AUS vs IND Live: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ
ಆ್ಯಷಸ್ ಟೆಸ್ಟ್ ಸರಣಿ ಸಮೀಪಿಸುತ್ತಿರುವ ಕಾರಣ ಹ್ಯಾಜಲ್‌ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅವರು ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲು ಸೀನ್ ಅಬೋಟ್‌ಗೆ ಅವಕಾಶ ನೀಡಲಾಗಿದೆ. ಬೆಲೆರಿವ್ ಓವಲ್‌ನ ಪಿಚ್‌ನ ಎರಡೂ ಬದಿಯ ಬೌಂಡರಿಗಳು ಸಣ್ಣದಾಗಿರುವ ಕಾರಣ ಬೌಲರ್‌ಗಳು ಶಕ್ತಿ ಮೀರಿ ಬೌಲಿಂಗ್ ಪ್ರದರ್ಶನ ನೀಡಬೇಕು. ಲಯ ತಪ್ಪಿದರೆ ದಂಡಿಸಿಕೊಳ್ಳುವುದು ಖಚಿತ.
-
Abhilash BC
Nov 2, 2025 1:35 PM
ಹೋಬಾರ್ಟ್: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ(AUS vs IND Live) ತಂಡ ಬೌಲಿಂಗ್ ಆಯ್ದುಕೊಂಡಿದೆ. ಆತಿಥೇಯ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ನಡೆಸಲಿದೆ. ಭಾರತ(Australia vs India 3rd T20I) ಈ ಪಂದ್ಯಕ್ಕೆ ತನ್ನ ಆಡುವ ಬಳಗದಲ್ಲಿ ಮೂರು ಮಹತ್ವದ ಬದಲಾವಣೆ ಮಾಡಿಕೊಂಡಿತು.
ಟಾಸ್ ಗೆದ್ದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ನಾವು ಮೊದಲು ಬೌಲಿಂಗ್ ಮಾಡಲಿದ್ದೇವೆ. ಎರಡನೇ ಇನ್ನಿಂಗ್ಸ್‌ನಲ್ಲಿ ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ತಂಡದ ಪರ ಮೂರು ಬದಲಾವಣೆಗಳಿವೆ, ಜಿತೇಶ್ ಶರ್ಮ, ಅರ್ಶ್‌ದೀಪ್ ಸಿಂಗ್ ಮತ್ತು ವಾಷಿಂಗ್ಟನ್ ಸುಂದರ್ ಆಡಲಿದ್ದಾರೆ. ಸಂಜು ಸ್ಯಾಮ್ಸನ್, ಹರ್ಷಿತ್ ರಾಣಾ ಮತ್ತು ಕುಲ್‌ದೀಪ್ ಯಾದವ್ ಅವರನ್ನು ಕೈಬಿಡಲಾಗಿದೆ ಎಂದರು.
ಆ್ಯಷಸ್ ಟೆಸ್ಟ್ ಸರಣಿ ಸಮೀಪಿಸುತ್ತಿರುವ ಕಾರಣ ಹ್ಯಾಜಲ್‌ವುಡ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅವರು ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅವರ ಬದಲು ಸೀನ್ ಅಬೋಟ್‌ಗೆ ಅವಕಾಶ ನೀಡಲಾಗಿದೆ. ಬೆಲೆರಿವ್ ಓವಲ್‌ನ ಪಿಚ್‌ನ ಎರಡೂ ಬದಿಯ ಬೌಂಡರಿಗಳು ಸಣ್ಣದಾಗಿರುವ ಕಾರಣ ಬೌಲರ್‌ಗಳು ಶಕ್ತಿ ಮೀರಿ ಬೌಲಿಂಗ್ ಪ್ರದರ್ಶನ ನೀಡಬೇಕು. ಲಯ ತಪ್ಪಿದರೆ ದಂಡಿಸಿಕೊಳ್ಳುವುದು ಖಚಿತ.
Finally IND Won the Toss & Opt to Bowl
— 𝑺𝒉𝒆𝒃𝒂𝒔 (@Shebas_10dulkar) November 2, 2025
3 Changes in Indian Team!
No Samson, Kuldeep, Harshit#AUSvIND pic.twitter.com/GiJCuIEWhb
ಉಭಯ ಆಡುವ ಬಳಗ
ಭಾರತ: ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್(ನಾಯಕಿ), ತಿಲಕ್ ವರ್ಮಾ, ಜಿತೇಶ್ ಶರ್ಮಾ(ವಿ.ಕೀ.), ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ ind vs sa: ಭಾರತ ಗೆದ್ದರೆ ಬಿಸಿಸಿಐನಿಂದ ₹125 ಕೋಟಿ ಬಹುಮಾನ!
ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಟಿಮ್ ಡೇವಿಡ್, ಮಿಚೆಲ್ ಓವನ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಸೀನ್ ಅಬಾಟ್, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್.