ಗೆದ್ದರೂ 12 ಲಕ್ಷ ರೂ. ದಂಡಕ್ಕೆ ಗುರಿಯಾದ ರಿಷಭ್ ಪಂತ್
IPL 2026: ಶುಕ್ರವಾರ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 188 ರನ್‌ಗಳನ್ನು ಸುಲಭವಾಗಿ ಬೆನ್ನಟ್ಟುವ ಮೂಲಕ ಎಲ್‌ಎಸ್‌ಜಿ ತಂಡ ಸಿಎಸ್‌ಕೆಗೆ ಸೋಲುಣಿಸಿತು. ಮಿಚೆಲ್ ಮಾರ್ಷ್ ಅವರ 38 ಎಸೆತಗಳಲ್ಲಿ 90 ರನ್‌ಗಳ ಭರ್ಜರಿ ಅರ್ಧ ಶತಕದ ನೆರವಿನಿಂದ ಎಲ್‌ಎಸ್‌ಜಿ 16.4 ಓವರ್‌ಗಳಲ್ಲಿ ಏಳು ವಿಕೆಟ್‌ಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.
Rishabh Pant -
ಲಖನೌ, ಮೇ 16: ಚೆನ್ನೈ ಸೂಪರ್ ಕಿಂಗ್ಸ್(LSG vs CSK) ವಿರುದ್ಧದ ಭರ್ಜರಿ ಗೆಲುವಿನ ಹೊರತಾಗಿಯೂ, ಐಪಿಎಲ್(IPL 2026) ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಖನೌ ಸೂಪರ್ ಜೇಂಟ್ಸ್(LSG vs CSK) ತಂಡದ ನಾಯಕ ರಿಷಭ್ ಪಂತ್(Rishabh Pant)ಗೆ ಬಿಸಿಸಿಐ ಭಾರೀ ದಂಡ ವಿಧಿಸಿದೆ. ಪಂದ್ಯದಲ್ಲಿ ನಿಧಾನಗತಿಯ ಓವರ್ ದರ ಕಾಯ್ದುಕೊಂಡಿದ್ದಕ್ಕಾಗಿ ಪಂತ್‌ಗೆ 12 ಲಕ್ಷ ರೂ. ದಂಡ ವಿಧಿಸಿದೆ.
"ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ, ಕನಿಷ್ಠ ಓವರ್-ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ, ರಿಷಭ್ ಪಂತ್ ತಂಡವು ಈ ಋತುವಿನಲ್ಲಿ ಮೊದಲ ಅಪರಾಧವಾಗಿರುವುದರಿಂದ, ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ" ಎಂದು ಐಪಿಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ಋತುವಿನಲ್ಲಿ ಬಿಸಿಸಿಐ ಹಲವಾರು ನಾಯಕರಿಗೆ ದಂಡ ವಿಧಿಸಿದೆ. ಮೇ 12 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್‌ಗಾಗಿ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಪ್ಯಾಟ್ ಕಮ್ಮಿನ್ಸ್ ಅವರನ್ನು ದಂಡಿಸಿತ್ತು. ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ ಮತ್ತು ಶುಭ್‌ಮನ್ ಗಿಲ್ ಅವರಂತಹ ಆಟಗಾರರಿಗೂ ತಮ್ಮ ತಂಡಗಳ ನಿಧಾನಗತಿಯ ಓವರ್ ರೇಟ್‌ಗಾಗಿ ದಂಡ ವಿಧಿಸಲಾಗಿದೆ. ಇದೀಗ ಈ ಪಟ್ಟಿಗೆ ಪಂತ್ ಸೇರ್ಪಡೆಗೊಂಡಿದ್ದಾರೆ.
ಶುಕ್ರವಾರ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 188 ರನ್‌ಗಳನ್ನು ಸುಲಭವಾಗಿ ಬೆನ್ನಟ್ಟುವ ಮೂಲಕ ಎಲ್‌ಎಸ್‌ಜಿ ತಂಡ ಸಿಎಸ್‌ಕೆಗೆ ಸೋಲುಣಿಸಿತು. ಮಿಚೆಲ್ ಮಾರ್ಷ್ ಅವರ 38 ಎಸೆತಗಳಲ್ಲಿ 90 ರನ್‌ಗಳ ಭರ್ಜರಿ ಅರ್ಧ ಶತಕದ ನೆರವಿನಿಂದ ಎಲ್‌ಎಸ್‌ಜಿ 16.4 ಓವರ್‌ಗಳಲ್ಲಿ ಏಳು ವಿಕೆಟ್‌ಗಳು ಬಾಕಿ ಇರುವಾಗಲೇ ಗುರಿಯನ್ನು ತಲುಪಿತು.
ಲಖನೌ ವಿರುದ್ಧ ಸೋತ ಚೆನ್ನೈ ತಂಡದ ಪ್ಲೇ-ಆಫ್ ಲೆಕ್ಕಾಚಾರ ಹೇಗಿದೆ?
"ಗೆಲುವು ಸಾಧಿಸುವುದು ಖಂಡಿತವಾಗಿಯೂ ಒಳ್ಳೆಯದೆನಿಸುತ್ತಿದೆ. ನಮ್ಮ ಋತುವು ಎಲ್ಲಿ ಕೊನೆಗೊಂಡರೂ ನಾವು ಮಾತನಾಡುವ ವಿಷಯಗಳಿವೆ, ಆಡಲು ಬಹಳಷ್ಟು ವಿಷಯಗಳಿವೆ. ಈ ರೀತಿ ಆಡುವುದರಲ್ಲಿ ನಮಗೆ ತುಂಬಾ ಹೆಮ್ಮೆ ಇದೆ" ಎಂದು ಎಲ್‌ಎಸ್‌ಜಿ ನಾಯಕ ಪಂತ್ ಪಂದ್ಯದ ನಂತರದ ಪ್ರಸ್ತುತಿಯ ಸಂದರ್ಭದಲ್ಲಿ ಹೇಳಿದರು.
ಏತನ್ಮಧ್ಯೆ, ಸತತ ಮೂರು ವಿಕೆಟ್‌ಗಳು ಬಿದ್ದರೂ ಎಲ್‌ಎಸ್‌ಜಿ ನಾಯಕ ಬ್ಯಾಟಿಂಗ್‌ಗೆ ಬರಲಿಲ್ಲ. ಅಬ್ದುಲ್ ಸಮದ್ ಮತ್ತು ಮುಕುಲ್ ಚೌಧರಿಯಂತಹ ಆಟಗಾರರನ್ನು ಮೇಲಿನ ಕ್ರಮಾಂಕದಲ್ಲಿ ಆಡಲು ಕಳುಸಿದರು. ಈ ಬಗ್ಗೆಯೂ ಸ್ಪಷ್ಟನೆ ನೀಡಿದ ಪಂತ್, "ನೋಡಿ, ನಾನು ಬ್ಯಾಟಿಂಗ್ ಮಾಡಲು ಸಿದ್ಧನಾಗಿದ್ದೆ. ನಾನು ಡ್ರೆಸ್ಸಿಂಗ್ ಕೋಣೆಯಲ್ಲಿದ್ದೆ. ಆಗ ನನಗೆ ಈ ಐಡಿಯಾ ಬಂದಿತು. ಹೆಚ್ಚು ಆಡದ ಆಟಗಾರರನ್ನು ಏಕೆ ಪ್ರಯತ್ನಿಸಬಾರದು, ಅವರಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿಲ್ಲ, ಮತ್ತು ಅದೇ ಐಡಿಯಾ ಆಗಿತ್ತು. ನಾನು ಅದನ್ನು ಮಾಡಬೇಕೇ ಅಥವಾ ಬೇಡವೇ ಎಂದು ಮತ್ತೆ ಮತ್ತೆ ಯೋಚಿಸುತ್ತಿದ್ದೆ. ಕೆಲವು ವಿಷಯಗಳನ್ನು ಗೌರವಿಸಬೇಕಾಗುತ್ತದೆ" ಎಂದು ಅವರು ಹೇಳಿದರು.