Team India's lead sponsorship: ಟೀಮ್ ಇಂಡಿಯಾ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನ; ಸೆ.16 ಅಂತಿಮ ದಿನ
ದೇಶದ ಅತಿದೊಡ್ಡ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ‘ಡ್ರೀಮ್ 11’ ಕಂಪನಿ 2023ರ ಜುಲೈನಲ್ಲಿ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಹೀಗಾಗಿ, ಭಾರತ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳ ಆಟಗಾರರ ಜೆರ್ಸಿ ಮೇಲೆ ‘ಡ್ರೀಮ್ 11’ ಲೋಗೊ ಮುದ್ರಿಸಲಾಗಿತ್ತು. ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಕೆಲ ಫ್ರ್ಯಾಂಚೈಸಿಗೂ ಪ್ರಾಯೋಜಕತ್ವ ನೀಡಿತ್ತು.

-

ನವದೆಹಲಿ: 'ಡ್ರೀಮ್ 11' ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿಯು ತನ್ನ ಒಪ್ಪಂದದಿಂದ ಹಿಂದೆ ಸರಿದ ಬೆನ್ನಲ್ಲೇ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಪ್ರಾಯೋಜಕತ್ವಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದ್ದು, ಹಕ್ಕುಗಳಿಗಾಗಿ ಪ್ರಸಿದ್ಧ ಸಂಸ್ಥೆಗಳಿಂದ ಬಿಡ್‌ಗಳನ್ನು(BCCI invites bids for lead sponsor) ಆಹ್ವಾನಿಸಿದೆ. ಇದೇ ವೇಳೆ ಕ್ರಿಪ್ಟೋ ಮತ್ತು ಆನ್‌ಲೈನ್ ಹಣದ ಗೇಮಿಂಗ್ ಸಂಸ್ಥೆಗಳು ಲೀಡ್ ಪ್ರಾಯೋಜಕತ್ವಕ್ಕೆ ಅರ್ಜಿ ಸಲ್ಲಿಸುವುದನ್ನು ಬಿಸಿಸಿಐ ನಿಷೇಧಿಸಿದೆ. ಬಿಡ್‌ಗಳನ್ನು ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದೆ.
ಆನ್‌ಲೈನ್ ಜೂಜಾಟದ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ತನ್ನ ಗೇಮಿಂಗ್ ಚಟುವಟಿಕೆಗಳನ್ನು ನಿಲ್ಲಿಸಿರುವ ‘ಡ್ರೀಮ್ 11’ ಬಿಸಿಸಿಐ ಜೊತೆ ಮಾಡಿಕೊಂಡಿದ್ದ ₹381 ಕೋಟಿ ಮೌಲ್ಯದ ಒಪ್ಪಂದವನ್ನೂ ಮುರಿದು ಬಿದ್ದಿತ್ತು.
ದೇಶದ ಅತಿದೊಡ್ಡ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ‘ಡ್ರೀಮ್ 11’ ಕಂಪನಿ 2023ರ ಜುಲೈನಲ್ಲಿ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿತ್ತು. ಹೀಗಾಗಿ, ಭಾರತ ಪುರುಷ ಮತ್ತು ಮಹಿಳಾ ರಾಷ್ಟ್ರೀಯ ತಂಡಗಳ ಆಟಗಾರರ ಜೆರ್ಸಿ ಮೇಲೆ ‘ಡ್ರೀಮ್ 11’ ಲೋಗೊ ಮುದ್ರಿಸಲಾಗಿತ್ತು. ಅಲ್ಲದೆ, ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಕೆಲ ಫ್ರ್ಯಾಂಚೈಸಿಗೂ ಪ್ರಾಯೋಜಕತ್ವ ನೀಡಿತ್ತು.
ಸೆಪ್ಟೆಂಬರ್ 9 ರಿಂದ ಪ್ರಾರಂಭವಾಗುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಭಾರತೀಯ ಪುರುಷರ ಕ್ರಿಕೆಟ್ ತಂಡವು ಪ್ರಮುಖ ಪ್ರಾಯೋಜಕರಿಲ್ಲದೆ ಆಡಲಿದೆ. ಸೆಪ್ಟೆಂಬರ್ ಮಧ್ಯದಲ್ಲಿ ಹೊಸ ಪ್ರಾಯೋಜಕರ ಆಯ್ಕೆಯಾಗುವ ಸಾಧ್ಯತೆ ಇದೆ. ಏಕೆಂದರೆ ಸೆ.30 ರಿಂದ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ.
ಮೂಲಗಳ ಪ್ರಕಾರ ಟೊಯೋಟಾ ಮೋಟಾರ್ ಕಾರ್ಪೊರೇಷನ್(Toyota Motors) ಸೇರಿದಂತೆ ಎರಡು ಕಂಪನಿಗಳು ಪ್ರಾಯೋಜಕರಾಗಲು ಆಸಕ್ತಿ ತೋರಿಸಿವೆ ಎಂದು ತಿಳಿದುಬಂದಿದೆ. ಟೊಯೋಟಾ ಕಂಪೆನಿ ಪ್ರಸಕ್ತ ಇಂಗ್ಲೆಂಡ್ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕ ಹೊಂದಿದೆ. ಈ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಜೆರ್ಸಿ ಪ್ರಾಯೋಜಕತ್ವವನ್ನೂ ಹೊಂದಿತ್ತು.
ಇದನ್ನೂ ಓದಿ Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ಕ್ಯಾಚ್ ಹಿಡಿದ ಟಾಪ್-5 ಆಟಗಾರರು
ಬಿಸಿಸಿಐ ಷರತ್ತುಗಳು
ಭಾರತದಲ್ಲಿ ಅಥವಾ ಜಗತ್ತಿನ ಎಲ್ಲಿಯೂ ಆನ್‌ಲೈನ್ ಹಣದ ಗೇಮಿಂಗ್, ಬೆಟ್ಟಿಂಗ್, ಜೂಜಿನ ಸೇವೆಗಳು ಅಥವಾ ಅಂತಹುದೇ ಸೇವೆಗಳಲ್ಲಿ ತೊಡಗಿಸಿಕೊಂಡಿರಬಾರದು.
ಭಾರತದಲ್ಲಿ ಯಾವುದೇ ವ್ಯಕ್ತಿಗೆ ಅಂತಹ ಸೇವೆಗಳನ್ನು ಒದಗಿಸಬಾರದು.
ಭಾರತದಲ್ಲಿ ಬೆಟ್ಟಿಂಗ್ ಅಥವಾ ಜೂಜಾಟ ಸೇವೆಗಳಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯಲ್ಲಿ ಯಾವುದೇ ಹೂಡಿಕೆ ಅಥವಾ ಮಾಲೀಕತ್ವದ ಹಿತಾಸಕ್ತಿ ಹೊಂದಿರಬಾರದು.
ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ, 2025 ರ ಅಡಿಯಲ್ಲಿ ನಿಷೇಧಿಸಲಾದ ಚಟುವಟಿಕೆಗಳಲ್ಲಿ ತೊಡಗಿರುವ ಯಾವುದೇ ಬಿಡ್ಡರ್‌ಗಳು (ಅಥವಾ ಅವರ ಗುಂಪು ಕಂಪನಿಗಳು) ಬಿಡ್ ಸಲ್ಲಿಸಲು ಅನುಮತಿಸಲಾಗುವುದಿಲ್ಲ.
ಕ್ರಿಪ್ಟೋ ವ್ಯಾಪಾರ, ಕ್ರಿಪ್ಟೋ ವಿನಿಮಯ, ಕ್ರಿಪ್ಟೋ ಟೋಕನ್‌ಗಳು ಅಥವಾ ಇದೇ ರೀತಿಯ ಯಾವುದೇ ವ್ಯವಹಾರಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ತೊಡಗಿಸಿಕೊಂಡಿರಬಾರದು.