ಭಾರತೀಯ ಕ್ರಿಕೆಟ್‌ನಲ್ಲಿ ಅಭಿಮನ್ಯು ಈಶ್ವರನ್‌ಗೆ ಅನ್ಯಾಯವಾಗುತ್ತಿದೆ ಎಂದ ಆಕಾಶ್ ಚೋಪ್ರಾ!
ಭಾರತ ಹಾಗೂ ಶ್ರೀಲಂಕಾ ನಡುವಣ ಟೆಸ್ಟ್ ಸರಣಿಯಲ್ಲಿ ಸಾರಾಂಶ್ ಜೈನ್ ಅವರಿಗೆ ಅವಕಾಶ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಆಕಾಶ್ ಚೋಪ್ರಾ, ಪ್ರಸ್ತುತ ಅಭಿಮನ್ಯು ಈಶ್ವರನ್ ಅವರ ಸನ್ನಿವೇಶವನ್ನು ಹೋಲಿಕೆ ಮಾಡಿದ್ದಾರೆ. ಮೊದಲನೇ ಟೆಸ್ಟ್‌ಗೂ ಮುನ್ನ ಅಭಿಮನ್ಯು ಈಶ್ವರನ್‌ಗೆ ತುಂಬಾ ಅನ್ಯಾಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಅಭಿಮನ್ಯು ಈಶ್ವರನ್ ಬಗ್ಗೆ ಆಕಾಶ್ ಚೋಪ್ರಾ ಪ್ರತಿಕ್ರಿಯೆ. -
ನವದೆಹಲಿ: ಭಾರತ ಹಾಗೂ ಶ್ರೀಲಂಕಾ ನಡುವಣ (IND vs SL) ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಕ್ಕೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. ಹಾಗಾಗಿ ಪ್ರವಾಸಿ ತಂಡ ಸದ್ಯ ಆಗಸ್ಟ್ 7 ರಂದು ಶ್ರೀಲಂಕಾ ಇಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆರಭಿಸಿದೆ. ಆಗಸ್ಟ್ 15 ರಂದು ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗುವ ಮೂಲಕ ಭಾರತದ ಪ್ರವಾಸ ಅಧಿಕೃತವಾಗಿ ಆರಂಭವಾಗಲಿದೆ. ವಾಷಿಂಗ್ಟನ್ ಸುಂದರ್ ಗಾಯದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಮತ್ತೊಬ್ಬ ಆಲ್‌ರೌಂಡರ್ ಸಾರಾಂಶ್ ಜೈನ್‌ಗೆ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಇದರ ಬಗ್ಗೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಮನ್ಯು ಈಶ್ವರನ್ ಅವರನ್ನು ನಡೆಸಿಕೊಳ್ಳುತ್ತಿರುವ ಹಾದಿಯನ್ನು ಚೋಪ್ರಾ ಖಂಡಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಕೊಂಡ ವಿಡಿಯೊದಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, "ಸಾರಾಂಶ್ ಆಡುತ್ತಾರೆ ಎಂದು ನನಗೆ ಅನಿಸುತ್ತಿಲ್ಲ. ಶ್ರೀಲಂಕಾ ತಂಡ ಇನ್ನೂ ಪ್ರಕಟವಾಗಿಲ್ಲ. ಆದರೆ ಅವರ ತಂಡದಲ್ಲಿ ಒಬ್ಬನೇ ಎಡಗೈ ಬ್ಯಾಟರ್ ಇರುವ ಸಾಧ್ಯತೆ ಇದೆ. ಭಾರತದ ತಂಡದಲ್ಲಿ ಈಗಾಗಲೇ ನಾಲ್ವರು ಸ್ಪಿನ್ನರ್‌ಗಳಿದ್ದಾರೆ ಮತ್ತು ಸಾರಾಂಶ್ ಅವರಲ್ಲಿ ನಾಲ್ಕನೇ ಸ್ಪಿನ್ನರ್ ಆಗಿದ್ದಾರೆ. ಹೀಗಾಗಿ ಸಾರಾಂಶ್‌ಗೆ ಅವಕಾಶ ಸಿಗದಿರಬಹುದು ಎಂದು ನಾನು ಭಾವಿಸುತ್ತೇನೆ."
600ನೇ ಟೆಸ್ಟ್ ಆಡಲಿರುವ ಭಾರತ ತಂಡ; ವಿಶ್ವ ದಾಖಲೆ ಯಾರ ಹೆಸರಿನಲ್ಲಿದೆ?
"ಈ ರೀತಿಯ ಪರಿಸ್ಥಿತಿ ಹಿಂದೆ ಕೂಡ ನಡೆದಿದೆ. ಅಭಿಮನ್ಯು ಈಶ್ವರನ್ ಅವರಿಗೂ ಸಾಕಷ್ಟು ಅವಕಾಶಗಳು ಸಿಗದಿರುವುದು ಅನ್ಯಾಯವಾಗಿತ್ತು. ಇದು ಸ್ವಲ್ಪ ಚಿಂತೆಯ ವಿಷಯ ಹಾಗೂ ಸವಾಲು ಕೂಡ ಹೌದು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ನಾವು ಆಟಗಾರರನ್ನು ರಾಷ್ಟ್ರೀಯ ತಂಡದತ್ತ ಕರೆತರುತ್ತೇವೆ. ಆದರೆ ಹಲವು ಬಾರಿ ಅವರ ಮುಂದೆ ಬಾಗಿಲು ಸಂಪೂರ್ಣವಾಗಿ ತೆರೆಯುವುದಿಲ್ಲ. ಕೆಲವೊಮ್ಮೆ ಅದು ಕೇವಲ ದುರದೃಷ್ಟಕರ ಪರಿಸ್ಥಿತಿಯಾಗಿರುತ್ತದೆ. ಕನಿಷ್ಠ ನೀವು ಭಾರತ ತಂಡಕ್ಕೆ ಆಯ್ಕೆಯಾಗಿದ್ದೀರಿ ಎಂಬುದಕ್ಕೆ ಸಂತೋಷಪಡಬಹುದು," ಎಂದು ಹೇಳಿದ್ದಾರೆ.
ಗಾಯ; ಅಭ್ಯಾಸ ಪಂದ್ಯದ ಮೊದಲ ದಿನ ಹೊರಗುಳಿದ ಶುಭಮನ್ ಗಿಲ್
ಶುಭಾರಂಭದ ನಿರೀಕ್ಷೆಯಲ್ಲಿ ಭಾರತ
ಶುಭ್‌ಮನ್ ಗಿಲ್ ನಾಯಕತ್ವದ ಭಾರತ ತಂಡ, ಶ್ರೀಲಂಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC) ಫೈನಲ್‌ನ ರೇಸ್‌ನಲ್ಲಿ ಮುಂದುವರಿಯಬೇಕಾದರೆ ಭಾರತ ತಂಡ ಮುಂದಿನ ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಆರು ಪಂದ್ಯಗಳನ್ನು ಗೆಲ್ಲಬೇಕಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಸರಣಿಯುದ್ದಕ್ಕೂ ಶ್ರೀಲಂಕಾ ತಂಡದ ಮೇಲೆ ಭಾರತ ಸಂಪೂರ್ಣ ಹಿಡಿತ ಸಾಧಿಸುವ ಅಗತ್ಯವಿದೆ. ತವರಿನ ಪರಿಸ್ಥಿತಿಗಳಲ್ಲಿ ಶ್ರೀಲಂಕಾ ಬಲಿಷ್ಠ ತಂಡವಾಗಿರುವುದರಿಂದ, ಎರಡು ಪಂದ್ಯಗಳ ಸರಣಿ ಮುಗಿದ ಬಳಿಕ ಯಾವ ತಂಡ ಮೇಲುಗೈ ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ
ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸಾಯಿ ಸುದರ್ಶನ್ (ಫಿಟ್‌ನೆಸ್ ಮೇಲೆ ಅವಲಂಬನೆ), ಧ್ರುವ್ ಜುರೆಲ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಾಂಶ್ ಜೈನ್, ಆಕಿಬ್ ನಬಿ