ʻಎಬಿಡಿಯ ನಾಟೌಟ್ ತೀರ್ಪು ನಂಬಲು ಸಾಧ್ಯವಾಗಿರಲಿಲ್ಲʼ: 2007ರ ಘಟನೆ ನೆನೆದ ಹರ್ಷಲ್ ಗಿಬ್ಸ್!
2027ರಲ್ಲಿ ಬೆಲ್‌ಫಾಸ್ಟ್ ಓವಲ್‌ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ, ಅಂಪೈರ್ ಅಲೀಮ್ ದಾರ್ ಎಬಿ ಡಿವಿಲಿಯರ್ಸ್‌ಗೆ ಸಂಬಂಧಿಸಿದಂತೆ ತಪ್ಪು ನಿರ್ಧಾರವನ್ನು ನೀಡಿದರು. ಈ ಬಗ್ಗೆ ಇದೀಗ ದಕ್ಷಿಣ ಆಫ್ರಿಕಾ ಮಾಜಿ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್ ಪ್ರತಿಕ್ರಿಯೆ ನೀಡಿದ್ದಾರೆ.
ಎಬಿಡಿ ಔಟ್ ಆಗಿದ್ದ 2007ರ ಘಟನೆ ನೆನೆದ ಹರ್ಷಲ್ ಗಿಬ್ಸ್. -
ನವದೆಹಲಿ: ಹದಿನೆಂಟು ವರ್ಷಗಳ ಹಿಂದೆ ಅಂದರೆ 2007 ರಲ್ಲಿ ಬೆಲ್‌ಫಾಸ್ಟ್ ಓವಲ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವೆ ನಡೆದಿದ್ದ ಏಕದಿನ ಪಂದ್ಯದಲ್ಲಿ ಇಂದಿಗೂ ಚರ್ಚೆಯಲ್ಲಿರುವ ಒಂದು ಘಟನೆ ನಡೆದಿತ್ತು. ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ (AB De Villiers) ಸ್ಪಷ್ಟವಾಗಿ ಔಟ್ ಆಗಿದ್ದರು. ಆದಾಗ್ಯೂ, ಅಂಪೈರ್ ಅಲೀಮ್ ದಾರ್, ಎಬಿಡಿಗೆ ಔಟ್ ತೀರ್ಪು ನೀಡಿರಲಿಲ್ಲ. ಈ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡಿತ್ತು ಹಾಗೂ ಇದರಿಂದಾಗಿ ಈ ಪಂದ್ಯವನ್ನು ತಲಾ 31 ಓವರ್‌ಗಳಿಗೆ ಇಳಿಸಲಾಗಿತ್ತು. ದಕ್ಷಿಣ ಆಫ್ರಿಕಾ ತಂಡ 8 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ನಂತರ ಜಹೀರ್ ಖಾನ್ (Zaheer Khan) ಭಾರತ ಪರ ಐದನೇ ಓವರ್ ಬೌಲ್ ಮಾಡಲು ಬಂದಿದ್ದರು. ಅವರ ಓವರ್‌ನ ಮೊದಲ ಎಸೆತದಲ್ಲಿ ಎಬಿ ಡಿವಿಲಿಯರ್ಸ್ ಸ್ಟ್ರೈಕ್‌ನಲ್ಲಿದ್ದರು.
ಜಹೀರ್ ಖಾನ್ ಎಸೆದ ಮೊದಲನೇ ಎಸೆತದಲ್ಲಿ ಚೆಂಡು ಎಬಿಡಿ ಬ್ಯಾಟ್‌ನ ಅಂಚಿಗೆ ತಾಗಿ ಎರಡನೇ ಸ್ಲಿಪ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಕೈಗೆ ಸೇರಿತ್ತು. ಸಚಿನ್ ಸ್ಲಿಪ್‌ನಲ್ಲಿ ಕ್ಯಾಚ್ ಅನ್ನು ಯಶಸ್ವಿಯಾಗಿ ಮುಗಿಸಿದ್ದರು. ಸ್ಟಂಪ್ ಮೈಕ್ರೊಫೋನ್‌ನಲ್ಲಿಯೂ ಸ್ಪಷ್ಟವಾಗಿತ್ತು. ಇದರ ಹೊರತಾಗಿಯೂ, ಅಂಪೈರ್ ಅಲೀಮ್ ದಾರ್ ಅವರಿಗೆ ನಾಟ್‌ಔಟ್ ಕೊಟ್ಟಿದ್ದರು. ಅಂಪೈರ್ ನಿರ್ಧಾರದಿಂದ ಎಲ್ಲರೂ ಆಶ್ಚರ್ಯಚಕಿತರಾದರು. ಆ ಸಮಯದಲ್ಲಿ ಹರ್ಷಲ್ ಗಿಬ್ಸ್ ನಾನ್-ಸ್ಟ್ರೈಕರ್‌ನ ತುದಿಯಲ್ಲಿದ್ದರು.
Vijay Hazare Trophy: ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ವಿರಾಟ್ ಕೊಹ್ಲಿ, ರಿಷಭ್ ಪಂತ್!
2007ರ ಘಟನೆಯನ್ನು ನೆನಪಿಸಿಕೊಂಡ ಹರ್ಷಲ್ ಗಿಬ್ಸ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "ನಾನು ಇನ್ನೊಂದು ತುದಿಯಲ್ಲಿದ್ದೆ, ನಾನು ನೋಡುತ್ತಿರುವುದನ್ನು ನಂಬಲು ಸಾಧ್ಯವಾಗಲಿಲ್ಲ. ಎಬಿ ತನ್ನ ಪ್ಯಾಡ್‌ಗಳನ್ನು ಹೊಡೆದಿದ್ದೇನೆ ಎಂದು ಹೇಳಿದ್ದರು," ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ, ಎಬಿ ಡಿವಿಲಿಯರ್ಸ್ ನಂತರ 15 ರನ್‌ಗಳಿಗೆ ಔಟಾದರು ಮತ್ತು ಭಾರತ ಆ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು
I was at the other end , couldn’t believe what i was seeing 😂😂 https://t.co/PXRlvEzk72
— Herschelle Gibbs (@hershybru) December 22, 2025
ಪಂದ್ಯದ ವಿವರ ಹೀಗಿದೆ
ಭಾರತದ ನಾಯಕ ರಾಹುಲ್ ದ್ರಾವಿಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ 31 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಜಸ್ಟಿನ್ ಕೆಂಪ್ 61 ರನ್ ಗಳಿಸಿ ಆತಿಥೇಯರ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಭಾರತ ಪರ ಅಜಿತ್ ಅಗರ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ತಲಾ ಎರಡು ವಿಕೆಟ್ ಪಡೆದರು. ಭಾರತ ತಂಡ 149 ರನ್‌ಗಳ ಗುರಿಯನ್ನು 30.2 ಓವರ್‌ಗಳಲ್ಲಿ ತಲುಪಿ, ಪಂದ್ಯವನ್ನು ನಾಲ್ಕು ವಿಕೆಟ್ ಗಳಿಂದ ಗೆದ್ದುಕೊಂಡಿತು. ಯುವರಾಜ್ ಸಿಂಗ್ ಅಜೇಯ 61 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
IND vs SA: ಹಾರ್ದಿಕ್ ಪಾಂಡ್ಯ ಅಬ್ಬರ, 5ನೇ ಪಂದ್ಯ ಗೆದ್ದು ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!
ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಸಚಿನ್
2007ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ದುರಂತ ಅಂತ್ಯ ಕಂಡಿತ್ತು. ಇದಾದ ಬಳಿಕ ಬೆಲ್‌ಫಾಸ್ಟ್‌ನಲ್ಲಿ ನಡೆದಿದ್ದ ಫ್ಯೂಚರ್ ಕಪ್ ಸರಣಿಯ ಪಂದ್ಯ ನಡೆಯಿತು. ಗ್ರೆಗ್ ಚಾಪೆಲ್ ಅವರನ್ನು ವಜಾಗೊಳಿಸಿದ ನಂತರ, ಭಾರತ ತಂಡ ಕೋಚ್ ಇಲ್ಲದೆ ಐರ್ಲೆಂಡ್‌ಗೆ ತೆರಳಿತ್ತು. ರಾಹುಲ್ ದ್ರಾವಿಡ್ ನಾಯಕನಾಗಿ ಮುಂದುವರಿದಿದ್ದರು. ಮೊದಲ ಎರಡು ಪಂದ್ಯಗಳಲ್ಲಿ 99 ಮತ್ತು 93 ರನ್‌ಗಳ 200 ರನ್‌ಗಳನ್ನು ಗಳಿಸಿದ್ದಕ್ಕಾಗಿ ಮತ್ತು ಎರಡು ವಿಕೆಟ್‌ಗಳನ್ನು ಪಡೆದಿದ್ದಕ್ಕಾಗಿ ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು.