ಇಂಪ್ಯಾಕ್ಟ್ ಪ್ಲೇಯರ್ ನಿಯಮ ಟೀಕಿಸಿದ ಡೆಲ್ಲಿ ನಾಯಕ ಅಕ್ಷರ್ ಪಟೇಲ್
Impact Player rule: ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮ್ಮ 2026ರ ಐಪಿಎಲ್ ಅಭಿಯಾನವನ್ನು ಏಪ್ರಿಲ್ 1 ರಂದು ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಆರಂಭಿಸಲಿದೆ. ಏಪ್ರಿಲ್ 4 ರಂದು ತವರು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
Axar Patel -
ನವದೆಹಲಿ, ಮಾ.24: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್(Axar Patel) ಐಪಿಎಲ್(IPL 2026)ನಲ್ಲಿ ಇಂಪ್ಯಾಕ್ಟ್ ಪ್ಲೇಯರ್(Impact Player rule) ನಿಯಮವನ್ನು ಟೀಕಿಸಿದ್ದಾರೆ. ಈ ನಿಮಯದಿಂದ ಇದರಿಂದ ಆಲ್‌ರೌಂಡರ್ ಆಟಗಾರರ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸಿರಾಜ್ ಮತ್ತು ಹಾರ್ದಿಕ್ ಪಾಂಡ್ಯ ಅವರೂ ಈ ನಿಯಮದ ವಿರುದ್ಧ ಮಾತನಾಡಿದ್ದರು.
2023ರಲ್ಲಿ ಈ ನಿಯಮ ಜಾರಿಗೆ ತರಲಾಯಿತು. ಈ ನಿಯಮದ ಅನ್ವಯ, ಐವರು ಸಬ್‌ಸ್ಟಿಟ್ಯೂಟ್ ಆಟಗಾರರಲ್ಲಿ ಯಾರಾದರೂ ಒಬ್ಬರು ಪಂದ್ಯದ ಯಾವುದೇ ಹಂತದಲ್ಲಿ ‘ಇಂಪ್ಯಾಕ್ಟ್ ಆಟಗಾರ’ನಾಗಿ ಕಣಕ್ಕಿಳಿಯಲು ಅವಕಾಶವಿದೆ.
‘ಈ ಹಿಂದೆ, ಈ ಪಾತ್ರಕ್ಕೆ ನಾವು ಆಲ್‌ರೌಂಡ್ ಆಟಗಾರನ ಆಯ್ಕೆ ಮಾಡುತ್ತಿದ್ದೆವು. ಈಗ ಟೀಮ್ ಮ್ಯಾನೇಜ್‌ಮೆಂಟ್ ಸಹ ನಿರ್ದಿಷ್ಟ ಬ್ಯಾಟರ್ ಅಥವಾ ಬೌಲರ್‌ನನ್ನು ಆಯ್ಕೆ ಮಾಡುತ್ತಿದೆ. ನಮಗೆ ಆಲ್‌ರೌಂಡರ್ ಏಕೆ ಬೇಕು ಎಂದು ಕೇಳುತ್ತಿದೆ’ ಎಂದು ಅಕ್ಷರ್ ಅಸಮಾಧಾನ ವ್ಯಕ್ತಪಡಿಸಿದರು.
19ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆಂದು ಹೆಡ್ ಕೋಚ್ ಹೇಮಾಂಗ್ ಬದಾನಿ ಸ್ಪಷ್ಟಪಡಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಆರಂಭಿಕ ಕೋಡಿಯಿಂದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರಂಭಿಕ ಜೋಡಿಯನ್ನು ಬದಲಾವಣೆ ಮಾಡಲು ಟೀಮ್ ಮ್ಯಾನೇಜ್‌ಮೆಂಟ್ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಸೋಮವಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ತಿಳಿಸಿದ್ದಾರೆ.
IPL 2026: ಕೆಎಲ್ ರಾಹುಲ್‌ಗೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ಡಿಸಿ ಕೋಚ್ ಹೇಮಾಂಗ್ ಬದಾನಿ!
ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮ್ಮ 2026ರ ಐಪಿಎಲ್ ಅಭಿಯಾನವನ್ನು ಏಪ್ರಿಲ್ 1 ರಂದು ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಆರಂಭಿಸಲಿದೆ. ಏಪ್ರಿಲ್ 4 ರಂದು ತವರು ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ನಂತರ ಏಪ್ರಿಲ್ 8 ರಂದು ಗುಜರಾತ್ ಟೈಟನ್ಸ್ ತಂಡಕ್ಕೆ ಆತಿಥ್ಯ ನೀಡಲಿದೆ. ಬಳಿಕ ಏಪ್ರಿಲ್ 11 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲು ಚೆನ್ನೈಗೆ ಡೆಲ್ಲಿ ಆಟಗಾರರು ಪ್ರಯಾಣಿಲಿಸಲಿದ್ದಾರೆ. ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಈ ಋಉತುವಿನಲ್ಲಿಯೂ ಮುನ್ನಡೆಸಲಿದ್ದಾರೆ. ಇವರ ನಾಯಕತ್ವದಲ್ಲಿ ಡೆಲ್ಲಿ 2025ರ ಟೂರ್ನಿಯಲ್ಲಿ ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ತೋರಿತು, ಆದರೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿರಲಿಲ್ಲ.