ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Australia under-19: ಪ್ರವಾಸಿ ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

ನ್ಯೂ ಸೌತ್ ವೇಲ್ಸ್‌ನ ಐದು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ಅಕ್ಟೋಬರ್ 10 ರವರೆಗೆ ಎಲ್ಲಾ ಮಾದರಿಗಳಲ್ಲಿ ಐದು ಪಂದ್ಯಗಳನ್ನು ಆಡಲಿದ್ದಾರೆ. ಈ ಸರಣಿಯು ಟಿಮ್ ನೀಲ್ಸನ್ ಅವರಿಗೆ U-19 ತಂಡದ ಕೋಚ್ ಆಗಿ ಮೊದಲ ಸವಾಲಾಗಿದೆ.

ಪ್ರವಾಸಿ ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ U-19 ತಂಡ ಪ್ರಕಟ

Abhilash BC Abhilash BC Aug 8, 2025 2:27 PM

ಸಿಡ್ನಿ: ಸೆಪ್ಟೆಂಬರ್ 21 ರಿಂದ ಆರಂಭವಾಗಲಿರುವ ಭಾರತ ಅಂಡರ್-19 ವಿರುದ್ಧದ ತವರಿನ ಸರಣಿಗೆ ಆಸ್ಟ್ರೇಲಿಯಾ 15 ಸದಸ್ಯರ ತಂಡವನ್ನು(Australia under-19) ಪ್ರಕಟಿಸಿದೆ. ತಂಡದಲ್ಲಿ ಭಾರತೀಯ ಮೂಲದ ಇಬ್ಬರು ಆಟಗಾರರಾದ ಆರ್ಯನ್ ಶರ್ಮಾ(Aryan Sharma) ಮತ್ತು ಆಲ್‌ರೌಂಡರ್ ಯಶ್ ದೇಶ್‌ಮುಖ್‌(Yash Deshmukh) ಸ್ಥಾನ ಪಡೆದಿದ್ದಾರೆ. ಭಾರತ ಕಳೆದ ತಿಂಗಳೇ ತನ್ನ ತಂಡವನ್ನು ಪ್ರಕಟಿಸಿತ್ತು. ಆಯುಷ್ ಮ್ಹಾತ್ರೆ(Ayush Mhatre) ಭಾರತ ತಂಡದ ನಾಯಕನಾಗಿದ್ದಾರೆ.

ನ್ಯೂ ಸೌತ್ ವೇಲ್ಸ್‌ನ ಐದು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದು, ಅಕ್ಟೋಬರ್ 10 ರವರೆಗೆ ಎಲ್ಲಾ ಮಾದರಿಗಳಲ್ಲಿ ಐದು ಪಂದ್ಯಗಳನ್ನು ಆಡಲಿದ್ದಾರೆ. ಈ ಸರಣಿಯು ಟಿಮ್ ನೀಲ್ಸನ್ ಅವರಿಗೆ U-19 ತಂಡದ ಕೋಚ್ ಆಗಿ ಮೊದಲ ಸವಾಲಾಗಿದೆ. ನೀಲ್ಸನ್ ಈ ಹಿಂದೆ 2007 ರಿಂದ 2011 ರವರೆಗೆ ಆಸ್ಟ್ರೇಲಿಯಾದ ಪುರುಷರ ಹಿರಿಯ ತಂಡಕ್ಕೆ ತರಬೇತುದಾರರಾಗಿದ್ದರು. ಸರಣಿಯಲ್ಲಿ ಮೂರು ಏಕದಿನ ಮತ್ತು 2 ನಾಲ್ಕು ದಿನದ ಟೆಸ್ಟ್‌ ಪಂದ್ಯ ಆಡಲಿದೆ.

ಆಸ್ಟ್ರೇಲಿಯಾ U19 ತಂಡ

ಸೈಮನ್ ಬಡ್ಜ್, ಅಲೆಕ್ಸ್ ಟರ್ನರ್, ಸ್ಟೀವ್ ಹೊಗನ್, ವಿಲ್ ಮಲಾಜ್‌ಜುಕ್, ಯಶ್ ದೇಶ್‌ಮುಖ್, ಟಾಮ್ ಹೊಗನ್, ಆರ್ಯನ್ ಶರ್ಮಾ, ಜಾನ್ ಜೇಮ್ಸ್, ಹೇಡನ್ ಶಿಲ್ಲರ್, ಚಾರ್ಲ್ಸ್ ಲ್ಯಾಚ್‌ಮಂಡ್, ಬೆನ್ ಗಾರ್ಡನ್, ವಿಲ್ ಬೈರೋಮ್, ಕೇಸಿ ಬಾರ್ಟನ್, ಅಲೆಕ್ಸ್ ಲೀ ಯಂಗ್, ಜೇಡನ್ ಡ್ರೇಪರ್.

ಮೀಸಲು ಆಟಗಾರರು: ಜೆಡ್ ಹೋಲಿಕ್, ಟಾಮ್ ಪ್ಯಾಡಿಂಗ್ಟನ್, ಜೂಲಿಯನ್ ಓಸ್ಬೋರ್ನ್.

ಭಾರತ U19 ತಂಡ

ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮಲ್ಹೋತ್ರಾ (ಉಪ ನಾಯಕ), ವೈಭವ್ ಸೂರ್ಯವಂಶಿ, ವೇದಾಂತ್ ತ್ರಿವೇದಿ, ರಾಹುಲ್ ಕುಮಾರ್, ಅಭಿಜ್ಞಾನ್ ಕುಂದು (ಡಬ್ಲ್ಯುಕೆ), ಹರ್ವಂಶ್ ಸಿಂಗ್ (ವಿ.ಕೀ.), ಆರ್ ಎಸ್ ಅಂಬ್ರಿಶ್, ಕಾನಿಷ್ಕ್ ಚೌಹಾಣ್, ನಮನ್ ಪುಷ್ಪಕ್, ಹೆನಿಲ್, ಕಿಶನ್ ಕುಮಾರ್, ಅನ್ಮೋಲ್, ಕಿಶನ್ ಕುಮಾರ್, ಡಿ ದೀಪೇಶ್ ಪಟೇಲ್, ಡಿ ದೀಪೇಶ್ ಪಟೇಲ್ ಮೋಹನ್, ಅಮನ್ ಚೌಹಾಣ್.

ಸರಣಿ ವೇಳಾಪಟ್ಟಿ

ಸೆಪ್ಟೆಂಬರ್ 21: ಮೊದಲ ಏಕದಿನ

ಸೆಪ್ಟೆಂಬರ್ 24: ದ್ವಿತೀಯ ಏಕದಿನ

ಸೆಪ್ಟೆಂಬರ್ 26: ಮೂರನೇ ಏಕದಿನ

ಸೆಪ್ಟೆಂಬರ್ 30-ಅಕ್ಟೋಬರ್ 3: ಮೊದಲ ಟೆಸ್ಟ್‌

ಅಕ್ಟೋಬರ್ 7-10: ದ್ವಿತೀಯ ಟೆಸ್ಟ್‌

ಇದನ್ನೂ ಓದಿ India U19 squad: ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ U19 ತಂಡ ಪ್ರಕಟ