ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂದಿನ 10 ವರ್ಷಗಳ ಕಾಲ ರೋಹಿತ್‌ ಶರ್ಮಾ ಐಪಿಎಲ್‌ ಆಡಬೇಕೆಂದ ಖಲೀಲ್‌ ಅಹ್ಮದ್‌!

ಭಾರತ ಏಕದಿನ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವೇಗದ ಬೌಲರ್‌ ಖಲೀಲ್‌ ಅಹ್ಮದ್‌ ಶ್ಲಾಘಿಸಿದ್ದಾರೆ. ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ಮುಂದಿನ 10 ವರ್ಷಗಳ ಕಾಲ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಬೇಕೆಂದು ಆಗ್ರಹಿಸಿದ್ದಾರೆ.

10 ವರ್ಷ ರೋಹಿತ್‌ ಶರ್ಮಾ ಐಪಿಎಲ್‌ ಆಡಬೇಕು: ಖಲೀಲ್‌ ಅಹ್ಮದ್‌!

ರೋಹಿತ್‌ ಶರ್ಮಾರನ್ನು ಶ್ಲಾಘಿಸಿದ ಖಲೀಲ್‌ ಅಹ್ಮದ್‌. -

Profile Ramesh Kote Sep 2, 2025 6:53 PM

ನವದೆಹಲಿ: ಭಾರತ ಏಕದಿನ ತಂಡದ ನಾಯಕ ಹಾಗೂ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ (Rohit Sharma) ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ವೇಗದ ಬೌಲರ್‌ ಖಲೀಲ್‌ ಅಹ್ಮದ್‌ (Khaleel Ahmed) ಶ್ಲಾಘಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ ಮುಂದಿನ 10 ವರ್ಷಗಳ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಆಡಬೇಕು. ಆ ಮೂಲಕ ಅವರು ಭಾರತೀಯ ಕ್ರಿಕೆಟ್‌ ಮೌಲ್ಯವನ್ನು ತಂದುಕೊಡಬೇಕೆಂದು ಎಡಗೈ ವೇಗಿ ಆಗ್ರಹಿಸಿದ್ದಾರೆ. 2018ರಲ್ಲಿ ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಖಲೀಲ್‌ ಅಹ್ಮದ್‌ ಅವರು ಏಷ್ಯಾ ಕಪ್‌ ಟೂರ್ನಿಯಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಅವರು ಭಾರತ ತಂಡಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ.

ರೋಹಿತ್‌ ಶರ್ಮಾ ಅವರು ಈಗಾಗಲೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇದೀಗ ಅವರು 50 ಓವರ್‌ಗಳ ಸ್ವರೂಪದಲ್ಲಿ ಮಾತ್ರ ಮುಂದುವರಿದಿದ್ದಾರೆ. ಅವರು 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಗುರಿಯನ್ನು ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಗೆದ್ದಿತ್ತು. ನಂತರ ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಕೂಡ ಭಾರತ ಹಿಟ್‌ಮ್ಯಾನ್‌ ನಾಯಕತ್ವದಲ್ಲಿ ಗೆದ್ದಿತ್ತು.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಆಡುವುದು ಅನುಮಾನ: ಇರ್ಫಾನ್‌ ಪಠಾಣ್‌!

ರೋಹಿತ್‌ ಶರ್ಮಾ 10 ವರ್ಷ ಐಪಿಎಲ್‌ ಆಡಬೇಕು: ಖಲೀಲ್‌ ಅಹ್ಮದ್‌

ರೆವ್‌ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿದ ಖಲೀಲ್‌ ಅಹ್ಮದ್‌, "ರೋಹಿತ್‌ ಶರ್ಮಾ ಅವರು ಮುಂದಿನ 10 ವರ್ಷಗಳ ಕಾಲ ಐಪಿಎಲ್‌ ಆಡಬೇಕೆಂದು ನಾನು ಭಾವಿಸುತ್ತೇನೆ. ಇದು ಭಾರತೀಯ ಕ್ರಿಕೆಟ್‌ ಪಾಲಿಗೆ ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. 2019ರಲ್ಲಿ ನಾವು ರಾಜ್‌ಕೋಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಸರಣಿಯನ್ನು ಆಡಿದ್ದೆವು. ಈ ಪಂದ್ಯ ನನ್ನ ಪಾಲಿಗೆ ಉತ್ತಮವಾಗಿರಲಿಲ್ಲ ಹಾಗೂ ನಾನು ಒಂದು ವಿಕೆಟ್‌ ಪಡೆದಿದ್ದೆ. ಆದರೂ ರೋಹಿತ್‌ ಶರ್ಮಾ ಅವರು ಡ್ರೆಸ್ಸಿಂಗ್‌ ರೂಂನಲ್ಲಿ ವೈಯಕ್ತಿಕವಾಗಿ ನನ್ನ ಬಳಿ ಮಾತನಾಡಿದ್ದರು," ಎಂದು ಅವರು ತಿಳಿಸಿದ್ದಾರೆ.

ನನ್ನ ಸಾಮರ್ಥ್ಯವನ್ನು ಮನವರಿಕೆ ಮಾಡಿಕೊಟ್ಟಿದ್ದರು

"ಅಂದು ತಂಡ ಮೈದಾನವನ್ನು ತೊರೆಯುತ್ತಿತ್ತು. ಆಗ ನನ್ನ ಬಳಿ ಮುಖಾಮುಖಿ ಕುಳಿತಿದ್ದ ರೋಹಿತ್‌ ಶರ್ಮಾ ನಾನು ನಿಮಗೆ ಏನು ಮಾಡಬೇಕೆಂದು ಕೇಳಿದ್ದರು. ನನ್ನ ಸಾಮರ್ಥ್ಯದ ಬಗ್ಗೆ ನನಗೆ ಏನು ಗೊತ್ತಿಲ್ಲ ಎಂದು ಅಂದು ಅವರು ನನಗೆ ಮನವರಿಕೆ ಮಾಡಿದ್ದರು. ನಾವು ಮೈದಾನವನ್ನು ಬಿಟ್ಟು ಹೋಗುತ್ತಿದ್ದೆವು, ಈ ವೇಳೆ ಅಭಿಮಾನಿಗಳು ರೋಹಿತ್‌ ಭಾಯ್‌ ಎಂದು ಕೂಗುತ್ತಿದ್ದರು. ಈ ವೇಳೆ ನಿಮ್ಮ ಹೆಸರನ್ನು ಕೂಡ ಅಭಿಮಾನಿಗಳು ಕೂಗುವಂತಾಗಬೇಕು. ಇದು ನಿಮಗೂ ಕೂಡ ನಡೆಯಬೇಕೆಂದು ನಾನು ಬಯಸುತ್ತೇನೆ. ನೀವು ಸದಾ ಸಕಾರಾತ್ಮಕವಾಗಿ ಇರಬೇಕು," ಎಂದು ರೋಹಿತ್‌ ಶರ್ಮಾ ಹೇಳಿದ್ದ ಮಾತನ್ನು ಖಲೀಲ್‌ ಅಹ್ಮದ್‌ ನೆನಪಿಸಿಕೊಂಡಿದ್ದರು.

ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲು ಬಲವಾದ ಕಾರಣವನ್ನು ತಿಳಿಸಿದ ರೋಹಿತ್‌ ಶರ್ಮಾ!

ರಿಷಭ್‌ ಪಂತ್‌ಗೂ ಖಲೀಲ್‌ ಅಹ್ಮದ್‌ ಮೆಚ್ಚುಗೆ

"ನಾಯಕ ಇದ್ದರೆ ರೋಹಿತ್‌ ಶರ್ಮಾ ರೀತಿ ಇರಬೇಕೆಂದು ನಾನು ಬಯಸುತ್ತೇನೆ. ಪಂದ್ಯದ ಬಳಿಕ ಅವರ ಜೊತೆ ಮಾತನಾಡಿದೆ ಹಾಗೂ ಆ ವೇಳೆ ಅವರ ಎಂಥಾ ವ್ಯಕ್ತಿ ಎಂದು ನನಗೆ ಅರ್ಥವಾಯಿತು. ಇದೇ ಸಂಗತಿಯನ್ನು ನಾನು ರಿಷಭ್‌ ಪಂತ್‌ ಅವರ ಬಳಿಯೂ ನೋಡಿದ್ದೇನೆ. ಎಂಥಾ ಮನುಷ್ಯ! ಎಂಥಾ ನಾಯಕ! ನಿಮ್ಮ ಪಾಲಿಗೆ ಕೆಟ್ಟ ದಿನವಾಗಿದ್ದರೆ ಜನರು ನಿಮ್ಮನ್ನು ನೋಡುವುದಿಲ್ಲ ಆದರೆ, ನಾಯಕನಾಗಿ ಅವರು ನನ್ನನ್ನು ನಡೆಸಿಕೊಂಡ ರೀತಿ ಸ್ಪೂರ್ತಿದಾಯಕವಾಗಿದೆ," ಎಂದು ಎಡಗೈ ವೇಗಿ ತಿಳಿಸಿದ್ದಾರೆ.