗಿಕ ದೌರ್ಜನ್ಯಕ್ಕೆ ಕಡಿವಾಣ ಬೀಳಲಿ

ಒಟ್ಟಿನಲ್ಲಿ, ಕನ್ನಡ ನಾಡಿನ ಏಕೀಕರಣಕ್ಕಾಗಿ ದುಡಿದ ಮಹನೀಯರ ತ್ಯಾಗ ಮತ್ತು ಪರಿಶ್ರಮ ಗಳನ್ನು ಸ್ಮರಿಸಿ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆಯ ವಿಷಯದಲ್ಲಿ ಹೊಮ್ಮಿರುವ ಭವ್ಯತೆ ಯನ್ನು ಮೆಲುಕು ಹಾಕಿ ಸಂಭ್ರಮಿಸುವ ದಿನವಿದು. ಹಾಗಂತ ಇದು ಮೈಮರೆಯುವ ಕಾಲಘಟ್ಟವೂ ಅಲ್ಲ. ಕನ್ನಡದ ನೆಲ-ಜಲದ ಸಂರಕ್ಷಣೆ, ಕನ್ನಡಿಗರಿಗೆ ಉದ್ಯೋಗಾವಕಾಶಗಳ ಲಭ್ಯತೆ, ಆಡಳಿತ ಭಾಷೆ ಮತ್ತು ಅನ್ನದ ಭಾಷೆಯಾಗಿ ಕನ್ನಡ ಮುಂತಾದ ಚರ್ಚಾವಿಷಯಗಳಲ್ಲಿನ ನಾಡಿನ ಜನರ ನಿರೀಕ್ಷೆಗಳಿನ್ನೂ ಅಂದುಕೊಂಡಷ್ಟು ಈಡೇರಿಲ್ಲ ಎಂಬ ಕಹಿಸತ್ಯವನ್ನು ನಾವ್ಯಾರೂ ಮರೆಯು ವಂತಿಲ್ಲ.

ಹೀಗಾಗಿ, ಮನೆ, ಮಾರುಕಟ್ಟೆ, ಕಾರ್ಯಕ್ಷೇತ್ರ ಹೀಗೆ ವಿವಿಧ ನೆಲೆಗಳಲ್ಲಿ ಕನ್ನಡತನವನ್ನು ಉಳಿಸಿ ಬೆಳೆಸುವುದಕ್ಕೆ ಸಂಕಲ್ಪಿಸೋಣ. ಆಗ ಮಾತ್ರವೇ, ‘ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು’ ಎಂಬ ಕವಿವಾಣಿ ಸಾರ್ಥಕ್ಯವನ್ನು ಕಂಡೀತು. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾ ಶಯಗಳು...