ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿಗೆ ಜೋಶ್‌ ತುಂಬಿದ ಜೋಶ್‌ ಹ್ಯಾಜಲ್‌ವುಡ್‌

ಶುಕ್ರವಾರ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ಡಿಟ್‌ ಡೇವಿಡ್‌ ಪಂದ್ಯದ ಕೊನೆಯ ಓವರ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನ ತೊರೆದಿದ್ದರು. ಆ ಬಳಿಕ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ದರು. ಅವರ ಸೇವೆ ಕಳೆದುಕೊಂಡರೆ ತಂಡಕ್ಕೆ ಭಾರೀ ನಷ್ಟ ಸಂಭವಿಸಲಿದೆ.

ಪ್ಲೇ ಆಫ್‌ಗೂ ಮುನ್ನ ಆರ್‌ಸಿಬಿಗೆ ಜೋಶ್‌ ತುಂಬಿದ ಜೋಶ್‌ ಹ್ಯಾಜಲ್‌ವುಡ್‌

Profile Abhilash BC May 25, 2025 3:46 PM

ಬೆಂಗಳೂರು: ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿರುವ ಕನ್ನಡಿಗರ ನೆಚ್ಚಿನ ತಂಡವಾದ ಆರ್‌ಸಿಬಿ(RCB)ಗೆ ಪ್ಲೇ ಆಫ್‌(IPL 2025 playoffs) ಪಂದ್ಯಕ್ಕೂ ಮುನ್ನ ಆನೆ ಬಲ ಬಂದಂತಾಗಿದೆ. ತಂಡದ ಪ್ರಧಾನ ವೇಗಿ ಜೋಶ್‌ ಹ್ಯಾಜಲ್‌ವುಡ್‌(Josh Hazlewood) ಗಾಯದಿಂದ ಸಂಪೂರ್ಣ ಚೇತರಿಸಿಕೊಂಡು ತಂಡ ಸೇರಿದ್ದಾರೆ. ಆದರೆ ಅವರು ಕೊನೆಯ ಲೀಗ್‌(IPL 2025) ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ನೇರವಾಗಿ ಪ್ಲೇ ಆಫ್‌ ಪಂದ್ಯದಲ್ಲಿಯೇ ಕಣಕ್ಕಿಳಿಯಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.

ಹ್ಯಾಜಲ್‌ವುಡ್‌ ತಂಡ ಸೇರಿರುವ ವಿಚಾರವನ್ನು ಆರ್‌ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ. 34 ವರ್ಷದ ಹ್ಯಾಜಲ್‌ವುಡ್ ಭುಜದ ಗಾಯದಿಂದ ಬಳಲುತ್ತಿದ್ದರು. ಭಾರತ ಮತ್ತು ಪಾಕಿಸ್ತಾನ ಯುದ್ಧದ ಭೀತಿಯಿಂದ ಐಪಿಎಲ್ ಮಧ್ಯ ಋತುವಿನಲ್ಲಿ ಅಮಾನತುಗೊಂಡ ವೇಳೆ ಹ್ಯಾಜಲ್‌ವುಡ್ ಬ್ರಿಸ್ಬೇನ್‌ನಲ್ಲಿ ಪುನರ್ವಸತಿಗೆ ಒಳಗಾಗಿದ್ದರು. ಹ್ಯಾಜಲ್‌ವುಡ್‌ ಆರ್‌ಸಿಬಿ ಪರ 10 ಪಂದ್ಯಗಳನ್ನಾಡಿ 18 ವಿಕೆಟ್‌ ಕಿತ್ತು ಮಿಂಚಿದ್ದರು.

ಟಿಮ್‌ ಡೇವಿಡ್‌ ಔಟ್‌

ಸ್ನಾಯು ಸೆಳೆತದಿಂದ ಬಳಲುತ್ತಿರುವ ತಂಡದ ಬಿಗ್‌ ಹಿಟ್ಟರ್‌ ಟಿಮ್‌ ಡೇವಿಡ್‌ ಪ್ಲೇ ಆಫ್‌ ಪಂದ್ಯಕ್ಕೂ ಮುನ್ನವೇ ತಂಡದಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಆರ್‌ಸಿಬಿ ಟಿಮ್‌ ಡೇವಿಡ್‌ ಕುರಿತ ಟ್ವಿಟ್‌ ಕೂಡ ಮಾಡಿರುವುದನ್ನು ನೋಡುವಾಗ ಅವರು ಹೊರಬೀಳುವುದು ಖಚಿತ.

ಇದನ್ನೂ ಓದಿ IPL 2025: ಪಂಜಾಬ್‌ಗೆ ಸೋಲು; ಆರ್‌ಸಿಬಿಗೆ 2ನೇ ಸ್ಥಾನಕ್ಕೇರುವ ಅವಕಾಶ

ಶುಕ್ರವಾರ ನಡೆದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದ ವೇಳೆ ಡಿಟ್‌ ಡೇವಿಡ್‌ ಪಂದ್ಯದ ಕೊನೆಯ ಓವರ್​ನಲ್ಲಿ ಫೀಲ್ಡಿಂಗ್​ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿ ಮೈದಾನ ತೊರೆದಿದ್ದರು. ಆ ಬಳಿಕ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ದರು. ಅವರ ಸೇವೆ ಕಳೆದುಕೊಂಡರೆ ತಂಡಕ್ಕೆ ಭಾರೀ ನಷ್ಟ ಸಂಭವಿಸಲಿದೆ.