ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಭಾರತ ತಂಡ ಹೊರಬೀಳುತ್ತಿತ್ತುʼ: ಟಿ20 ವಿಶ್ವಕಪ್‌ನ ʻಅತ್ಯಂತ ಮೂರ್ಖ ತಂಡʼ ದಕ್ಷಿಣ ಆಫ್ರಿಕಾ ಎಂದ ಮೈಕಲ್‌ ವಾನ್‌!

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕಲ್ ವಾನ್ ಅವರು ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವನ್ನು “ಅತ್ಯಂತ ಮೂರ್ಖ ತಂಡ” ಎಂದು ಟೀಕಿಸಿದ್ದಾರೆ. ಏಕೆಂದರೆ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್ 8ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲಬೇಕಿತ್ತು, ಇದರಿಂದ ಭಾರತ ಟೂರ್ನಿಯಿಂದ ಹೊರ ಬೀಳುವ ಸಾಧ್ಯತೆ ಇತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಅತ್ಯಂತ ಮೂರ್ಖ ತಂಡ ಎಂದ ಮೈಕಲ್‌ ವಾನ್‌!

ದಕ್ಷಿಣ ಆಫ್ರಿಕಾವನ್ನು ಮೂರ್ಖ ತಂಡ ಎಂದ ಮೈಕಲ್‌ ವಾನ್‌. -

Profile
Ramesh Kote Mar 13, 2026 5:13 PM

ನವದೆಹಲಿ: ಇತ್ತೀಚೆಗೆ ಮುಕ್ತಾಯವಾಗಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ʻಅತ್ಯಂತ ಮೂರ್ಖ ತಂಡʼ ಎಂದು ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ (Michael Vaughan) ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಏಡೆನ್‌ ಮಾರ್ಕ್ರಮ್‌ ನಾಯಕತ್ವದ ಹರಿಣ ಪಡೆ ಸೂಪರ್‌-8ರ ಹಂತದಲ್ಲಿ ಮಾಡಿದ ಎಡವಟ್ಟಿನಿಂದ ಭಾರತ ತಂಡ (India) ಚಾಂಪಿಯನ್‌ ಆಯಿತು ಎಂದು ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಸೂಪರ್‌-8ರಲ್ಲಿ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿದ್ದರೆ, ಆಗ ಭಾರತ ತಂಡದ ಸೆಮಿಫೈನಲ್‌ ಹಾದಿ ಕಠಿಣವಾಗುತ್ತಿತ್ತು, ಏಕೆಂದರೆ ಮೊದಲನೇ ಪಂದ್ಯದಲ್ಲಿ 76 ರನ್‌ಗಳ ಅಂತರದಲ್ಲಿ ಭಾರಿ ಸೋಲು ಅನುಭವಿಸಿದ್ದರಿಂದ ಭಾರತದ ರನ್‌ ರೇಟ್‌ ಕುಸಿದಿತ್ತು.

ದಕ್ಷಿಣ ಆಫ್ರಿಕಾ ಎದುರು ಸೂಪರ್‌-8ರ ಆರಂಭಿಕ ಪಂದ್ಯದಲ್ಲಿ ಸೋಲುವ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ನಂತರ ಜಿಂಬಾಬ್ವೆ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ದದ ಗೆಲುವುಗಳ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು. ಒಂದು ವೇಳೆ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿದ್ದರೆ, ಭಾರತವನ್ನು ಹಿಂದಿಕ್ಕಿ ವಿಂಡೀಸ್‌ ಉತ್ತಮ ರನ್‌ರೇಟ್‌ ಮೂಲಕ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು. ಮೊದಲನೇ ಗುಂಪಿನಿಂದ ದಕ್ಷಿಣ ಆಫ್ರಿಕಾ ಹಾಗೂ ವಿಂಡೀಸ್‌ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯುತ್ತಿದ್ದವು.

ಸಂಜು ಸ್ಯಾಮ್ಸನ್‌ಗೆ ಸ್ಥಾನ; T20 World Cup ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

ಮೊದಲನೇ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ, ನ್ಯೂಜಿಲೆಂಡ್‌ ಎದುರು ಹೀನಾಯ ಸೋಲು ಅನುಭವಿಸಿತ್ತು. ಹಾಗಾಗಿ ಟೂರ್ನಿಯಿಂದ ಹೊರ ನಡೆದಿತ್ತು. ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲಿಯೂ ಪ್ರಾಬಲ್ಯ ಸಾಧಿಸಿದ್ದ ಭಾರತ ತಂಡ 96 ರನ್‌ಗಳಿಂದ ಕಿವೀಸ್‌ ತಂಡವನ್ನು ಮಣಿಸಿ ಮೂರನೇ ಬಾರಿ ಟಿ20 ವಿಶ್ವಕಪ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ದಕ್ಷಿಣ ಆಫ್ರಿಕಾ ಅತ್ಯಂತ ಮೂರ್ಖ ತಂಡ: ವಾನ್‌

ಕ್ರಿಕೆಟ್‌ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಮೈಕಲ್‌ ವಾನ್‌, "ಈ ಟೂರ್ನಿಯಲ್ಲಿ ನನಗೆ ಅತಿಮೂರ್ಖ ತಂಡ ಯಾವುದು ಎಂದು ಕೇಳಿದರೆ? ಅದು ದಕ್ಷಿಣ ಆಫ್ರಿಕಾ. ಏಕೆಂದರೆ ಸೂಪರ್-8 ಹಂತದಲ್ಲಿ ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು ಅವಕಾಶ ನೀಡಿದ್ದರೆ, ಭಾರತ ಟೂರ್ನಿಯಿಂದ ಹೊರಗುಳಿಯುತ್ತಿತ್ತು. ನಾನು ಹೇಳುವುದೇನೆಂದರೆ, ದಕ್ಷಿಣ ಆಫ್ರಿಕಾ ತಂಡ ಆ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎದುರು ಸೋಲು ಅನುಭವಿಸಬೇಕಾಗಿತ್ತು. ಆಗ, ಒಂದರಲ್ಲಿ ಸೋತು ರನ್‌ರೇಟ್‌ನಲ್ಲಿ ಕುಸಿತ ಕಂಡಿದ್ದ ಭಾರತ ತಂಡ ಟೂರ್ನಿಯಿಂದ ಹೊರಬೀಳಲು ಅವಕಾಶವಿತ್ತು," ಎಂದು ಹೇಳಿದ್ದಾರೆ.

ICC Men's T20 World Cup 2026: ಬೆಸ್ಟ್‌ ಪ್ಲೇಯಿಂಗ್ XI ಪ್ರಕಟಿಸಿದ ಹರ್ಷ ಭೋಗ್ಲೆ!

“ಆ ಪಂದ್ಯವನ್ನು ಹರಿಣ ಪಡೆ ಗೆದ್ದುಕೊಂಡಿದ್ದರಿಂದ ಭಾರತ ತಂಡ ಸಂಕಷ್ಟದಿಂದ ಪಾರಾಗಲು ಅವಕಾಶ ನೀಡದಂತಾಯಿತು. ಇದಾದ ಬಳಿಕ ಭಾರತ, ಜಿಂಬಾಬ್ವೆ ತಂಡವನ್ನು ಸೋಲಿಸಿತು, ಬಳಿಕ ಕ್ವಾರ್ಟರ್‌ಫೈನಲ್ ರೀತಿಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು ಮತ್ತು ನಂತರ ಸೆಮಿಫೈನಲ್‌ ಕಾದಾಟದಲ್ಲಿ ಇಂಗ್ಲೆಂಡ್‌ಗೂ ಮಣ್ಣು ಮುಕ್ಕಿಸಿತು. ದಕ್ಷಿಣ ಆಫ್ರಿಕಾ ಮುಂದಿನ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಆಡಬೇಕಾಗಿತ್ತು, ಆ ಪಂದ್ಯಕ್ಕಾಗಿ ಅವರು ಮೂವರು ಆಟಗಾರರಿಗೆ ವಿಶ್ರಾಂತಿ ಕೂಡ ನೀಡಿದ್ದರು,” ಎಂದು ಅವರು ಸೇರಿಸಿದ್ದಾರೆ.