ಏಷ್ಯನ್ ಗೇಮ್ಸ್ ಕ್ರಿಕೆಟ್ ವೇಳಾಪಟ್ಟಿ ಪ್ರಕಟ
Asian Games 2026 Cricket Schedule: ಶ್ರೇಯಾಂಕದ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ. ಬಾಕಿ ಉಳಿದ ಕ್ವಾರ್ಟರ್ ಫೈನಲ್‌ನ 4 ಸ್ಥಾನಗಳಿಗಾಗಿ 6 ತಂಡಗಳು ಆರಂಭಿಕ ಹಂತದಲ್ಲಿ ಸೆಣಸಾಟ ನಡೆಸಲಿವೆ. ಪ್ರತೀ ಗ್ರೂಪ್‌ನಿಂದಲೂ ಅಗ್ರ 2ರಲ್ಲಿ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲಿವೆ.
asian games 2026 cricket -
ಟೋಕಿಯೊ, ಆ.26: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್ (Asian Games 2026) ಕ್ರಿಕೆಟ್ ಪಂದ್ಯಾವಳಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಪುರುಷ ಹಾಗೂ ಮಹಿಳೆ ಎರಡೂ ವಿಭಾಗದಲ್ಲಿಯೂ ಹಾಲಿ ಚಾಂಪಿಯನ್ ಭಾರತ ಮತ್ತು ಪಾಕಿಸ್ತಾನ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಏಷ್ಯನ್ ಗೇಮ್ಸ್‌ನ ಪುರುಷರ ಮತ್ತು ಮಹಿಳೆಯರ ಇವೆರಡೂ ವಿಭಾಗಗಳ ಪಂದ್ಯಾವಳಿಗಳು ಟಿ20 ಮಾದರಿಯಲ್ಲಿ ಐಚಿ ಪ್ರಿಫೆಕ್ಚರ್‌ನಲ್ಲಿರುವ ಕೊರೋಗಿ ಅಥ್ಲೆಟಿಕ್ ಪಾರ್ಕ್‌ನಲ್ಲಿ ನಡೆಯಲಿವೆ. ಪುರುಷರ ವಿಭಾಗದಲ್ಲಿ ಒಟ್ಟು 10 ತಂಡಗಳು ಭಾಗವಹಿಸುತ್ತಿದ್ದು, ಪಂದ್ಯಾವಳಿಯು ಸೆಪ್ಟೆಂಬರ್ 24ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದೆ. ಅ. 3ರಂದು ಫೈನಲ್ ಮತ್ತು ಕಂಚಿನ ಪದಕದ ಪಂದ್ಯ ನಡೆಯಲಿದೆ.
ಶ್ರೇಯಾಂಕದ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದಿವೆ. ಬಾಕಿ ಉಳಿದ ಕ್ವಾರ್ಟರ್ ಫೈನಲ್‌ನ 4 ಸ್ಥಾನಗಳಿಗಾಗಿ 6 ತಂಡಗಳು ಆರಂಭಿಕ ಹಂತದಲ್ಲಿ ಸೆಣಸಾಟ ನಡೆಸಲಿವೆ. ಪ್ರತೀ ಗ್ರೂಪ್‌ನಿಂದಲೂ ಅಗ್ರ 2ರಲ್ಲಿ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲಿವೆ.
ಗ್ರೂಪ್ 'ಎ': ಅಫ್ಘಾನಿಸ್ತಾನ, ಜಪಾನ್, ನೇಪಾಳ
ಗ್ರೂಪ್ 'ಬಿ': ಹಾಂಗ್ ಕಾಂಗ್, ಮಲೇಷ್ಯಾ, ಒಮಾನ್
ಡ್ರಾದ ಪ್ರಕಾರ, ಈ ತಂಡಗಳು ಲೀಗ್ ಹಂತದಲ್ಲಿ ಮುಖಾಮುಖಿಯಾಗುವುದಿಲ್ಲ. ಹಾಗಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶ ಪಡೆದರೆ ಮಾತ್ರ, ಈ ತಂಡಗಳ ಪೈಪೋಟಿ ವೀಕ್ಷಿಸಲು ಸಾಧ್ಯ.
ಮಹಿಳೆಯರ ಕ್ರಿಕೆಟ್ ವಿಭಾಗ
ಮಹಿಳೆಯರ ವಿಭಾಗದ ಪಂದ್ಯಗಳು ಸೆಪ್ಟೆಂಬರ್ 17ರಿಂದ 22ರವರೆಗೆ ನಡೆಯಲಿದ್ದು, ಒಟ್ಟು 8 ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಿಂದಲೇ ತಮ್ಮ ಅಭಿಯಾನ ಆರಂಭಿಸಲಿವೆ. ಮಹಿಳೆಯರ ವಿಭಾಗದಲ್ಲೂ ಭಾರತ ತಂಡ ಜಪಾನ್ ವಿರುದ್ಧ ಗೆದ್ದರೆ, ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶ ಅಥವಾ ಚೀನಾ ತಂಡವನ್ನು ಎದುರಿಸುವ ಸಾಧ್ಯತೆಯಿದೆ. ಇಲ್ಲಿಯೂ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ತಲುಪಿದರೆ ಮಾತ್ರ ಎದುರಾಳಿಗಳಾಗಲಿವೆ.
ಕೊಲಂಬೊ ಟೆಸ್ಟ್; ಶ್ರೀಲಂಕಾಗೆ ಫಾಲೋ ಆನ್ ಹೇರಿದ ಭಾರತ
ಪುರುಷರ ಪಂದ್ಯದ ವೇಳಾಪಟ್ಟಿ
24 ಸೆಪ್ಟೆಂಬರ್- ಅಫ್ಘಾನಿಸ್ತಾನ vs ಜಪಾನ್
24 ಸೆಪ್ಟೆಂಬರ್- ಹಾಂಗ್ ಕಾಂಗ್, ಚೀನಾ vs ಮಲೇಷ್ಯಾ
25 ಸೆಪ್ಟೆಂಬರ್- ಹಾಂಗ್ ಕಾಂಗ್, ಚೀನಾ vs ಓಮನ್
25 ಸೆಪ್ಟೆಂಬರ್ಅ -ಫ್ಘಾನಿಸ್ತಾನ vs ನೇಪಾಳ
26 ಸೆಪ್ಟೆಂಬರ್- ಜಪಾನ್ vs ನೇಪಾಳ
26 ಸೆಪ್ಟೆಂಬರ್- ಮಲೇಷ್ಯಾ vs ಓಮನ್
28 ಸೆಪ್ಟೆಂಬರ್- ಕ್ವಾರ್ಟರ್-ಫೈನಲ್ - ಪಾಕಿಸ್ತಾನ vs ಗ್ರೂಪ್ ಬಿ 2 ನೇ ಸ್ಥಾನ
28 ಸೆಪ್ಟೆಂಬರ್- ಕ್ವಾರ್ಟರ್-ಫೈನಲ್ - ಭಾರತ vs ಗ್ರೂಪ್ ಎ 2 ನೇ ಸ್ಥಾನ
29 ಸೆಪ್ಟೆಂಬರ್- ಕ್ವಾರ್ಟರ್-ಫೈನಲ್ - ಶ್ರೀಲಂಕಾ vs ಗ್ರೂಪ್ ಎ ವಿಜೇತ
29 ಸೆಪ್ಟೆಂಬರ್- ಕ್ವಾರ್ಟರ್-ಫೈನಲ್ - ಬಾಂಗ್ಲಾದೇಶ vs ಗ್ರೂಪ್ ಬಿ ವಿಜೇತ
1 ಅಕ್ಟೋಬರ್- ಸೆಮಿಫೈನಲ್ - QF1 ವಿಜೇತ vs QF4 ವಿಜೇತ
1 ಅಕ್ಟೋಬರ್- ಸೆಮಿಫೈನಲ್ - QF2 ವಿಜೇತ vs QF3 ವಿಜೇತ
3 ಅಕ್ಟೋಬರ್- ಕಂಚಿನ ಪದಕ ಪಂದ್ಯ
3 ಅಕ್ಟೋಬರ್- ಫೈನಲ್
ಮಹಿಳಾ ಪಂದ್ಯದ ವೇಳಾಪಟ್ಟಿ
17 ಸೆಪ್ಟೆಂಬರ್- ಬಾಂಗ್ಲಾದೇಶ vs ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ
17 ಸೆಪ್ಟೆಂಬರ್- ಪಾಕಿಸ್ತಾನ vs ಥೈಲ್ಯಾಂಡ್
18 ಸೆಪ್ಟೆಂಬರ್- ಶ್ರೀಲಂಕಾ vs ಮಲೇಷ್ಯಾ
18 ಸೆಪ್ಟೆಂಬರ್- ಭಾರತ vs ಜಪಾನ್
20 ಸೆಪ್ಟೆಂಬರ್- ಸೆಮಿಫೈನಲ್ - 2 ನೇ ಪಂದ್ಯದ ವಿಜೇತ vs 3 ನೇ ಪಂದ್ಯದ ವಿಜೇತ
20 ಸೆಪ್ಟೆಂಬರ್- ಸೆಮಿಫೈನಲ್ - 1 ನೇ ಪಂದ್ಯದ ವಿಜೇತ vs 4 ನೇ ಪಂದ್ಯದ ವಿಜೇತ
22 ಸೆಪ್ಟೆಂಬರ್- ಕಂಚಿನ ಪದಕ ಪಂದ್ಯ
22 ಸೆಪ್ಟೆಂಬರ್- ಫೈನಲ್