PM Modi: ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕ್ರೀಡಾ ನೀತಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ
PM Modi Independence Day speech: ಬೆಳಿಗ್ಗೆ 7.34 ಕ್ಕೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ ಬೆಳಿಗ್ಗೆ 9.17 ಕ್ಕೆ ಅದನ್ನು ಮುಕ್ತಾಯಗೊಳಿಸಿದರು. ಕಳೆದ ಬಾರಿ ಅವರು 98 ನಿಮಿಷಗಳ ಭಾಷಣ ಮಾಡಿ (1 ಗಂಟೆ 38 ನಿಮಿಷಗಳು) ದಾಖಲೆ ಬರೆದಿದ್ದರು. ಇಂದು ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ.


ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ(PM Modi Independence Day speech) ಪ್ರಯುಕ್ತ ಧ್ವಜಾರೋಹಣ ಮಾಡಿ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ(PM Modi), ಹತ್ತು ಹಲವು ವಿಚಾರಗಳನ್ನು ದೇಶದ ಜನರೆದುರು ಪ್ರಸ್ತಾಪಿಸಿದರು. ಈ ವೇಳೆ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯ ಬಗ್ಗೆಯ ಪ್ರತಿಕ್ರಿಯಿಸಿದ ಮೋದಿ, ಎಲ್ಲಾ ಹಂತಗಳಲ್ಲಿ ಕ್ರೀಡಾ ಶ್ರೇಷ್ಠತೆಯನ್ನು ಬೆಳೆಸಲು ಈ ಕ್ರೀಡಾ ನೀತಿ ಮೂಲಾಧಾರವಾಗಿದೆ ಎಂದರು.
"ಹೊಸ ಕ್ರೀಡಾ ನೀತಿ ಅತ್ಯಂತ ದೂರದ ಶಾಲೆಯಿಂದ ಒಲಿಂಪಿಕ್ಸ್ ವರೆಗೆ ಕ್ರೀಡೆಗಳಲ್ಲಿ ಬೆಳವಣಿಗೆಯನ್ನು ಖಚಿತಪಡಿಸುತ್ತದೆ. ಇದು ತಳಮಟ್ಟದಿಂದ ಗಣ್ಯ ಹಂತದವರೆಗೆ ಪ್ರತಿಭೆಯನ್ನು ಪೋಷಿಸುವ ಬಗ್ಗೆ ನವೀಕೃತ ರಾಷ್ಟ್ರೀಯ ಗಮನವನ್ನು ಸೂಚಿಸುತ್ತದೆ" ಎಂದು ಮೋದಿ ಹೇಳಿದರು.
"ಕ್ರೀಡೆ ಅಭಿವೃದ್ಧಿಯ ಅತ್ಯಗತ್ಯ ಅಂಶವಾಗಿದೆ ಮತ್ತು ಪೋಷಕರು ಮಕ್ಕಳು ಕ್ರೀಡೆಯಲ್ಲಿ ಸಮಯ ಕಳೆಯುವುದನ್ನು ಅಪಹಾಸ್ಯ ಮಾಡುತ್ತಿದ್ದ ಕಾಲದಿಂದ ನಾವು ಈಗ ಅದು ಬದಲಾಗಿರುವ ಹಂತವನ್ನು ತಲುಪಿದ್ದೇವೆ ಎಂದು ನನಗೆ ಸಂತೋಷವಾಗಿದೆ. ಈಗ, ಮಕ್ಕಳು ಕ್ರೀಡೆಯಲ್ಲಿ ಆಸಕ್ತಿ ವಹಿಸಿದರೆ ಪೋಷಕರು ಸಂತೋಷಪಡುತ್ತಾರೆ" ಎಂದು ಅವರು ಹೇಳಿದರು. ಇದೇ ವೇಳೆ ಡಬಲ್ ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್ ಸೇರಿದಂತೆ ಹಲವು ಕ್ರೀಡಾಪಟುಗಳನ್ನು ಶ್ಲಾಘಿಸಿದರು.
ಇದನ್ನೂ ಓದಿ 79th Independence Day: ದೀಪಾವಳಿಗೆ ಸರ್ಕಾರದ ವತಿಯಿಂದ ಬಿಗ್ ಗಿಫ್ಟ್; ಜಿಎಸ್‌ಟಿ ಕುರಿತು ಮೋದಿ ಹೇಳಿದ್ದೇನು?
ಬೆಳಿಗ್ಗೆ 7.34 ಕ್ಕೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಮೋದಿ ಬೆಳಿಗ್ಗೆ 9.17 ಕ್ಕೆ ಅದನ್ನು ಮುಕ್ತಾಯಗೊಳಿಸಿದರು. ಕಳೆದ ಬಾರಿ ಅವರು 98 ನಿಮಿಷಗಳ ಭಾಷಣ ಮಾಡಿ (1 ಗಂಟೆ 38 ನಿಮಿಷಗಳು) ದಾಖಲೆ ಬರೆದಿದ್ದರು. ಇಂದು ಅವರು ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. 2015 ರಲ್ಲಿ 88 ನಿಮಿಷಗಳ (1 ಗಂಟೆ 28 ನಿಮಿಷಗಳು) ಭಾಷಣ ಮಾಡುವ ಮೂಲಕ ದಾಖಲೆ ಬರೆದಿದ್ದರು. 1947 ರಲ್ಲಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರು (1 ಗಂಟೆ 12 ನಿಮಿಷಗಳು) 72 ನಿಮಿಷಗಳ ಭಾಷಣ ಮಾಡಿದ್ದರು.