ಫುಟ್ಬಾಲ್ ಪಂದ್ಯದ ವೇಳೆ ಕ್ಯಾಮೆರಾ ಪತನ; ಭಾರಿ ಅನಾಹುತದಿಂದ ಪಾರಾದ ಸಿಬ್ಬಂದಿ
2026 FIFA World Cup: ಯುದ್ಧದ ಮಧ್ಯೆಯೂ ಇರಾನ್ ಆಟಗಾರರಿಗೆ ಅಮೆರಿಕಾದ ವೀಸಾ ಮಂಜೂರು ಮಾಡಿದೆ. ಇಸ್ರೇಲ್, ಅಮೆರಿಕ ಜೊತೆಗಿನ ಯುದ್ಧದ ಕಾರಣದಿಂದಾಗಿ ಇರಾನ್ ತಂಡ ಈ ಬಾರಿ ಅಮೆರಿಕ, ಮೆಕ್ಸಿಕೊ, ಕೆನಡಾ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಗೊಂದಲವಿತ್ತು. ಆದರೆ ಸದ್ಯ ಮೆಕ್ಸಿಕೋದಲ್ಲಿ ಅಭ್ಯಾಸ ನಡೆಸುತ್ತಿರುವ ಇರಾನ್ ತಂಡಕ್ಕೆ ಅಮೆರಿಕ ಪ್ರವೇಶಿಸಲು ವೀಸಾ ಮಂಜೂರು ಮಾಡಲಾಗಿದೆ.
Camera crashing down in football match -
ನವದೆಹಲಿ, ಜೂ.10: ಹಂಗೇರಿ ಮತ್ತು ಕಝಾಕಿಸ್ತಾನ್ ನಡುವಿನ ಸೌಹಾರ್ದ ಪಂದ್ಯದ ವೇಳೆ ಸ್ಪೈಡರ್ ಕ್ಯಾಮೆರಾ ಮೈದಾನಕ್ಕೆ ಕಳಚಿ ಬಿದ್ದ ಫಟನೆಯಲ್ಲಿ ಕ್ಯಾಮೆರಾ ಮ್ಯಾನ್ ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(viral video) ಆಗಿದೆ. ಹಂಗೇರಿಯ ನಾಗಯೆರ್ಡೆ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದ್ದು, 2026 ರ ಫಿಫಾ ವಿಶ್ವಕಪ್(2026 FIFA World Cup)ಗೆ ಅರ್ಹತೆ ಪಡೆಯದ ಎರಡೂ ತಂಡಗಳು ಮುಖಾಮುಖಿಯಾಗಿದ್ದವು.
ಬಿಬಿಸಿ ವರದಿಯ ಪ್ರಕಾರ, ಸ್ಪೈಡರ್-ಕ್ಯಾಮ್ ಅನ್ನು ನೇತು ಹಾಕಿದ ಕೇಬಲ್‌ಗಳಲ್ಲಿ ಒಂದಕ್ಕೆ ಬೆಂಕಿ ಹಾನಿಯಾದ ನಂತರ ಸ್ಪೈಡರ್-ಕ್ಯಾಮ್ ಮಧ್ಯದಲ್ಲಿ ಹೊಗೆಯಾಡಲು ಪ್ರಾರಂಭಿಸಿತು ಎಂದು ತಿಳಿಸಿದೆ. ನೆಲದಿಂದ 20 ಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿದ್ದ ಈ ಕ್ಯಾಮೆರಾ ದಿಢೀರ್ ಮೈದಾನಕ್ಕೆ ಬಿದ್ದಿತು. ಅದೃಷ್ಟವಶಾತ್ ಕ್ಯಾಮೆರ ಬಿದ್ದ ಜಾಗದಲ್ಲಿ ಯಾವುದೇ ಆಟಗಾರ ಇರದೇ ಇದ್ದ ಕಾರಣ ದೊಡ್ಡ ಅನಾಹುತವೊಂದು ತಪ್ಪಿತು. ಮೈದಾನದ ಹೊರಗಿದ್ದ ಕ್ಯಾಮೆರಾಮೇನ್ ಕೂದಲೆಳೆ ಅಂತರದಿಂದ ಪಾರಾದರು.
ಯಾರಿಗೂ ಗಾಯಗಳಾಗಿಲ್ಲ, ಮತ್ತು ಘಟನೆ ಸಂಭವಿಸುವಾಗ ಆಟಗಾರರು ಪಾನೀಯ ವಿರಾಮ ತೆಗೆದುಕೊಂಡಿದ್ದರು. ಪಂದ್ಯದಲ್ಲಿ ಹಂಗೇರಿ ಕಜಕಿಸ್ತಾನ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿತು.
🚨JUST IN: A camera fell onto the pitch during the Hungary vs. Kazakhstan match pic.twitter.com/wTp3Efdq0m
— Polymarket Sports (@PolymarketSport) June 9, 2026
ಏಷ್ಯನ್ ಕ್ರೀಡಾಕೂಟಕ್ಕೆ ತಂಡ ಪ್ರಕಟಿಸಿದ ಪಾಕ್; ಫರ್ಹಾನ್ ನಾಯಕ
ಫಿಫಾ ವಿಶ್ವಕಪ್ ಯಾವಾಗ ಆರಂಭ?
ಜೂನ್ 12 ರಂದು ಭಾರತೀಯ ಕಾಲಮಾನ ಬೆಳಿಗ್ಗೆ 12:30 ಕ್ಕೆ FIFA ವಿಶ್ವಕಪ್ ಆರಂಭವಾಗಲಿದ್ದು, ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. 48 ತಂಡಗಳ ಪಂದ್ಯಾವಳಿಯ ಮೊದಲ ದಿನದಂದು ಎರಡು ಪಂದ್ಯಗಳು ನಡೆಯಲಿದ್ದು, ದಕ್ಷಿಣ ಕೊರಿಯಾ ಮತ್ತು ಜೆಕಿಯಾ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 7:30 ಕ್ಕೆ ಆರಂಭವಾಗಲಿದೆ. ಈ ಪಂದ್ಯಾವಳಿಯು ಮೂರು ದೇಶಗಳಲ್ಲಿ ನಡೆಯಲಿದೆ. ಯುಎಸ್ಎ, ಮೆಕ್ಸಿಕೋ ಮತ್ತು ಕೆನಡಾ. ಫೈನಲ್ ಪಂದ್ಯವು ಜುಲೈ 20 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.
ಇರಾನ್‌ಗೆ ವೀಸಾ
ಯುದ್ಧದ ಮಧ್ಯೆಯೂ ಇರಾನ್ ಆಟಗಾರರಿಗೆ ಅಮೆರಿಕಾದ ವೀಸಾ ಮಂಜೂರು ಮಾಡಿದೆ. ಇಸ್ರೇಲ್, ಅಮೆರಿಕ ಜೊತೆಗಿನ ಯುದ್ಧದ ಕಾರಣದಿಂದಾಗಿ ಇರಾನ್ ತಂಡ ಈ ಬಾರಿ ಅಮೆರಿಕ, ಮೆಕ್ಸಿಕೊ, ಕೆನಡಾ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಗೊಂದಲವಿತ್ತು. ಆದರೆ ಸದ್ಯ ಮೆಕ್ಸಿಕೋದಲ್ಲಿ ಅಭ್ಯಾಸ ನಡೆಸುತ್ತಿರುವ ಇರಾನ್ ತಂಡಕ್ಕೆ ಅಮೆರಿಕ ಪ್ರವೇಶಿಸಲು ವೀಸಾ ಮಂಜೂರು ಮಾಡಲಾಗಿದೆ. ಇದನ್ನು ಅಮೆರಿಕದ ಇಬ್ಬರು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಇರಾನ್ ತಂಡ ಜೂ.15ರಂದು ಕ್ಯಾಲಿಫೋರ್ನಿಯಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವಾಡಲಿದೆ. ಸದ್ಯ ಇರಾನ್ ತಂಡ ಮೆಕ್ಸಿಕೋದಲ್ಲಿ ಅಭ್ಯಾಸ ನಡೆಸುತ್ತಿದೆ