ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಾಯಾಳು ಶುಭಮನ್‌ ಗಿಲ್‌ ಐಪಿಎಲ್‌ನಿಂದ ಔಟ್‌?

IPL 2026: ಗುಜರಾತ್‌ ತಂಡದ ಮುಂದಿನ ಪಂದ್ಯ ಏಪ್ರಿಲ್ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ. ತಂಡದ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಕೂಡ ಗಿಲ್ ಶೀಘ್ರವಾಗಿ ತಂಡಕ್ಕೆ ಮರಳುವ ಭರವಸೆ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

ಶುಭಮನ್‌ ಗಿಲ್‌ ಗಾಯದ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಗುಜರಾತ್‌ ಟೈಟಾನ್ಸ್‌

Shubman Gill -

Abhilash BC
Abhilash BC Apr 5, 2026 6:19 PM

ಅಹಮದಾಬಾದ್‌, ಎ.5: ಶನಿವಾರ ಅಹಮದಾಬಾದ್‌ನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್(RR vs GT) ವಿರುದ್ಧದ ಐಪಿಎಲ್(IPL 2026) ಪಂದ್ಯಕ್ಕೆ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್(Shubman Gill) ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ರಶೀದ್‌ ಖಾನ್‌ ತಂಡವನ್ನು ಹಂಗಾಮಿಯಾಗಿ ಮುನ್ನಡೆಸಿದ್ದರು. ಗಿಲ್ ಅನುಪಸ್ಥಿತಿಯು ತಂಡಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿತ್ತು. ಸ್ನಾಯು ಸೆಳೆತದಿಂದ ಬಳಲುತ್ತಿರುವ ಗಿಲ್‌ ಗಾಯದ ಬಗ್ಗೆ ರಶೀದ್‌ ಖಾನ್‌ ಅಪ್‌ಡೇಟ್‌ ನೀಡಿದ್ದು, ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.

ಗುಜರಾತ್‌ ತಂಡದ ಮುಂದಿನ ಪಂದ್ಯ ಏಪ್ರಿಲ್ 8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ. ತಂಡದ ಸಹಾಯಕ ಕೋಚ್ ಪಾರ್ಥಿವ್ ಪಟೇಲ್ ಕೂಡ ಗಿಲ್ ಶೀಘ್ರವಾಗಿ ತಂಡಕ್ಕೆ ಮರಳುವ ಭರವಸೆ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.

"ಗಿಲ್‌ಗೆ ಕೆಲವು ದಿನಗಳ ಹಿಂದೆ ಸ್ನಾಯು ಸೆಳೆತವಿತ್ತು. ಮುಂಬರುವ ಪಂದ್ಯಕ್ಕೆ ಅವರು ಫಿಟ್ ಆಗಿದ್ದಾರೆ ಎಂದು ನಾವು ಭಾವಿಸುತ್ತೇವೆ. ಗಾಯ ಅಷ್ಟು ಗಂಭೀರವಾಗಿ ಕಾಣುತ್ತಿಲ್ಲ. ಆದ್ಯಾಗೂ ಗಾಯದ ನಿರ್ವಹಣೆ ನನ್ನ ಶಕ್ತಿ ಅಲ್ಲ, ಸದ್ಯ ಅವರು ಚೆನ್ನಾಗಿದ್ದಾರೆ ಎಂದು ನಾನು ನಿಮಗೆ ಖಂಡಿತವಾಗಿಯೂ ಹೇಳಬಲ್ಲೆ" ಎಂದು ಪಾರ್ಥಿವ್ ಪಟೇಲ್ ಹೇಳಿದರು.

ಇದಕ್ಕೂ ಮೊದಲು, ಗುಜರಾತ್ ಟೈಟಾನ್ಸ್ ತಂಡದ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್, ನಾಯಕ ಶುಭ್‌ಮನ್ ಗಿಲ್ ಅವರನ್ನು ಬ್ಯಾಟ್ಸ್‌ಮನ್ ಮತ್ತು ನಾಯಕನಾಗಿ ಅವರ ಬೆಳವಣಿಗೆಗೆ ಶ್ಲಾಘಿಸಿದರು. ಭಾರತದ ತಾರೆಯ ಚಿಂತನೆಯ ಸ್ಪಷ್ಟತೆ ಮತ್ತು ಆಧುನಿಕ ದಿನದ ಆತ್ಮವಿಶ್ವಾಸವು ಅವರ ಉನ್ನತ ಮಟ್ಟದಲ್ಲಿ ವಿಕಾಸವನ್ನು ರೂಪಿಸಿದೆ ಎಂದು ಹೇಳಿದರು.

ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಧೋನಿ ಕೊನೆಯ ಬಾರಿಗೆ ತಪ್ಪಿಸಿಕೊಂಡದ್ದು ಯಾವಾಗ?

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದಿದ್ದ ರೋಚಕ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡ ಗುಜರಾತ್‌ ಟೈಟಾನ್ಸ್‌ ವಿರುದ್ಧ 6 ರನ್‌ ಅಂತರದ ಗೆಲುವು ಸಾಧಿಸಿತು. ಕೊನೆಯ ಎಸೆತದ ತನಕ ಸಾಗಿದ ಈ ರೋಚಕ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತು.

ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ (55) ಮತ್ತು ವೈಭವ್ ಸೂರ್ಯವಂಶಿ (31) ಪವರ್‌ ಪ್ಲೇನಲ್ಲಿ 70 ರನ್ ಸೇರಿಸಿದರು. ಬಳಿಕ ಧ್ರುವ ಜುರೇಲ್ (75) ಅರ್ಧಶತಕದ ನೆರವು ಪಡೆದ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 210 ರನ್ ಗಳಿಸಿತು. ಕಠಿಣ ಗುರಿ ಬೆನ್ನಟ್ಟಿದ ಗುಜರಾತ್‌ ತಂಡ ಗೆಲುವಿನಂಚಿಗೆ ಬಂದು 8 ವಿಕೆಟ್‌ಗೆ 204 ರನ್‌ ಗಳಿಸಲಷ್ಟೇ ಶಕ್ತವಾಯಿತು.