ಕಪಿಲ್ ಪಡೆಯ ಏಕದಿನ ವಿಶ್ವಕಪ್ ವಿಜಯ ದಿವಸಕ್ಕೆ 43ರ ಸಂಭ್ರಮ
1983 World Cup Win: ಅಂದು ಭಾರತ ವಿಶ್ವಕಪ್ ಆಡಲು ಲಂಡನ್‌ಗೆ ಹೋದಾದ ಕೋಚ್, ವೈದ್ಯ, ಫಿಸಿಯೋ ಕೂಡ ತಂಡದೊಂದಿಗೆ ಇರಲಿಲ್ಲ. ಆಗ ಮೊಹಿಂದರ್ ಅಮರನಾಥ್ ಅವರೇ ತಂಡದ ಕೋಚ್ ಆದರು. ಭಾರತವೊಂದು ಲೆಕ್ಕದ ಭರ್ತಿಯ ತಂಡ, ಅದು ಗೆದ್ದರೆ ನಾನು ಬರೆದುದನ್ನೇ ನುಂಗುತ್ತೇನೆ ಎಂದಿದ್ದ ವಿಸ್ಡನ್ ಸಂಪಾದಕ ಡೇವಿಡ್ ಫ್ರಿತ್‌ಕೊನೆಗೂ ತಮ್ಮ ಮಾತು ಉಳಿಸಿಕೊಂಡರು.
1983 World Cup -
ಬೆಂಗಳೂರು, ಜೂ.25: ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದ ಮಹಾ ವಿಜಯಕ್ಕೆ(1983 World Cup) ಗುರುವಾರ 43ನೇ ವರ್ಷದ ಸಂಭ್ರಮ.1983ರ ಜೂ. 25ರಂದು ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್, ಭಯಾನಕ ವೆಸ್ಟ್ ಇಂಡೀಸ್ ತಂಡವನ್ನು ಫೈನಲ್‌ನಲ್ಲಿ 43 ರನ್ನುಗಳಿಂದ ಉರುಳಿಸಿದ “ಕಪಿಲ್ ಡೆವಿಲ್ಸ್’ ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು. ಕಪಿಲ್ ದೇವ್(Kapil Dev) ಲಂಡನ್‌ನ ಐಕಾನಿಕ್ ಲಾರ್ಡ್ಸ್ ಸ್ಟೇಡಿಯಂನಲ್ಲಿ ಟ್ರೋಫಿ ಸ್ವೀಕರಿಸುವ ಫೋಟೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಅಂದಿನ ಸ್ಮರಣೀಯ ದಿನದ ನೆನಪನ್ನು ಮತ್ತೆ ಮೆಲುಕು ಹಾಕಿದೆ.
ಭಾರತ ಲೀಗ್ ಹಂತದ ಮೊದಲ ಪಂದ್ಯದಲ್ಲೇ ಬಲಿಷ್ಠ ವಿಂಡೀಸ್ ಪಡೆಯನ್ನು 34 ರನ್ನುಗಳಿಂದ ಉರುಳಿಸಿದಾಗಲೇ ಕಪಿಲ್ ಪಡೆ ಅಸಾಮಾನ್ಯ ಸಾಹಸವೊಂದಕ್ಕೆ ಮುನ್ನುಡಿ ಬರೆದಿತ್ತು. ಅದು ವಿಂಡೀಸಿಗೆ ವಿಶ್ವಕಪ್‌ನಲ್ಲಿ ಎದುರಾದ ಪ್ರಪ್ರಥಮ ಸೋಲು ಕೂಡ ಇದಾಗಿತ್ತು.
3 ವರ್ಷದ ಬಳಿಕ ಕಣಕ್ಕಿಳಿದ ನೇಮರ್; ಸ್ಕಾಟ್ಲೆಂಡ್ ಮಣಿಸಿ ನಾಕೌಟ್‌ಗೆ ಲಗ್ಗೆಯಿಟ್ಟ ಬ್ರೆಜಿಲ್
ಅಂದು ಭಾರತ ವಿಶ್ವಕಪ್ ಆಡಲು ಲಂಡನ್‌ಗೆ ಹೋದಾದ ಕೋಚ್, ವೈದ್ಯ, ಫಿಸಿಯೋ ಕೂಡ ತಂಡದೊಂದಿಗೆ ಇರಲಿಲ್ಲ. ಆಗ ಮೊಹಿಂದರ್ ಅಮರನಾಥ್ ಅವರೇ ತಂಡದ ಕೋಚ್ ಆದರು. ಭಾರತವೊಂದು ಲೆಕ್ಕದ ಭರ್ತಿಯ ತಂಡ, ಅದು ಗೆದ್ದರೆ ನಾನು ಬರೆದುದನ್ನೇ ನುಂಗುತ್ತೇನೆ ಎಂದಿದ್ದ ವಿಸ್ಡನ್ ಸಂಪಾದಕ ಡೇವಿಡ್ ಫ್ರಿತ್‌ಕೊನೆಗೂ ತಮ್ಮ ಮಾತು ಉಳಿಸಿಕೊಂಡರು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 183 ರನ್ಗಳಿಗೆ ಆಲೌಟ್ ಆಯಿತು. ವಿಂಡೀಸ್ ಆಗಲೇ ಹ್ಯಾಟ್ರಿಕ್ ಸಾಧಿಸಿದ ಉತ್ಸಾಹದಲ್ಲಿತ್ತು. ಆದರೆ ಲಾರ್ಡ್ಸ್‌ನಲ್ಲಿ ಸಂಭವಿಸಿದ್ದೇ ಬೇರೆ ಸಣ್ಣ ಮೊತ್ತವನ್ನು ಬೆನ್ನಟ್ಟಿದ ವಿಂಡೀಸ್ಗೆ ಛಲ ಬಿಡದ ಮದನ್ಲಾಲ್ ಮತ್ತು ಮೊಹಿಂದರ್ ಅಮರ್ನಾಥ್(Mohinder Amarnath) ಉತ್ಕೃಷ್ಟ ಮಟ್ಟದ ಬೌಲಿಂಗ್ ನಡೆಸಿ ಬಲವಾದ ಏಟು ನೀಡಿದರು. ತಲಾ 3 ವಿಕೆಟ್ ಕೆಡವಿದರು. ಅಂತಿಮವಾಗಿ ಕೆರೆಬಿಯನ್ನರನ್ನು 140 ರನ್ಗೆ ಆಲೌಟ್ ಮಾಡುವ ಮೂಲಕ 43 ರನ್ಗಳಿಂದ ಗೆಲುವು ಸಾಧಿಸಿ ದೇಶಕ್ಕೆ ಮೊದಲ ಏಕದಿನ ವಿಶ್ವಕಪ್ ತಂದುಕೊಟ್ಟರು. ನಾಯಕ ಕಪಿಲ್ದೇವ್ ಅವರು ಲಾರ್ಡ್ಸ್‌ನಲ್ಲಿ ಕಪ್ ಎತ್ತಿ ಭಾರತದ ವಿಜಯ ಪತಾಕೆ ಹಾರಿಸಿದ್ದರು.
The victory that inspired generations ✨#OTD in 1983, Kapil Dev and his men defended 183 against the West Indies at Lord's to clinch #TeamIndia's maiden World Cup title 🏆 pic.twitter.com/YPWemFFPYY
— BCCI (@BCCI) June 25, 2026
ಸೆಮಿಫೈನಲ್‌ನಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ 5 ವಿಕೆಟ್ 17 ರನ್ನಿಗೆ ಬಿದ್ದಾಗ ಕಪಿಲ್ ಸುಂಟರಗಾಳಿಯಂಥ ಬೀಸುಗೆಯಲ್ಲಿ ಅಜೇಯ 175 ರನ್ ಬಾರಿಸಿದ್ದರು. ಇದು ಭಾರತೀಯ ಏಕದಿನ ಚರಿತ್ರೆಯ ಮೊದಲ ಶತಕವಾದರೆ, ಆ ಕಾಲಕ್ಕೆ ವಿಶ್ವದಾಖಲೆಯೂ ಆಗಿತ್ತು. 16 ಬೌಂಡರಿ ಮತ್ತು 6 ಸಿಕ್ಸರ್‌ಗಳಿಂದ ಕಪಿಲ್ ಮಿಂಚಿದ್ದರು. ಈ ಸಿಕ್ಸರ್‌ಗಳಲ್ಲಿ ಒಂದು ಸಿಕ್ಸರ್ ನೆವಿಲ್ ಕ್ರಿಕೆಟ್ ಕ್ರೀಡಾಂಗಣದ ಮೇಲ್ಛಾವಣಿ ಮೇಲೆ ಬಿದ್ದಿತ್ತು. ಆ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಕಪಿಲ್ ಆಗಿದ್ದರು. ಕಪಿಲ್ ಆಡಿದ ಆಲ್‌ರೌಂಡ್ ಆಟದಿಂದಾಗಿ ಜಿಂಬಾಬ್ವೆ ತಂಡವನ್ನು 235 ರನ್ನಿಗೆ ಕಟ್ಟಿಹಾಕಲು ಸಾಧ್ಯವಾಗಿತ್ತು.