ಗಂಟೆಗೆ 154.2 ಕೀ.ಮೀ ವೇಗದಲ್ಲಿ ಬೌಲಿಂಗ್ ನಡೆಸಿ ದಾಖಲೆ ಬರೆದ ಅಶೋಕ್ ಶರ್ಮಾ
ಬಲಗೈ ವೇಗದ ಬೌಲರ್ ಆಗಿರುವ ಅಶೋಕ್, ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಈ ಹಿಂದೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ನೆಟ್ ಬೌಲರ್ ಆಗಿದ್ದರು. 2025 ರ ಐಪಿಎಲ್‌ನಲ್ಲಿ 30 ಲಕ್ಷ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದರು. ಆದರೆ ಆಡುವ ಅವಕಾಶ ಸಿಗಲಿಲ್ಲ.
Ashok Sharma -
ಅಹಮದಾಬಾದ್, ಎ.5: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(Ashok Sharma) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ನ ಯುವ ವೇಗಿ ಅಶೋಕ್ ಶರ್ಮಾ(Ashok Sharma) ಗಂಟೆಗೆ 154.2 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿ ಹಾಲಿ ಆವೃತ್ತಿಯ ಐಪಿಎಲ್‌ನ ಅತಿ ವೇಗದ ಎಸೆತ ದಾಖಲಿಸಿ ಸಂಚಲನ ಸೃಷ್ಟಿಸಿದರು. ಗುಜರಾತ್ ಬೌಲಿಂಗ್ ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಈ ದಾಖಲೆ ನಿರ್ಮಾಣವಾಯಿತು.
ಗಮನಾರ್ಹವಾಗಿ, ಹಿಂದಿನ ಎಸೆತದಲ್ಲಿ ಬೆರಳಿಗೆ ಪೆಟ್ಟು ಬಿದ್ದಿದ್ದರೂ ಅಶೋಕ್ ಈ ಋತುವಿನ ಅತ್ಯಂತ ವೇಗದ ಚೆಂಡನ್ನು ಎಸೆದರು. ಡೊನೊವನ್ ಫೆರೀರಾ ಅವರ ಬಲವಾದ ನೇರ ಡ್ರೈವ್ ಅನ್ನು ತಡೆಯಲು ಪ್ರಯತ್ನಿಸಿದಾಗ ಅವರು ಗಾಯಗೊಂಡರು. ನಂತರ ಅವರಿಗೆ ಐಸ್ ಪ್ಯಾಕ್‌ನಿಂದ ಚಿಕಿತ್ಸೆ ನೀಡಬೇಕಾಯಿತು.
IPL 2026 ರ ಅತಿ ವೇಗದ ಎಸೆತಗಳು
ಶೋಕ್ ಶರ್ಮಾ - 154.2 kph
ಆನ್ರಿಚ್ ನಾರ್ಟ್ಜೆ - 150.9
ಕಾರ್ತಿಕ್ ತ್ಯಾಗಿ - 149.7
ಕಾಗಿಸೊ ರಬಾಡ - 149.1
ಐಪಿಎಲ್‌ನಲ್ಲಿ ಭಾರತೀಯರು ಎಸೆದ ಅತಿ ವೇಗದ ಎಸೆತಗಳು
ಉಮ್ರಾನ್ ಮಲಿಕ್ - 2022 ರಲ್ಲಿ SRH ಪರ 157 kph
ಮಯಾಂಕ್ ಯಾದವ್ - 2024 ರಲ್ಲಿ LSG ಪರ 156.7 kph
ಅಶೋಕ್ ಶರ್ಮಾ - 2026 ರಲ್ಲಿ GT ಪರ 154.2 kph
ಬಲಗೈ ವೇಗದ ಬೌಲರ್ ಆಗಿರುವ ಅಶೋಕ್, ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಈ ಹಿಂದೆ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಲ್ಲಿ ನೆಟ್ ಬೌಲರ್ ಆಗಿದ್ದರು. 2025 ರ ಐಪಿಎಲ್‌ನಲ್ಲಿ 30 ಲಕ್ಷ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದರು. ಆದರೆ ಆಡುವ ಅವಕಾಶ ಸಿಗಲಿಲ್ಲ.
Updated IPL 2026 Points Table: ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್
ಇತ್ತೀಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜಸ್ಥಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗ್ರೂಪ್ ಹಂತದಲ್ಲಿ ಅಶೋಕ್ 12.10 ಸರಾಸರಿ ಮತ್ತು 8.84 ಎಕಾನಮಿ ದರದೊಂದಿಗೆ 19 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಕೆಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು.