ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನ ಹೆಸರಿಸಿದ ಎಬಿ ಡಿವಿಲಿಯರ್ಸ್

AB De Villiers: 2008ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಎಬಿ ಡಿ ವಿಲಿಯರ್ಸ್‌ ಮೂರು ವರ್ಷಗಳ ಕಾಲ ಇದೇ ಫ್ರಾಂಚೈಸಿ ಪರ ಆಡಿದ್ದರು. ನಂತರ 2011ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗುವ ಮೂಲಕ 2021ರ ತನಕ ಇದೇ ತಂಡದ ಪರ ಆಡುವ ಮೂಲಕ ದಿಗ್ಗಜರಾಗಿದ್ದಾರೆ.

ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರನ ಹೆಸರಿಸಿದ ಎಬಿ ಡಿವಿಲಿಯರ್ಸ್

File photo of AB de Villiers with RCB team in IPL -

Abhilash BC
Abhilash BC Mar 17, 2026 12:23 PM

ನವದೆಹಲಿ, ಮಾ.17: ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಯಾರು ಎಂಬ ಆ ಪ್ರಶ್ನೆಗೆ ಎಬಿ ಡಿವಿಲಿಯರ್ಸ್(AB De Villiers) ಉತ್ತರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಈ ಮಹಾನ್ ಆಟಗಾರ ಎಬಿಡಿ ಹಲವು ಟಿ20 ಲೀಗ್‌ಗಳಲ್ಲಿ ಮತ್ತು ಎಲ್ಲಾ ಪ್ರಮುಖ ಕ್ರಿಕೆಟ್ ರಾಷ್ಟ್ರಗಳಲ್ಲಿ ಆಡಿದ್ದಾರೆ. ಅವರು ಕ್ರಿಸ್ ಗೇಲ್ ಮತ್ತು ವಿರಾಟ್ ಕೊಹ್ಲಿ(Virat Kohli) ಒಳಗೊಂಡ ಲೆಜೆಂಡರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು. ವಿಲಿಯರ್ಸ್‌ ಪ್ರಕಾರ ಜಸ್‌ಪ್ರೀತ್ ಬುಮ್ರಾ(Jasprit Bumrah) ಸಾರ್ವಕಾಲಿಕ ಶ್ರೇಷ್ಠ ಟಿ20 ಆಟಗಾರ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಬಿಡಿ, ಬುಮ್ರಾ ಅವರು ಅತ್ಯುತ್ತಮ ಟಿ20 ಆಟಗಾರ. ಅವರ ಸ್ಥಿರತೆಯನ್ನು ಮೆಚ್ಚಲೇ ಬೇಕು. 20 ಓವರ್‌ಗಳ ಯಾವುದೇ ಹಂತದಲ್ಲಿ ಬೌಲಿಂಗ್ ಮಾಡುವ ಮತ್ತು ಒತ್ತಡದಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಅವರಿಗಿದೆ. ಅದು ಹೊಸ ಚೆಂಡು ಅಥವಾ ಹಳೆಯ ಚೆಂಡು ಆಗಿದ್ದರು ಅವರು ಹಿಡಿತ ಸಾಧಿಸಬಲ್ಲರು" ಎಂದು ಎಬಿಡಿ ಹೇಳಿದರು.

ವಿಲಿಯರ್ಸ್ ಅವರು ಸ್ಟಾರ್‌ ಆಟಗಾರರನ್ನು ಒಳಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಾರ್ವಕಾಲಿಕ ಪ್ಲೇಯಿಂಗ್‌ XI ಅನ್ನು ಪ್ರಕಟಿಸಿದ್ದಾರೆ. ತಮ್ಮ ಆರ್‌ಸಿಬಿ ಮಾಜಿ ಸಹ ಆಟಗಾರ ವಿರಾಟ್‌ ಕೊಹ್ಲಿಗೂ ಸ್ಥಾನವನ್ನು ನೀಡಿದ್ದರೆ, ಚೆನ್ನೈ ಸೂಪರ್‌ ಕಿಂಗ್ಸ್‌ ದಿಗ್ಗಜ ಎಂಎಸ್‌ ಧೋನಿಗೆ ನಾಯಕತ್ವವನ್ನು ನೀಡಿದ್ದಾರೆ. ಜೊತೆಗೆ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆರಿಸಿದ್ದಾರೆ.

2008ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ ಪರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಎಬಿ ಡಿ ವಿಲಿಯರ್ಸ್‌ ಮೂರು ವರ್ಷಗಳ ಕಾಲ ಇದೇ ಫ್ರಾಂಚೈಸಿ ಪರ ಆಡಿದ್ದರು. ನಂತರ 2011ರಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗುವ ಮೂಲಕ 2021ರ ತನಕ ಇದೇ ತಂಡದ ಪರ ಆಡುವ ಮೂಲಕ ದಿಗ್ಗಜರಾಗಿದ್ದಾರೆ. ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 5162 ರನ್‌ಗಳನ್ನು ಕಲೆ ಹಾಕಿದ್ದಾರೆ. ಇವರು ಇದೀಗ ಐಪಿಎಲ್‌ ಟೂರ್ನಿಯ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್‌ XI ಆರಿಸಿದ್ದಾರೆ.

ಎಬಿಡಿ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್‌ XI: ರೋಹಿತ್‌ ಶರ್ಮಾ, ಮ್ಯಾಥ್ಯೂ ಹೇಡನ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌, ಎಬಿ ಡಿವಿಲಿಯರ್ಸ್‌, ಹಾರ್ದಿಕ್‌ ಪಾಂಡ್ಯ, ಎಂಎಸ್‌ ಧೋನಿ (ನಾಯಕ, ವಿ.ಕೀ),ಡೇನಿಯಲ್‌ ವೆಟ್ಟೋರಿ, ಜಸ್‌ಪ್ರೀತ್‌ ಬುಮ್ರಾ, ಲಸಿತ್‌ ಮಾಲಿಂಗ ಹಾಗೂ ಯುಜ್ವೇಂದ್ರ ಚಹಲ್‌.