3 ವರ್ಷದ ಬಳಿಕ ಕಣಕ್ಕಿಳಿದ ನೇಮರ್; ಸ್ಕಾಟ್ಲೆಂಡ್ ಮಣಿಸಿ ನಾಕೌಟ್‌ಗೆ ಲಗ್ಗೆಯಿಟ್ಟ ಬ್ರೆಜಿಲ್
FIFA World Cup 2026: 'ಸಿ' ಗುಂಪಿನಲ್ಲಿ ಬ್ರೆಜಿಲ್ ಅಗ್ರಸ್ಥಾನದೊಂದಿಗೆ ನಾಕೌಟ್‌ಗೆ ಲಗ್ಗೆ ಇಟ್ಟಿತು. ಈ ಗುಂಪಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶದೊಂದಿಗೆ ಒಟ್ಟು ಏಳು ಅಂಕ ಗಳಿಸಿದೆ. ಸೋಲು ಕಂಡ ಸ್ಕಾಟ್ಲೆಂಡ್ ತನ್ನ ಅವಕಾಶಕ್ಕಾಗಿ ಇತರೆ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ.
Vinicius Junior -
ಫ್ಲೊರಿಡಾ, ಜೂ.25: ವಿನಿಷಿಯಸ್ ಜೂನಿಯರ್( Vinicius Junior ) ಅವರ ಅವಳಿ ಗೋಲಿನ ನೆರವಿನಿಂದ ಬ್ರೆಜಿಲ್ ತಂಡ ಸ್ಕಾಟ್ಲೆಂಡ್ ವಿರುದ್ಧ 3-0 ಅಂತರದ ಗೆಲುವು ಸಾಧಿಸಿ ಫಿಫಾ ವಿಶ್ವಕಪ್(FIFA World Cup 2026) ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿತು. ಬುಧವಾರ ತಡರಾತ್ರಿ ನಡೆದ ಈ ಪಂದ್ಯದಲ್ಲಿ ಮೊದಲ ಬಾರಿಗೆ ಆಡಲಿಳಿದ ನೇಮರ್ ಜೂನಿಯರ್ ಪಂದ್ಯದ ಪ್ರಮುಖ ಹೈಲೆಟ್ಸ್ ಆಗಿದ್ದರು. ಆದರೆ ಅವರು ಗೋಲು ಬಾರಿಸುವಲ್ಲಿ ವಿಫಲರಾದರು.
ಬಲಗಾಲಿನ ಸ್ನಾಯು ಸೆಳೆತದ ಗಾಯದಿಂದ ಬಳುತ್ತಿದ್ದ ನೇಮರ್ ಮೊದಲ ಎರಡು ಪಂದ್ಯಗಳಲ್ಲಿ ಆಡಿರಲಿಲ್ಲ. ಮೂರನೇ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಕೋಚ್ ಕಾರ್ಲೊ ಅನ್ಸೆಲೋಟಿ ಮಾಹಿತಿ ನೀಡಿದ್ದರು. ಹೀಗಾಗಿ ಪಂದ್ಯದ ನಿರೀಕ್ಷೆ ದೊಡ್ಡ ಮಟ್ಟದಲ್ಲಿತ್ತು. ದ್ವಿತಿಯಾರ್ಧದ ಬಹುತೇಕ ಸಮಯದವರೆಗೂ ನೇಮರ್ ಕಣಕ್ಕಿಳಿಯಲಿಲ್ಲ.
ಪಂದ್ಯದ 76ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ ನೇಮರ್ ಅಭಿಮಾನಿಗಳ ಬಹುದಿನಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. 2023ರ ಬಳಿಕ ಮೊದಲ ಬಾರಿ ಅವರು ಬ್ರೆಜಿಲ್ ಪರ ಮೈದಾನಕ್ಕಿಳಿದರು.
ವಿನಿಷಿಯಸ್ ಜೂನಿಯರ್ ಎರಡು ಗೋಲುಗಳನ್ನು ಬಾರಿಸಿ ಬ್ರೆಜಿಲ್ ಗೆಲುವಿನ ರೂವಾರಿಯೆನಿಸಿದರು. ಮೊದಲಾರ್ಧದಲ್ಲೇ (7 ಹಾಗೂ 45+3) ಎರಡು ಗೋಲು ಗಳಿಸಿದ ವಿನಿಷಿಯಸ್ ಕಾಲ್ಚಳಕ ಪ್ರದರ್ಶಿಸಿದರು. ಬ್ರೆಜಿಲ್ ಪರ ಫಿಫಾ ವಿಶ್ವಕಪ್ ಆವೃತ್ತಿಯೊಂದರಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಗೋಲು ಗಳಿಸಿದ ಆಟಗಾರ ಎಂಬ ಖ್ಯಾತಿಗೆ ವಿನಿಷಿಯಸ್ ಪಾತ್ರರಾದರು. ಈ ಮೊದಲು ಮೊರಕ್ಕೊ ಹಾಗೂ ಹೈಟಿ ವಿರುದ್ಧದ ಪಂದ್ಯಗಳಲ್ಲೂ ವಿನಿಷಿಯಸ್ ಗೋಲು ಗಳಿಸಿದ್ದರು. ಇದಾದ ಬಳಿಕ 60ನೇ ನಿಮಿಷದಲ್ಲಿ ಮ್ಯಾಥ್ಯೂಸ್ ಕುನ್ಹಾ ಮತ್ತೊಂದು ಗೋಲು ಬಾರಿಸಿ ಬ್ರೆಜಿಲ್ ಗೆಲುವನ್ನು ಸಾರಿದರು.
ಪಂತ್-ಕುಲ್ದೀಪ್ ಟ್ರೇಡ್ ಡೀಲ್ ಬಗ್ಗೆ ಪಾರ್ಥ್ ಜಿಂದಾಲ್ ಪೋಸ್ಟ್‌ಗೆ ಡೇವಿಡ್ ವಾರ್ನರ್ ಅಚ್ಚರಿ ಪ್ರತಿಕ್ರಿಯೆ!
'ಸಿ' ಗುಂಪಿನಲ್ಲಿ ಬ್ರೆಜಿಲ್ ಅಗ್ರಸ್ಥಾನದೊಂದಿಗೆ ನಾಕೌಟ್‌ಗೆ ಲಗ್ಗೆ ಇಟ್ಟಿತು. ಈ ಗುಂಪಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಡ್ರಾ ಫಲಿತಾಂಶದೊಂದಿಗೆ ಒಟ್ಟು ಏಳು ಅಂಕ ಗಳಿಸಿದೆ. ಸೋಲು ಕಂಡ ಸ್ಕಾಟ್ಲೆಂಡ್ ತನ್ನ ಅವಕಾಶಕ್ಕಾಗಿ ಇತರೆ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಿದೆ. ಫಿಫಾ ನಿಯಮದ ಪ್ರಕಾರ 24 ತಂಡಗಳ ಹೊರತಾಗಿ ಉತ್ತಮ ಸಾಧನೆ ಮಾಡಿದ ಇತರೆ ಎಂಟು ತಂಡಗಳು ನಾಕೌಟ್‌ಗೆ ಅವಕಾಶ ಪಡೆಯುತ್ತವೆ.