ಬೆಂಗಳೂರು ಬಾಲಕಿಯರು ಎಸಿಜಿ ಜೂನಿಯರ್ ಎನ್.ಬಿ.ಎ 3ವಿ3 ಆಲ್-ಸ್ಟಾರ್ ಚಾಂಪಿಯನ್ ಶಿಪ್ ಗೆಲುವು; ಬಾಲಕರು ರನ್ನರ್-ಅಪ್
ಎಸಿಜಿ ಮೋಸ್ಟ್ ಇಂಪ್ರೂವ್ಡ್ ಟೀಂ ವಿಭಾಗದಲ್ಲಿ ಇಂದೋರ್ ನ ಶಿಶುಕುಂಜ್ ಇಂಟರ್ನ್ಯಾಷ ನಲ್ ಸ್ಕೂಲ್ (ಯು-14 ಬಾಲಕಿಯರು) ಮತ್ತು ಉದಯಪುರದ ಎಸ್.ಕೆ. ಸ್ಕೂಲ್ (ಯು-14 ಬಾಲಕರು) ಅವರ ಅಸಾಧಾರಣ ಪ್ರಗತಿ ಮತ್ತು ಇಡೀ ಟೂರ್ನಮೆಂಟ್ ನಲ್ಲಿ ಅವರ ಅಭಿವೃದ್ಧಿಗೆ ಪುರಸ್ಕಾರ ಪಡೆದರು.
-
ಯು-14 ಆಟಗಾರರ ಭಾರತದ ಅತ್ಯಂತ ದೊಡ್ಡ ಶಾಲಾ ಬ್ಯಾಸ್ಕೆಟ್ ಬಾಲ್ ಕಾರ್ಯಕ್ರಮ 2025-26 ಎಸಿಜಿ ಜೂನಿಯರ್ ಎನ್.ಬಿ.ಎ.3v3 ಯಶಸ್ವಿಯಾಗಿ ಸಮಾರೋಪಗೊಂಡಿದ್ದು ದೆಹಲಿಯ ನೆಹರೂ ವರ್ಲ್ಡ್ ಸ್ಕೂಲ್ ಬಾಲಕರ ಶೀರ್ಷಿಕೆ ಗೆದ್ದರೆ ಲೂಧಿಯಾನದ ಸೇಕ್ರೆಡ್ ಹಾರ್ಟ್ ಸೀನಿಯರ್ ಸೆಕೆಂಡರಿ ಸ್ಕೂಲ್ ಬಾಲಕಿಯರ ಶೀರ್ಷಿಕೆ ಗೆದ್ದಿತು.
ಎಸಿಜಿ ಜೂನಿಯರ್ ಎನ್.ಬಿ.ಎ 3v3 ಆಲ್-ಸ್ಟಾರ್ ಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರು ಆಲ್-ಸ್ಟಾರ್ ಟೀಂ ಬಾಲಕಿಯರ ಶೀರ್ಷಿಕೆ ಗೆದ್ದಿತು. ಬೆಂಗಳೂರಿನ ಬಾಲಕರ ತಂಡವು ರನ್ನರ್-ಅಪ್ ಆದರೆ ದೆಹಲಿಯ ಆಲ್-ಸ್ಟಾರ್ ತಂಡವು ಬಾಲಕರ ಚಾಂಪಿಯನ್ ಶಿಪ್ ಗೆದ್ದಿತು.
ಎಸಿಜಿ ಮೋಸ್ಟ್ ಇಂಪ್ರೂವ್ಡ್ ಟೀಂ ವಿಭಾಗದಲ್ಲಿ ಇಂದೋರ್ ನ ಶಿಶುಕುಂಜ್ ಇಂಟ ರ್ನ್ಯಾಷನಲ್ ಸ್ಕೂಲ್ (ಯು-14 ಬಾಲಕಿಯರು) ಮತ್ತು ಉದಯಪುರದ ಎಸ್.ಕೆ. ಸ್ಕೂಲ್ (ಯು-14 ಬಾಲಕರು) ಅವರ ಅಸಾಧಾರಣ ಪ್ರಗತಿ ಮತ್ತು ಇಡೀ ಟೂರ್ನಮೆಂಟ್ ನಲ್ಲಿ ಅವರ ಅಭಿವೃದ್ಧಿಗೆ ಪುರಸ್ಕಾರ ಪಡೆದರು.
ಇದನ್ನೂ ಓದಿ: IPL 2026: ಆರ್‌ಸಿಬಿಯನ್ನು ಗೆಲ್ಲಿಸಿ ಪತ್ನಿ ಅನುಷ್ಕಾ ಶರ್ಮಾಗೆ ಫ್ಲೈಯಿಂಗ್ ಕಿಸ್ ಕೊಟ್ಟ ವಿರಾಟ್ ಕೊಹ್ಲಿ!
ಲೂಧಿಯಾನದ ಸೇಕ್ರೆಡ್ ಹಾರ್ಟ್ ಸ್ಕೂಲ್ ನ ಜಿಯಾ ಸೋಧಿ (ಯು-14 ಬಾಲಕಿಯರು) ಮತ್ತು ದೆಹಲಿಯ ನೆಹರೂ ವರ್ಲ್ಡ್ ಸ್ಕೂಲ್ ನ ಜತಿನ್ ಶರ್ಮಾ (ಯು-14 ಬಾಲಕರು) `ಸ್ಕೆಚರ್ಸ್ ಮೋಸ್ಟ್ ವ್ಯಾಲ್ಯುಯಬಲ್ ಪ್ಲೇಯರ್’ ಪ್ರಶಸ್ತಿ ಪಡದರು.
ವೈಯಕ್ತಿಕ ಪ್ರಮುಖಾಂಶಗಳಲ್ಲಿ ಮುಂಬೈ ಆಲ್-ಸ್ಟಾರ್ ತಂಡದ (ಯು-14 ಬಾಲಕಿಯರು) ಧ್ರುವಿ ಪಿಸಲ್ 71 ಅಂಕಗಳೊಂದಿಗೆ ಟಾಪ್ ಸ್ಕೋರರ್ ಆದರು, ಮಾ ಶಾರದಾ ಪಬ್ಲಿಕ್ ಸ್ಕೂಲ್ ನ ಪಿ. ಅಂತರ ರಾವ್ ಅತ್ಯಂತ 3-ಪಾಯಿಂಟರ್ ಗಳನ್ನು ದಾಖಲಿಸಿದರು. ಯು-14 ಬಾಲಕರ ವಿಭಾಗದಲ್ಲಿ ಪ್ರಯಾಗರಾಜ್ ನ ಮಹಾರಾಣಾ ಪ್ರತಾಪ್ ಇಂಟರ್ ಕಾಲೇಜಿನ ಮೊಹಮ್ಮದ್ ಸಮೀರ್ 97 ಪಾಯಿಂಟ್ ಗಳು ಮತ್ತು 28- ಥ್ರೀ ಪಾಯಿಂಟರ್ಸ್ ಮೂಲಕ ಸಾಧನೆ ಮೆರೆದರು.
ಎಸಿಜಿ ಜೂನಿಯರ್ ಎನ್.ಬಿ.ಎ. 3v3 ರಾಷ್ಟ್ರೀಯ ಫೈನಲ್ಸ್ ಭಾರತದಾದ್ಯಂತ ಬೆಂಗಳೂರು, ಚೆನ್ನೈ, ದೆಹಲಿ, ಗೌಹಾಟಿ, ಇಂದೋರ್, ಕೊಚ್ಚಿ, ಲೂಧಿಯಾನ, ಮುಂಬೈ, ಪ್ರಯಾಗರಾಜ್, ಉದಯಪುರ್ ಒಳಗೊಂಡು ಭಾರತದಾದ್ಯಂತ ಹತ್ತು ನಗರಗಳಲ್ಲಿ ನಡೆದ ರೀಜನಲ್ ಟೂರ್ಮಮೆಂಟ್ ಗಳ ಸಮಾರೋಪವಾಗಿದೆ. ಈ ವರ್ಷದ ಕಾರ್ಯಕ್ರಮದಲ್ಲಿ ಭಾರತದ 900+ ಶಾಲೆಗಳಿಂದ 8000 ಮಕ್ಕಳು ಭಾಗವಹಿಸಿದ್ದರು.
ಈ ಟೂರ್ನಮೆಂಟ್ ಅನ್ನು ಬ್ಯಾಸ್ಕೆಟ್ ಬಾಲ್ ಫೆಡರೇಷನ್ ಆಫ್ ಇಂಡಿಯಾ (ಬಿ.ಎಫ್.ಐ.), ಸಹಯೋಗದಲ್ಲಿ ಜಾಗತಿಕ ಪರ್ಫಾರ್ಮೆನ್ಸ್ ಹಾಗೂ ಜೀವನಶೈಲಿ ಮತ್ತು ಉಡುಪಿನ ಬ್ರಾಂಡ್ ಸ್ಕೆಚರ್ಸ್ ಅಧಿಕೃತ ಕಿಟ್ ಪಾಲುದಾರರಾಗಿ ಆಯೋಜಿಸಲಾಗಿದ್ದು, ಭಾಗವಹಿಸಿ ದವರಿಗೆ ಉನ್ನತ ಗುಣಮಟ್ಟದ ಗೇರ್ ನೀಡಿದರು.
ಆರು ದಿನದ ರಾಷ್ಟ್ರೀಯ ಫೈನಲ್ಸ್ ಮಾರ್ಚ್ 19-24, 2026ರಿಂದ ನವದೆಹಲಿಯ ಕೆ.ಡಿ. ಜಾಧವ್ ಇಂಡೋರ್ ಅರೇನಾದಲ್ಲಿ ನಡೆದಿದ್ದು ಅದರಲ್ಲಿ ಅಂಗಳದ ಸ್ಪರ್ಧೆ ಮತ್ತು ಅಂಗಳದಾಚೆಗಿನ ಭಾಗವಹಿಸುವಿಕೆ ಒಳಗೊಂಡಿದ್ದು ಅದರಲ್ಲಿ ಟ್ರೋಫಿ ಅನಾವರಣ ಮತ್ತು ಎಲ್ಲ ಆಟಗಾರರಿಗೂ ಸಂವಹನೀಯ ಎಂಗೇಜ್ಮೆಂಟ್ ಝೋನ್ ಇತ್ತು. ಹೆಚ್ಚುವರಿ ಯಾಗಿ ಈ ಕಾರ್ಯಕ್ರಮವನ್ನು ಎನ್.ಬಿ.ಎ. ಜಿ ಲೀಗ್ ಮತ್ತು ಬ್ಯಾಸ್ಕೆಟ್ ಬಾಲ್ ಆಫ್ರಿಕಾ ಲೀಗ್ (ಬಿ.ಎ.ಎಲ್.) ರೆಫರೀ ಗ್ರೆಗ್ ಡ್ಯಾಂಡ್ರಿಡ್ಜ್ ನೇತೃತ್ವದ ಎಸಿಜಿ ಜೂನಿಯರ್ ಎನ್.ಬಿ.ಎ. ರೆಫರೀ ಕ್ಲಿನಿಕ್ ಆಯೋಜಿಸಿದ್ದು ಅಧಿಕಾರಿಗಳಿಗೆ ಅವರ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮೌಲ್ಯಯುತ ಅವಕಾಶವನ್ನು ಒದಗಿಸಿತು.
ಎಸಿಜಿ ಜೂನಿಯರ್ ಎನ್.ಬಿ.ಎ ಕೋಚಸ್ ಕ್ಲಿನಿಕ್ ಅನ್ನು ಎಚ್.ಪಿ.ಸಿ.-ಇಂಡಿಯಾ ಬ್ಯಾಸ್ಕೆಟ್ ಬಾಲ್ ಲೀಗ್ ಪುರುಷರ ಬ್ಯಾಸ್ಕೆಟ್ ಬಾಲ್ ಹೆಡ್ ಕೋಚ್ ಜೇಕ್ ಜೊಬ್ಲಿಂಗ್ ನಿರ್ವಹಿಸಿದ್ದು ಈ ಕಾರ್ಯಕ್ರಮವನ್ನು ಮತ್ತಷ್ಟು ಶ್ರೀಮಂತಗೊಳಿಸಿತು.
ಎಸಿಜಿ ಜೂನಿಯರ್ ಎನ್.ಬಿ.ಎ 3v3 ರಾಷ್ಟ್ರೀಯ ಟೂರ್ನಮೆಂಟ್ ಫಲಿತಾಂಶಗಳು:
ಎಸಿಜಿ ಜೂನಿಯರ್ ಎನ್.ಬಿ.ಎ 3v3 ರಾಷ್ಟ್ರೀಯ ಫೈನಲ್ಸ್
ವಿಭಾಗ
ಯು-14 ಬಾಲಕರು
ಯು-14 ಬಾಲಕಿಯರು
ವಿಜೇತರು
ನೆಹರೂ ವರ್ಲ್ಡ್ ಸ್ಕೂಲ್, ದೆಹಲಿ
ಸೇಕ್ರೆಡ್ ಹಾರ್ಟ್ ಸೀನಿಯರ್ ಸೆಕೆಂಡರಿ ಸ್ಕೂಲ್, ಲೂಧಿಯಾನ
1ನೇ ರನ್ನರ್-ಅಪ್
ಮಹಾರಾಣಾ ಪ್ರತಾಪ್ ಇಂಟರ್ನ್ಯಾಷನಲ್ ಸ್ಕೂಲ್, ಪ್ರಯಾಗರಾಜ್
ಪ್ರಾವಿಡೆನ್ಸ್ ಗರ್ಲ್ಸ್ ಹೈಯರ್ ಸೆಕೆಂಡರಿ ಸ್ಕೂಲ್, ಕೊಚ್ಚಿ
2ನೇ ರನ್ನರ್-ಅಪ್
ಐಟಿಎಂ ಗ್ಲೋಬಲ್ ಸ್ಕೂಲ್, ಇಂದೋರ್
ಮಾ ಶಾರದಾ ಪಬ್ಲಿಕ್ ಸ್ಕೂಲ್, ಪ್ರಯಾಗರಾಜ್
ಎಸಿಜಿ ಜೂನಿಯರ್ ಎನ್.ಬಿ.ಎ 3v3ಆಲ್-ಸ್ಟಾರ್ ಚಾಂಪಿಯನ್ ಶಿಪ್ ವಿಭಾಗ
ಯು-14 ಬಾಲಕರು
ಯು-14 ಬಾಲಕಿಯರು
ವಿಜೇತರು
ದೆಹಲಿ ಆಲ್-ಸ್ಟಾರ್ ಬಾಲಕರ ತಂಡ
ಬೆಂಗಳೂರು ಆಲ್-ಸ್ಟಾರ್ ಬಾಲಕಿಯರ
ತಂಡ
1ನೇ ರನ್ನರ್-ಅಪ್
ಬೆಂಗಳೂರು ಆಲ್-ಸ್ಟಾರ್ ಬಾಲಕರ ತಂಡ
ಚೆನ್ನೈ ಆಲ್-ಸ್ಟಾರ್ ಬಾಲಕಿಯರ ತಂಡ
2ನೇ ರನ್ನರ್-ಅಪ್
ಲೂಧಿಯಾನ ಆಲ್-ಸ್ಟಾರ್ ಬಾಲಕರ ತಂಡ
ಮುಂಬೈ ಆಲ್-ಸ್ಟಾರ್ ಬಾಲಕಿಯರ ತಂಡ
ಎಸಿಜಿ ಅತ್ಯಂತ ಸುಧಾರಿತ ತಂಡ
ವಿಭಾಗ
ಯು-14 ಬಾಲಕರು
ಯು-14 ಬಾಲಕಿಯರು
ವಿಜೇತರು
ಎಸ್.ಕೆ.ಸ್ಕೂಲ್, ಉದಯಪುರ
ಶಿಶುಕುಂಜ್ ಇಂಟರ್ನ್ಯಾಷನಲ್ ಸ್ಕೂಲ್, ಇಂದೋರ್
ಎಸಿಜಿ ಜೂನಿಯರ್ ಎನ್.ಬಿ.ಎ ಕಾರ್ಯಕ್ರಮವು ಭಾರತೀಯ ಯುವಜನರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಬ್ಯಾಸ್ಕೆಟ್ ಬಾಲ್ ಮೂಲಭೂತ ಅಂಶಗಳು ಮತ್ತು ಮೌಲ್ಯಗಳನ್ನು ಬೋಧಿಸುವುದನ್ನು ಮುಂದುವರಿಸುತ್ತದೆ. ಭಾರತದಲ್ಲಿ 2013ರಿಂದ ಪ್ರಾರಂಭವಾದ ದಿನದಿಂದಲೂ ಜೂನಿಯರ್ ಎನ್.ಬಿ.ಎ ಕಾರ್ಯಕ್ರಮವು ದೇಶದ 35 ನಗರಗಳಲ್ಲಿ 15 ಮಿಲಿಯನ್ ಗೂ ಹೆಚ್ಚು ಯುವಜನರನ್ನು ಮತ್ತು 15,000 ದೈಹಿಕ ಶಿಕ್ಷಣ ಬೋಧಕರನ್ನು ತಲುಪಿದೆ. ಎಸಿಜಿ ಜೂನಿಯರ್ ಎನ್.ಬಿ.ಎ ಕಾರ್ಯಕ್ರಮವು ಭಾರತದಲ್ಲಿ ಎನ್.ಬಿ.ಎ.ಯ ವಿಸ್ತಾರ ಬೇರುಮಟ್ಟದ ಬ್ಯಾಸ್ಕೆಟ್ ಬಾಲ್ ಅಭಿವೃದ್ಧಿ ಪ್ರಯತ್ನಗಳ ಭಾಗವಾಗಿದ್ದು ಅದರಲ್ಲಿ 6-18 ವರ್ಷದ ಪುರುಷ ಹಾಗೂ ಮಹಿಳಾ ಆಟಗಾರರಿಗೆ 13 ನಗರಗಳಲ್ಲಿ ಟ್ಯೂಷನ್ ಆಧರಿಸಿದ ಬ್ಯಾಸ್ಕೆಟ್ ಬಾಲ್ ಅಭಿವೃದ್ಧಿ ಕಾರ್ಯಕ್ರಮದ ಜಾಲ ಹೊಂದಿದೆ.
ಆಟಗಾರರು, ತರಬೇತುದಾರರು ಮತ್ತು ಕುಟುಂಬಗಳು ಈ ವರ್ಷದ ಎಸಿಜಿ ಜೂನಿಯರ್ ಎನ್.ಬಿ.ಎ ಕಾರ್ಯಕ್ರಮ ಕುರಿತು ಭಾರತದಲ್ಲಿ ಎನ್.ಬಿ.ಎ.ಯ ಸಾಮಾಜಿಕ ಮಾಧ್ಯಮದ ಚಾನೆಲ್ ಗಳಲ್ಲಿ ಫೇಸ್ ಬುಕ್, ಇನ್ಸ್ಟಾಗ್ರಾಮ್, ಎಕ್ಸ್ ಮತ್ತು ಯೂಟ್ಯೂಬ್ ಗಳಲ್ಲಿ ಫಾಲೋ ಮಾಡುವ ಮೂಲಕ ತಿಳಿಯಬಹುದು. ಅಭಿಮಾನಿಗಳು ಇತ್ತೀಚಿನ ಸುದ್ದಿಗಳು, ಅಪ್ಡೇಟ್ ಗಳು, ಸ್ಕೋರ್ ಗಳು, ಅಂಕಿ ಅಂಶಗಳು, ವೇಳಾಪಟ್ಟಿಗಳು, ವಿಡಿಯೋ ಗಳು ಮತ್ತಿತರವುಗಳಿಗೆ ಎನ್.ಬಿ.ಎ. ಆಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.