ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಫ್ಘಾನ್‌ ಸರಣಿ; ಬುಮ್ರಾಗೆ ಪರ್ಯಾಯ ಆಯ್ಕೆಯಾಗಿ ಎಲ್‌ಎಸ್‌ಜಿ ವೇಗಿ ಆಯ್ಕೆ ಮಾಡಿದ ಬಿಸಿಸಿಐ

Jasprit Bumrah: ಜಸ್‌ಪ್ರೀತ್‌ ಬುಮ್ರಾ ವೇಗಿ ಬಹಳ ಸಮಯದಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಜುಲೈ 16 ರಂದು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬುಮ್ರಾ ಅವರ ಮೊಣಕಾಲಿಗೆ ನೋವುಂಟಾಗಿತ್ತು. ಆ ಪಂದ್ಯದ ನಂತರ ಅವರು ಬೌಲಿಂಗ್ ಮಾಡಿಲ್ಲ ಮತ್ತು ಅವರ ಚೇತರಿಕೆಯ ಪ್ರಕ್ರಿಯೆಯು ಮುಂದುವರೆದಿದೆ.

ಆಫ್ಘಾನ್‌ ಸರಣಿ; ಬುಮ್ರಾಗೆ ಪರ್ಯಾಯ ಆಯ್ಕೆಯಾಗಿ ಪ್ರಿನ್ಸ್ ಯಾದವ್ ಆಯ್ಕೆ

bumrah and prince yadav -

Abhilash BC
Abhilash BC Sep 5, 2026 12:06 PM

ಬೆಂಗಳೂರು, ಸೆ. 5: ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಬಿಸಿಸಿಐ ವೈದ್ಯಕೀಯ ತಂಡದಿಂದ ಇನ್ನೂ ಫಿಟ್ನೆಸ್ ಅನುಮತಿ ಸಿಕ್ಕಿಲ್ಲ. ಮುಂಬರುವ ಅಫ್ಘಾನಿಸ್ತಾನ ಟಿ20ಐ ಹಾಗೂ 2026 ರ ಏಷ್ಯನ್ ಗೇಮ್ಸ್ ತಂಡಗಳಲ್ಲಿ ಅವರನ್ನು ಇರಿಸಲಾಗಿದ್ದರೂ, ಅವರ ಭಾಗವಹಿಸುವಿಕೆಯು ಫಿಟ್ನೆಸ್‌ಗೆ ಒಳಪಟ್ಟಿರುತ್ತದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆದಾರರು ಪ್ರಿನ್ಸ್ ಯಾದವ್ ಅವರನ್ನು ಬುಮ್ರಾಗೆ ಸಂಭವನೀಯ ಬ್ಯಾಕಪ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಜಸ್‌ಪ್ರೀತ್‌ ಬುಮ್ರಾ ವೇಗಿ ಬಹಳ ಸಮಯದಿಂದ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ. ಜುಲೈ 16 ರಂದು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಬುಮ್ರಾ ಅವರ ಮೊಣಕಾಲಿಗೆ ನೋವುಂಟಾಗಿತ್ತು. ಆ ಪಂದ್ಯದ ನಂತರ ಅವರು ಬೌಲಿಂಗ್ ಮಾಡಿಲ್ಲ ಮತ್ತು ಅವರ ಚೇತರಿಕೆಯ ಪ್ರಕ್ರಿಯೆಯು ಮುಂದುವರೆದಿದೆ.

ಅಫ್ಘಾನಿಸ್ತಾನ ಸರಣಿಗೂ ಮುನ್ನ ಬುಮ್ರಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಮತ್ತು ಹರ್ಷಿತ್ ರಾಣಾ ಸೆಪ್ಟೆಂಬರ್ 10 ರಂದು ದೆಹಲಿಯಲ್ಲಿ ತಂಡವನ್ನು ಸೇರಲು ಅನುಮತಿ ಪಡೆಯುವ ಮೊದಲು ಒಂದು ವಾರದ ಅವಧಿಯಲ್ಲಿ ಅಭ್ಯಾಸ ಪಂದ್ಯವಾಡಬೇಕಿದೆ.

ಭಾರತದ ಮಾಜಿ ಆಟಗಾರ ಬದ್ರಿನಾಥ್ ಇತ್ತೀಚೆಗೆ ಬುಮ್ರಾ ಅವರನ್ನು ಸರಿಯಾಗಿ ನಿಭಾಯಿಸದಿದ್ದಕ್ಕಾಗಿ ತಂಡದ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಳೆದ ವರ್ಷ ಜನವರಿಯಲ್ಲಿ ಬೆನ್ನುನೋವಿನಿಂದ ಬಳಲುತ್ತಿದ್ದ ವೇಗಿ ಅವರ ಕೆಲಸದ ಹೊರೆಯನ್ನು ನಿರ್ವಹಿಸುವತ್ತ ಬಿಸಿಸಿಐ ಗಮನಹರಿಸಿದೆ, ಆದರೆ ಫಲಿತಾಂಶಗಳು ಪ್ರಭಾವಶಾಲಿಯಾಗಿಲ್ಲ ಎಂದು ಹೇಳಿದ್ದರು.

100ನೇ ಪ್ರಥಮ ದರ್ಜೆ ಪಂದ್ಯನ್ನಾಡಲಿರುವ ಮೊಹಮ್ಮದ್‌ ಶಮಿಗೆ ಬಂಗಾಳ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಸನ್ಮಾನ

ಬುಮ್ರಾ ಹೊರತುಪಡಿಸಿ, ಭಾರತ ತಂಡವು ಇತರ ಆಟಗಾರರ ಗಾಯಗಳನ್ನು ಎದುರಿಸುತ್ತಿದೆ. ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ, ನಿತೇಶ್‌ ರೆಡ್ಡಿ, ವೇಗಿ ಹರ್ಷಿತ್, ಸ್ಪಿನ್-ಬೌಲಿಂಗ್ ಆಲ್‌ರೌಂಡರ್ ಸುಂದರ್ ಮತ್ತು ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್ ಎಲ್ಲರೂ ತಮ್ಮ ಗಾಯಗಳಿಂದಾಗಿ ಪ್ರಸ್ತುತ ಆಟದಿಂದ ಹೊರಗುಳಿದಿದ್ದಾರೆ.

ಆಫ್ಘಾನ್‌ ಸರಣಿಯಲ್ಲಿ ಭಾರತ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ ಮತ್ತು ತಿಲಕ್ ವರ್ಮಾ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಸೆಪ್ಟೆಂಬರ್ 13, 15 ಮತ್ತು 17 ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಿಗದಿಯಾಗಿವೆ.

ಆಫ್ಘಾನ್‌ ಸರಣಿಗೆ ಭಾರತ ತಂಡ

ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್‌ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್‌ ವರ್ಮಾ (ಉಪ ನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್*, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್‌ಪ್ರೀತ್ ಬೂಮ್ರಾ*, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ*. (*ಫಿಟ್ನೆಸ್ ಹೊಂದಿರಬೇಕೆಂಬ ಷರತ್ತು ಹೊಂದಿರುವವರು).