ಭಾರತದ ಪದಕಗಳ ಸಂಖ್ಯೆ ಏರಿಕೆ; ಅವಳಿ ಚಿನ್ನ ಗೆದ್ದ ಶೀತಲ್ ದೇವಿ
Asian Para Games Live: ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ (Class XD7) ವಿಭಾಗದ ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾದ ಯೆಯೊಂಗ್ಜಿನ್ ಜಾಂಗ್ ಮತ್ತು ಮಿಗ್ಯು ಲೀ ವಿರುದ್ಧ 1-3 ಅಂತರದಿಂದ (6-11, 11-8, 5-11, 9-11) ಸೋಲನುಭವಿಸಿದ ಭಾರತದ ಭವಿನಾ ಪಟೇಲ್ ಮತ್ತು ಶುಭಂ ವಾಧ್ವಾ ಅವರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ.
Sheetal Devi -
ನಗೋಯಾ, ಅ.22: ಏಷ್ಯನ್ ಪ್ಯಾರಾ ಗೇಮ್ಸ್ 2026ರಲ್ಲಿ, ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾರತದ ಶೀತಲ್ ದೇವಿ ಅವರು ಸಿಂಗಾಪುರದ ನೂರ್ ಅಲಿಮ್ ಸಯಿದಾ ಅವರನ್ನು 142-139 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಇದಕ್ಕೂ ಮೊದಲು ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿಯೂ ಚಿನ್ನದ ಪದಕವನ್ನು ಜಯಿಸಿದ್ದರು.
ಈ ಪಂದ್ಯವು ತೀವ್ರ ಪೈಪೋಟಿಯಿಂದ ಕೂಡಿತ್ತು. 10 ಬಾಣಗಳನ್ನು ಹೂಡಿದ ನಂತರ ಅಂಕಗಳು 95-95 ಸಮನಾಗಿದ್ದವು. ಅಂತಿಮ ಐದು ಪ್ರಯತ್ನಗಳಲ್ಲಿ ಶೀತಲ್ ಉತ್ತಮ ಪ್ರದರ್ಶನ ನೀಡಿ ಎರಡು ಬಾರಿ 10 ಅಂಕಗಳನ್ನು ಹಾಗೂ ಮೂರು ಬಾರಿ 9 ಅಂಕಗಳನ್ನು ಗಳಿಸಿದರು. ಅದೇ ಸಮಯದಲ್ಲಿ ನೂರ್ ನಾಲ್ಕು ಬಾರಿ 9 ಅಂಕಗಳನ್ನು ಮತ್ತು ಒಮ್ಮೆ 8 ಅಂಕಗಳನ್ನು ಪಡೆದರು. ಪರಿಣಾಮವಾಗಿ, ಶೀತಲ್ ಮೂರು ಅಂಕಗಳ ಅಂತರದಿಂದ ಜಯ ಸಾಧಿಸಿದರು.
ಮಹಿಳೆಯರ F54 ಡಿಸ್ಕಸ್ ಥ್ರೋನಲ್ಲಿ ಚಿನ್ನ ಗೆದ್ದ ಸುವರ್ಣ ರಾಜ್
ಇದಕ್ಕೂ ಮುನ್ನ, ಶೀತಲ್ ದೇವಿ ಮತ್ತು ತೋಮನ್ ಕುಮಾರ್ ಅವರು ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಇಂಡೋನೇಷ್ಯಾದ ಟಿಯೋಡೋರಾ ಆಡಿ ಅಯುಡಿಯಾ ಫೆರೆಲ್ಲಿ ಮತ್ತು ಕೆನ್ ಸ್ವಾಗುಮಿಲಾಂಗ್ ಅವರನ್ನು 151-148 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದರು. ಈ ಮೂಲಕ ಅವರು ಈ ಕ್ರೀಡಾಕೂಟದಲ್ಲಿ ಭಾರತಕ್ಕೆ ಬಿಲ್ಲುಗಾರಿಕೆಯಲ್ಲಿ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟರು. ಒಟ್ಟಾರೆ ಶೀತಲ್, ಒಂದೇ ದಿನ ಎರಡು ಚಿನ್ನದ ಪದಕ ಸಂಭ್ರಮಾಚರಿಸಿದರು.
ಕಂಚು ಗೆದ್ದ ಭವಿನಾ ಪಟೇಲ್- ಶುಭಂ ವಾಧ್ವಾ ಜೋಡಿ
ಇದಕ್ಕೂ ಮುನ್ನ ನಡೆದ ಟೇಬಲ್ ಟೆನಿಸ್ ಮಿಶ್ರ ಡಬಲ್ಸ್ (Class XD7) ವಿಭಾಗದ ಸೆಮಿಫೈನಲ್ನಲ್ಲಿ ದಕ್ಷಿಣ ಕೊರಿಯಾದ ಯೆಯೊಂಗ್ಜಿನ್ ಜಾಂಗ್ ಮತ್ತು ಮಿಗ್ಯು ಲೀ ವಿರುದ್ಧ 1-3 ಅಂತರದಿಂದ (6-11, 11-8, 5-11, 9-11) ಸೋಲನುಭವಿಸಿದ ಭಾರತದ ಭವಿನಾ ಪಟೇಲ್ ಮತ್ತು ಶುಭಂ ವಾಧ್ವಾ ಅವರು ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಜೋಡಿಯು ಐಚಿ-ನಗೋಯಾದಲ್ಲಿ ಭಾರತಕ್ಕೆ ಮೊದಲ ಡಬಲ್ಸ್ ಪದಕವನ್ನು ತಂದುಕೊಟ್ಟಿದ್ದು, ಈ ಕೂಟದಲ್ಲಿ ಭಾರತಕ್ಕೆ ಲಭಿಸಿದ ಆರನೇ ಟೇಬಲ್ ಟೆನ್ನಿಸ್ ಪದಕ ಇದಾಗಿದೆ. ಮಹಿಳೆಯರ ಸಿಂಗಲ್ಸ್ (Class 4-5) ವಿಭಾಗದಲ್ಲಿ ಕಂಚಿನ ಪದಕ ಗೆದ್ದ ನಂತರ, ಭವಿನಾ ಅವರಿಗೆ ಇದು ಎರಡನೇ ಪದಕವಾಗಿದೆ. ಸದ್ಯ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದು ಒಟ್ಟು 73 ಪದಕ ತನ್ನದಾಗಿಸಿಕೊಂಡಿದೆ.