ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಈ ಆಟಗಾರನಿಂದ ಸಂಜು ಸ್ಯಾಮ್ಸನ್‌ಗೆ ಅವಕಾಶ ಇಲ್ಲವೆಂದ ಇರ್ಫಾನ್‌ ಪಠಾಣ್‌!

ಸೆಪ್ಟಂಬರ್‌ 9 ರಂದು 2025ರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಯುಎಇ ಆತಿಥ್ಯದಲ್ಲಿ ಆರಂಭವಾಗಲಿದೆ. ಈ ಟೂರ್ನಿಗೆ ಭಾರತ ತಂಡ ತಯಾರಿ ನಡೆಸುತ್ತಿದೆ. ಅಂದ ಹಾಗೆ ಶುಭಮನ್‌ ಗಿಲ್‌ ಅವರ ಆಗಮನದಿಂದ ಭಾರತ ತಂಡದ ಪ್ಲೇಯಿಂಗ್‌ IXನಲ್ಲಿ ಸಂಜು ಸ್ಯಾಮ್ಸನ್‌ ಅವರಿಗೆ ಅವಕಾಶ ಸಿಗುವುದು ಅನುಮಾನ ಎಂದು ಭಾರತದ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಭವಿಷ್ಯ ನುಡಿದಿದ್ದಾರೆ.

ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ಇಲ್ಲ: ಇರ್ಫಾನ್‌ ಪಠಾಣ್‌!

ಸಂಜು ಸ್ಯಾಮ್ಸನ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ ಅವಕಾಶ ಇಲ್ಲವೆಂದ ಇರ್ಫಾನ್‌ ಪಠಾಣ್‌. -

Profile Ramesh Kote Sep 2, 2025 7:55 PM

ನವದೆಹಲಿ: ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಕ್ರಿಕೆಟ್‌ ಟೂರ್ನಿಯು ಯುಎಇ ಆತಿಥ್ಯದಲ್ಲಿ ಸೆಪ್ಟಂಬರ್‌ 9 ರಂದು ಆರಂಭವಾಗಲಿದೆ. ಈ ಟೂರ್ನಿಗೆ ಭಾರತ ತಂಡದ ಪ್ಲೇಯಿಂಗ್‌ XI (India's Playing XI) ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಂತೆ ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ (Irfan Pathan) ಕೂಡ ಭಾರತದ ಪ್ಲೇಯಿಂಗ್‌ XI ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ದೀರ್ಘಾವಧಿ ಬಳಿಕ ಭಾರತ ಟಿ20 ತಂಡಕ್ಕೆ ಮರಳಿದ ಬಳಿಕ ಶುಭಮನ್‌ ಗಿಲ್‌ಗೆ ಉಪ ನಾಯಕನ ಸ್ಥಾನವನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಂಜು ಸ್ಯಾಮ್ಸನ್‌ಗೆ (Sanju Samson) ಭಾರತದ ಪ್ಲೇಯಿಂಗ್‌ XIನಲ್ಲಿ ಸ್ಥಾನ ಸಿಗುವುದು ಅನುಮಾನ ಎಂದು ಪಠಾಣ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್ಸ್‌ ಜೊತೆ ಮಾತನಾಡಿದ ಇರ್ಫಾನ್‌ ಪಠಾಣ್‌, ಏಷ್ಯಾ ಕಪ್‌ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್‌ XIನಲ್ಲಿ ಅವಕಾಶ ಸಿಗುವುದು ಅನುಮಾನ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ಇದೀಗ ಶುಭಮನ್‌ ಗಿಲ್‌ ಬಂದಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಜಿತೇಶ್‌ ಶರ್ಮಾ ಮ್ಯಾಚ್‌ ಫಿನಿಷರ್‌ ಆಗಿ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಗಿಲ್‌ ಓಪನರ್‌ ಆಗಿ ಆಡಿದರೆ, ಜಿತೇಶ್‌ ವಿಕೆಟ್‌ ಕೀಪರ್‌ ಹಾಗೂ ಮ್ಯಾಚ್‌ ಫಿನಿಷರ್‌ ಆಗಿ ಆಡಬಹುದು ಎಂಬುದು ಇರ್ಫಾನ್‌ ಪಠಾಣ್‌ ಅಭಿಪ್ರಾಯ.

Asia Cup 2025: ಏಷ್ಯಾಕಪ್‌ನಲ್ಲಿ ಅತ್ಯಧಿಕ ಕ್ಯಾಚ್‌ ಹಿಡಿದ ಟಾಪ್‌-5 ಆಟಗಾರರು

"ಸಂಜು ನಿಜಕ್ಕೂ ಅದ್ಭುತ ಪ್ರದರ್ಶನವನ್ನು ತೋರಿದ್ದಾರೆ. ಅವರ ಬಗ್ಗೆ ಒಂದು ಪ್ರಶ್ನೆ ಏನೆಂದರೆ, ಅವರ ಸ್ಥಿರ ಪ್ರದರ್ಶನದ ಕೊರತೆ. ಅವರು ಶತಕಗಳನ್ನು ಬಾರಿಸಿದರೂ, ಅತ್ಯಂತ ಹೀನಾಯವಾಗಿ ವಿಕೆಟ್‌ ಒಪ್ಪಿಸುತ್ತಾರೆ. ಅಭಿಷೇಕ್‌ ಶರ್ಮಾ ತಂಡದಲ್ಲಿ ಇದ್ದೇ ಇರುತ್ತಾರೆ, ಏಕೆಂದರೆ ಅವರು ಸ್ಪೋಟಕ ಬ್ಯಾಟಿಂಗ್‌ ಜೊತೆಗೆ ಬೌಲ್‌ ಮಾಡಬಲ್ಲರು. ಜಿತೇಶ್‌ ಶರ್ಮಾ ಇರುವ ಕಾರಣ ಶುಭಮನ್‌ ಗಿಲ್‌ ಅವರು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡಬಹುದು. ಈ ಹಾದಿಯನ್ನು ನಾನು ಬಯಸುತ್ತಿದ್ದೇನೆ," ಎಂದು ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ತಿಳಿಸಿದ್ದಾರೆ.

ಭಾರತದ ಮೂರೂ ಸ್ವರೂಪಕ್ಕೆ ಶುಭಮನ್‌ ಗಿಲ್‌ ನಾಯಕ?

ಏಷ್ಯಾ ಕಪ್‌ ಭಾರತ ತಂಡದಲ್ಲಿ ಶುಭಮನ್‌ ಗಿಲ್‌ಗೆ ಅವಕಾಶವನ್ನು ನೀಡಲಾಗಿದೆ. ಇದೀಗ ಬಿಸಿಸಿಐ ಭಾರತದ ಮೂರೂ ಸ್ವರೂಪದ ನಾಯಕತ್ವಕ್ಕೆ ನಾಯಕನನ್ನು ಹುಡುಕುತ್ತಿದೆ. ಬಹುಶಃ ಶುಭಮನ್‌ ಗಿಲ್‌ ಪೂರ್ಣ ಪ್ರಮಾಣದ ನಾಯಕತ್ವಕ್ಕೆ ಸೂಕ್ತ ಎಂದು ಇರ್ಫಾನ್‌ ಪಠಾಣ್‌ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್‌ ಭಾರತ ತಂಡದಲ್ಲಿ ಶ್ರೇಯಸ್‌ ಅಯ್ಯರ್‌ಗೆ ಸ್ಥಾನ ನೀಡದೆ ಇರಲು ಕಾರಣ ತಿಳಿಸಿದ ಮಾಂಟಿ ಪನೇಸರ್‌!

"ಭಾರತೀಯ ಕ್ರಿಕೆಟ್ ಇದೀಗ ಯಾವ ಸ್ಥಾನದಲ್ಲಿದೆಯೆಂದರೆ, ಅದು ನಾಯಕತ್ವದ ಹುಡುಕಾಟದಲ್ಲಿದೆ. ಎಂಎಸ್ ಧೋನಿ ಬಂದಾಗ ನಾವು ಪರಿವರ್ತನೆಯ ಹಂತದಲ್ಲಿದ್ದೆವು, ಆದರೆ ಅದೃಷ್ಟವಶಾತ್ ಅವರು ವಿಶ್ವಕಪ್ ಗೆದ್ದರು (2007 ರಲ್ಲಿ ಟಿ20). ಧೋನಿ ನಂತರ ವಿರಾಟ್ ಕೊಹ್ಲಿ ಬಂದರು ಮತ್ತು ಅವರು ಅಧಿಕಾರ ವಹಿಸಿಕೊಂಡರು. ನಂತರ ರೋಹಿತ್ ಶರ್ಮಾ ಬಂದರು ಮತ್ತು ಅದ್ಭುತ ಪ್ರದರ್ಶನ ನೀಡಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯಬಲ್ಲ ನಾಯಕನ ಹುಡುಕಾಟದಲ್ಲಿ ನಾವು ಯಾವಾಗಲೂ ಇರುತ್ತೇವೆ," ಎಂದರು.