ಕಾಮನ್ವೆಲ್ತ್ ಬಾಕ್ಸಿಂಗ್; ಪ್ರೀತಿ ಪವಾರ್ ಚಿನ್ನದ ಪಂಚ್
Commonwealth Games: ಮೊದಲ ಸುತ್ತಿನಲ್ಲೇ ಸತತ ಪಂಚ್‌ಗಳ ಮೂಲಕ ಪ್ರಾಬಲ್ಯ ಸಾಧಿಸಿದ ಪ್ರೀತಿ, ಮೊದಲ ಸುತ್ತಿನಲ್ಲಿ 10-9 ಅಂಕಗಳನ್ನು ಗಳಿಸಿದರು. ಉಳಿದ ಸುತ್ತುಗಳಲ್ಲಿ ತಮ್ಮ ಹಿಡಿತವನ್ನು ದೃಢವಾಗಿ ಕಾಯ್ದುಕೊಂಡು ಸರ್ವಾನುಮತದ ಮುನ್ನಡೆ ಸಾಧಿಸಿ ಎದುರಾಳಿಗೆ ಯಾವುದೇ ಹಂತದಲ್ಲಿಯೂ ಚೇತರಿಸಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ.
Preeti Pawar -
ಗ್ಲಾಸ್ಗೋ, ಆ.1: ನೀರಿಕ್ಷೆಯಂತೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಶನಿವಾರ ನಡೆದ ಮಹಿಳೆಯರ 54 ಕೆಜಿ ಬಾಕ್ಸಿಂಗ್‌ನಲ್ಲಿ ವಿಶ್ವದ 3 ನೇ ಶ್ರೇಯಾಂಕಿತೆ, ಭಾರತದ ಪ್ರೀತಿ ಪವಾರ್ ಚಿನ್ನದ ಪದಕ್ಕ ಜಯಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೊ ವಿರುದ್ಧ 5-0 ಅಂತರದ ಅಧಿಕಾರಯುತ ಗೆಲುವು ಸಾಧಿಸಿದರು.
ಮೊದಲ ಸುತ್ತಿನಲ್ಲೇ ಸತತ ಪಂಚ್‌ಗಳ ಮೂಲಕ ಪ್ರಾಬಲ್ಯ ಸಾಧಿಸಿದ ಪ್ರೀತಿ, ಮೊದಲ ಸುತ್ತಿನಲ್ಲಿ 10-9 ಅಂಕಗಳನ್ನು ಗಳಿಸಿದರು. ಉಳಿದ ಸುತ್ತುಗಳಲ್ಲಿ ತಮ್ಮ ಹಿಡಿತವನ್ನು ದೃಢವಾಗಿ ಕಾಯ್ದುಕೊಂಡು ಸರ್ವಾನುಮತದ ಮುನ್ನಡೆ ಸಾಧಿಸಿ ಎದುರಾಳಿಗೆ ಯಾವುದೇ ಹಂತದಲ್ಲಿಯೂ ಚೇತರಿಸಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ.
ಅವರ ಈ ಪದಕ ಸಾಧನೆಯಿಂದ ಸದ್ಯ ಭಾರತವು ಪದಕ ಪಟ್ಟಿಯಲ್ಲಿ 6 ಚಿನ್ನ, 12 ಬೆಳ್ಳಿ ಮತ್ತು ಆರು ಕಂಚಿನ ಪದಕಗಳನ್ನು ಒಳಗೊಂಡಂತೆ ಇದುವರೆಗೆ 24 ಪದಕಗಳನ್ನು ಗೆದ್ದಿದೆ.
ಇದಕ್ಕೂ ಮುನ್ನ ನಡೆದಿದ್ದ ಡೆಕಾಥ್ಲಾನ್‌ನಲ್ಲಿ ತೇಜಸ್ವಿನ್ ಶಂಕರ್ ಕಂಚಿನ ಪದಕ ಜಯಿಸಿದ್ದರು. ಮೊಣಕಾಲಿನ ಗಾಯದಿಂದಾಗಿ ಸಿದ್ಧತೆಗೆ ಅಡ್ಡಿಯುಂಟಾಗಿದ್ದರೂ, 27 ವರ್ಷದ ಅವರು ಮುನ್ನಡೆಯುವಲ್ಲಿ ಯಶಸ್ವಿಯಾದರು ಮತ್ತು ಭಾರತಕ್ಕೆ ಮತ್ತೊಂದು ಪದಕ ಗೆದ್ದುಕೊಟ್ಟರು. ಎರಡು ದಿನಗಳು ಮತ್ತು 10 ಈವೆಂಟ್‌ಗಳಲ್ಲಿ ಶಂಕರ್ 7,976 ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾದರು.
ಕಾಮನ್ವೆಲ್ತ್ ಜಾವೆಲಿನ್ ಎಸೆತದಲ್ಲಿ ಅಚ್ಚರಿಯ ಕಂಚಿನ ಪದಕ ಗೆದ್ದ ಯಶ್ ವೀರ್ ಸಿಂಗ್ ಯಾರು?
ಮಹಿಳೆಯರ 57 ಕೆಜಿ ಜೂಡೋ ಸ್ಪರ್ಧೆಯಲ್ಲಿ 28 ವರ್ಷದ ಯಾಮಿನಿ ಮೌರ್ಯ ಬೆಳ್ಳಿ ಪದಕ ಗೆದ್ದರು. ಯಾಮಿನಿ ಆಟದ ಆರಂಭಿಕ ಹಂತಗಳಲ್ಲಿ ಎದುರಾಳಿ ಆಟಗಾರ್ತಿಯನ್ನು ಕಠಿಣ ಹಿಡಿತದಲ್ಲಿಟ್ಟುಕೊಂಡರು. ಆದರೆ ಅಂತಿಮವಾಗಿ ಅನರ್ಹರಾದರು ಮತ್ತು ಅಂತಿಮವಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಘರ್ಷಣೆಯ ಗೋಲ್ಡನ್ ಸ್ಕೋರ್ ಅವಧಿಯಲ್ಲಿ ಮೂರನೇ ಶಿಡೋ ಪೆನಾಲ್ಟಿ ಪಡೆದ ನಂತರ ಅವರು ಸೋಲಬೇಕಾಯಿತು.
ಜಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಶ್ರೀಲಂಕಾದ ರುಮೇಶ್ ತರಂಗ ಪಥಿರಗೆ 89.75 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಐತಿಹಾಸಿಕ ಚಿನ್ನ ಗೆದ್ದರು. ಮತೋರ್ವ ಭಾರತೀಯ ಯಶ್ ವೀರ್ ಸಿಂಗ್(85.41 ಮೀ.) ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದರು.