ತಮ್ಮ ಮಗನಿಗೆ ಚಾನ್ಸ್ ನೀಡದ ಗೌತಮ್ ಗಂಭೀರ್ ಬಗ್ಗೆ ಅಭಿಮನ್ಯು ಈಶ್ವರನ್ ತಂದೆ ಹೇಳಿದ್ದೇನು?
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿ 2-2 ಅಂತರದಲ್ಲಿ ಡ್ರಾ ಆಗಿದೆ. ಈ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅಭಿಮನ್ಯು ಈಶ್ವರನ್ ಅವರಿಗ ಸಿಗಲಿಲ್ಲ. ಈ ಬಗ್ಗೆ ಅಭಿಮನ್ಯು ಈಶ್ವರನ್ ಅವರ ತಂದೆ ರಂಗನಾಥನ್ ಈಶ್ವರನ್ ಪ್ರತಿಕ್ರಿಯಿಸಿದ್ದಾರೆ.

ಅಭಿಮನ್ಯು ಈಶ್ವರನ್ ಬಗ್ಗೆ ತಂದೆ ರಂಗನಾಥನ್ ಹೇಳಿಕೆ.

ನವದೆಹಲಿ: ಇಂಗ್ಲೆಂಡ್ ತಂಡದ ವಿರುದ್ದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs ENG) ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅಭಿಮನ್ಯು ಈಶ್ವರನ್‌ಗೆ (Abhimanyu Eshwaran) ಅವಕಾಶ ಸಿಕ್ಕಿರಲಿಲ್ಲ. ಈ ಬಗ್ಗೆ ಇವರ ತಂದೆ ರಂಗನಾಥನ್ ಈಶ್ವರನ್ (Ranganathan Eshwaran) ಅವರು ಈ ಹಿಂದೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದೀಗ ಅವರು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ಮಗನಿಗೆ ಭರವಸೆ ನೀಡಿರುವ ಸಂಗತಿಯನ್ನು ರಂಗನಾಥನ್ ಬಹಿರಂಗಪಡಿಸಿದ್ದಾರೆ. ಮುಂದಿನ ಸರಣಿಯಲ್ಲಿ ತಮ್ಮ ಮಗನಿಗೆ ಅವಕಾಶ ನೀಡುವ ಭರವಸೆಯನ್ನು ಗಂಭೀರ್ ನೀಡಿದ್ದಾರೆಂದು ಅವರು ತಿಳಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಕರುಣ್ ನಾಯರ್ ಹಾಗೂ ಸಾಯಿ ಸುದರ್ಶನ್ ಅವರಿಗೆ ಅವಕಾಶಗಳನ್ನು ನೀಡಲಾಗಿತ್ತು. ಕರುಣ್ ನಾಯರ್‌ಗೆ ನಾಲ್ಕು ಪಂದ್ಯಗಳಲ್ಲಿ ಹಾಗೂ ಸಾಯಿ ಸುದರ್ಶನ್‌ಗೆ ಮೂರು ಪಂದ್ಯಗಳಲ್ಲಿ ಆಡಿಸಲಾಗಿತ್ತು. ಈ ಕಾರಣದಿಂದಲೇ ಅಭಿಮನ್ಯು ಈಶ್ವರನ್‌ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಅಭಿಮನ್ಯು ಈಶ್ವರನ್‌ಗೆ ದೀರ್ಘಾವಧಿ ಭಾರತ ತಂಡದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಗೌತಮ್ ಗಂಭೀರ್ ಭರವಸೆ ನೀಡಿದ್ದಾರೆಂದು ರಂಗನಾಥನ್ ಈಶ್ವರನ್‌ಗೆ ಬಹಿರಂಗಪಡಿಸಿದ್ದಾರೆ.
IND vs ENG: ಟೀಕೆಗಳಿಗೆ ಗುರಿಯಾಗಿರುವ ಜಸ್‌ಪ್ರೀತ್ ಬುಮ್ರಾಗೆ ಸಚಿನ್ ತೆಂಡೂಲ್ಕರ್ ವಿಶೇಷ ಸಂದೇಶ!
"ನೀವು ಸರಿಯಾದ ಕೆಲಸಗಳನ್ನು ಮಾಡುತ್ತಿದ್ದೀರಿ, ನಿಮ್ಮ ಸರದಿ ಬರುತ್ತದೆ, ನಿಮಗೆ ದೀರ್ಘಾವಧಿಯ ಅವಕಾಶ ಸಿಗುತ್ತದೆ ಎಂದು ನನ್ನ ಮಗನಿಗೆ ಹೆಡ್ ಕೋಚ್ ಗೌತಮ್ ಗಂಭೀರ್ ಭರವಸೆ ನೀಡಿದ್ದಾರೆ. ಒಂದು ಅಥವಾ ಎರಡು ಪಂದ್ಯಗಳ ಬಳಿಕ ನಿಮ್ಮನ್ನು ಕೈ ಬಿಡುವ ವ್ಯಕ್ತಿ ನಾನಲ್ಲ. ನಾನು ನಿಮಗೆ ದೀರ್ಘಾವಧಿ ಅವಕಾಶವನ್ನು ನೀಡುತ್ತೇನೆ. ನನ್ನ ಮಗ ನನ್ನೊಂದಿಗೆ ಈ ರೀತಿಯ ಸಂಭಾಷಣೆಯನ್ನು ನಡೆಸಿದ್ದಾನೆ. ಇಡೀ ಕೋಚಿಂಗ್ ತಂಡ, ನನ್ನ ಮಗನಿಗೆ ಹೆಚ್ಚಿನ ಅವಕಾಶ ನೀಡುವ ಭರವಸೆಯನ್ನು ನೀಡಿದೆ. ಇದನ್ನು ನಾನು ನಿಮಗೆ ಹೇಳಬಲ್ಲೆ. ನನ್ನ ಮಗ ಅವಕಾಶಕ್ಕಾಗಿ ನಾಲ್ಕು ವರ್ಷಗಳಿಂದ ಕಾಯುತ್ತಿದ್ದಾನೆ. ಅವನು 23 ವರ್ಷಗಳಿಂದ ಪರಿಶ್ರಮ ಪಟ್ಟಿದ್ದಾನೆ," ಎಂದು ರಂಗನಾಥನ್ ಈಶ್ವರನ್ ತಿಳಿಸಿದ್ದಾರೆ.
IND vs ENG: ಜಸ್‌ಪ್ರೀತ್ ಬುಮ್ರಾ ಪ್ರದರ್ಶನದ ಬಗ್ಗೆ ಇರ್ಫಾನ್ ಪಠಾಣ್ ದೊಡ್ಡ ಹೇಳಿಕೆ!
"ಅವರು ಮೂರನೇ ಕ್ರಮಾಂಕದಲ್ಲಿ ಆಡಬೇಕು. ಸಾಯಿ ಸುದರ್ಶನ್ ಬಗ್ಗೆ ಯಾವುದೇ ಕೆಟ್ಟ ಭಾವನೆಗಳು ಇಲ್ಲ. ನನ್ನ ಬಗ್ಗೆ ಅವರಿಗೆ (ಸಾಯಿ ಸುದರ್ಶನ್) ಗೊತ್ತಿದೆ ಹಾಗೂ ಎಲ್ಲರಿಗೂ ಗೊತ್ತಿದೆ ದಯವಿಟ್ಟು ಅರ್ಥ ಮಾಡಿಕೊಳ್ಳಿ. ಯಾವ ಕ್ರಮಾಂಕದಲ್ಲಿ ಆಡಬೇಕೆಂಬುದು ಇಲ್ಲಿ ಪ್ರಶ್ನೆಯಾಗಿದೆ, ನಾನು ಮೂರನೇ ಕ್ರಮಾಂಕದಲ್ಲಿ ಆಡಬೇಕೆಂದು ಬಯಸುತ್ತೇನೆ. ಅವರು ಯಾವ ಕ್ರಮಾಂಕಕ್ಕೆ ಫಿಟ್ ಆಗುತ್ತಾರೆ? ನೀವೇ ಹೇಳಿ 0, 31, 0, 61. ಅವರು ಅಭಿಮನ್ಯು ಈಶ್ವರನ್ ಅವರನ್ನು ಪ್ರಯತ್ನಿಸಬಹುದಿತ್ತು. ಏಕೆಂದರೆ ಅವರು ಈಡನ್ ಗಾರ್ಡ್ಸನ್ಸ್‌ನಲ್ಲಿ 30ರಷ್ಟು ಪಂದ್ಯಗಳನ್ನು ಆಡಿದ್ದಾರೆ. ಗ್ರೀನ್ ವಿಕೆಟ್‌ನಲ್ಲಿ ಆಡಿದ ಅನುಭವವನ್ನು ಅವರು ಹೊಂದಿದ್ದಾರೆ. ಮತ್ತೊಂದು ವಿಶೇಷ ಏನೆಂದರೆ ಅಭಿಮನ್ಯು ದೀರ್ಘಾವಧಿ ಕ್ರೀಸ್‌ನಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ," ಎಂದು ಅವರು ಹೇಳಿದ್ದಾರೆ.