ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

DC vs SRH: ಎರಡನೇ ಐಪಿಎಲ್‌ ಶತಕ ಸಿಡಿಸಿ ರೋಹಿತ್‌ ಶರ್ಮಾ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ತಮ್ಮ ಐಪಿಎಲ್‌ ವೃತ್ತಿ ಜವನದ ಎರಡನೇ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾರ ದಾಖಲೆಯನ್ನು ಮುರಿದಿದ್ದಾರೆ.

ಶತಕ ಬಾರಿಸಿ ರೋಹಿತ್‌ ಶರ್ಮಾ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ರೋಹಿತ್‌ ಶರ್ಮಾ ದಾಖಲೆ ಮುರಿದ ಅಭಿಷೇಕ್‌ ಶರ್ಮಾ. -

Profile
Ramesh Kote Apr 21, 2026 9:32 PM

ಹೈದರಾಬಾದ್‌: ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಆರಂಭಿಕ ಅಭಿಷೇಕ್‌ ಶರ್ಮಾ (Abhishek Sharma) ಸ್ಪೋಟಕ ಶತಕವನ್ನು ಬಾರಿಸಿದರು. ಅವರು ಕೇವಲ 47 ಎಸೆತಗಳಲ್ಲಿ ತಮ್ಮ ಐಪಿಎಲ್‌ ವೃತ್ತಿ ಜೀವನದ ಎರಡನೇ ಶತಕವನ್ನು ಸಿಡಿಸಿದ್ದಾರೆ. ಈ ಶತಕದ ಮೂಲಕ 25ರ ಪ್ರಾಯದ ಬ್ಯಾಟ್ಸ್‌ಮನ್‌, ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾರ (Rohit sharma) ದಾಖಲೆಯನ್ನು ಮುರಿದಿದ್ದಾರೆ.

ಸನ್‌ರೈಸರ್ಸ್‌ ಹೈದರಾಬಾದ್‌ ಪರ ಐಪಿಎಲ್‌ ಟೂರ್ನಿಯಲ್ಲಿ ಎರಡನೇ ಶತಕ ಬಾರಿಸಿದ ಅಭಿಷೇಕ್‌ ಶರ್ಮಾ, ಅವರು ತಮ್ಮ ಟಿ20 ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಒಟ್ಟು 9 ಶತಕಗಳನ್ನು ಪೂರ್ಣಗೊಳಿಸಿದ್ದಾರೆ. ಇದರಲ್ಲಿ ಅವರು ಭಾರತ ತಂಡದ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಎರಡು ಶತಕಗಳನ್ನು ಬಾರಿಸಿದ್ದರು. ಇನ್ನು ಪಂಜಾಬ್‌ ಪರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಐದು ಶತಕಗಳನ್ನು ಗಳಿಸಿದ್ದಾರೆ.

IPL 2026: ಸಿಎಸ್‌ಕೆ ಪಂದ್ಯಕ್ಕೂ ಮುನ್ನ ಮುಂಬೈ ಇಂಡಿಯನ್ಸ್‌ಗೆ ವಿಲ್‌ ಜ್ಯಾಕ್ಸ್‌ ಬಲ!

ರೋಹಿತ್‌ ಶರ್ಮಾ ದಾಖಲೆ ಮುರಿದ ಅಭಿಷೇಕ್‌ ಶರ್ಮಾ

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅಭಿಷೇಕ್‌ ಶರ್ಮಾ (9 ಶತಕಗಳು) ಅವರು ಟೀಮ್‌ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್‌ ಮಾಜಿ ನಾಯಕ ರೋಹಿತ್‌ ಶರ್ಮಾ ದಾಖಲೆಯನ್ನು ಮುರಿದಿದ್ದಾರೆ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ (9 ಶತಕ) ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್‌ ಶರ್ಮಾ ಅವರು ತಮ್ಮ ಟಿ20 ಕೆರಿಯರ್‌ನಲ್ಲಿ 8 ಶತಕಗಳನ್ನು ಬಾರಿಸಿದ್ದಾರೆ.



ಅತಿ ಹೆಚ್ಚು ಟಿ20 ಶತಕ ಬಾರಿಸಿದ ಭಾರತೀಯ ಆಟಗಾರರು

ಅಭಿಷೇಕ್‌ ಶರ್ಮಾ: 9 ಶತಕ-188 ಪಂದ್ಯಗಳು

ವಿರಾಟ್‌ ಕೊಹ್ಲಿ: 9 ಶತಕ-420 ಪಂದ್ಯಗಳು

ರೋಹಿತ್‌ ಶರ್ಮಾ: 8 ಶತಕ-467 ಪಂದ್ಯಗಳು

ಕೆಎಲ್‌ ರಾಹುಲ್‌: 7 ಶತಕ-245 ಪಂದ್ಯಗಳು

ಸಂಜು ಸ್ಯಾಮ್ಸನ್‌: 7 ಶತಕ-336 ಪಂದ್ಯಗಳು

ಇಶಾನ್‌ ಕಿಶನ್‌: 7 ಶತಕ- 236 ಪಂದ್ಯಗಳು

ಇದೇ ವೇಳೆ ಅಭಿಷೇಕ್‌ ಶರ್ಮಾ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಅತಿ ಹೆಚ್ಚು ಶತಕಗಳನ್ನು ಬಾರಿಸಿದ್ದಾರೆ. ಅವರು ಕ್ವಿಂಟನ್‌ ಡಿ ಕಾಕ್‌ ಮತ್ತು ವಿರಾಟ್‌ ಕೊಹ್ಲಿ ಅವರೊಂದಿಗೆ ಈ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಇವರಿಗಿಂತ ಮುಂದೆ ಇರುವವರು ಮಾತ್ರ ಡೇವಿಡ್‌ ವಾರ್ನರ್‌ (10 ಶತಕಗಳು), ಬಾಬರ್‌ ಆಝಮ್‌ (12 ಶತಕಗಳು) ಮತ್ತು ಕ್ರಿಸ್‌ ಗೇಲ್‌ (22 ಶತಕಗಳು) ಆಗಿದ್ದಾರೆ.

Ayush Mhatre: ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮತ್ತೊಂದು ಆಘಾತ, ಐಪಿಎಲ್‌ ಟೂರ್ನಿಯಿಂದ ಯುವ ಬ್ಯಾಟ್ಸ್‌ಮನ್‌ ಔಟ್‌!

10 ಸಿಕ್ಸರ್‌ ಬಾರಿಸಿದ ಅಭಿಷೇಕ್‌ ಶರ್ಮಾ

ಇದೇ ವೇಳೆ ಅಭಿಷೇಕ್‌ ಶರ್ಮಾ ಐಪಿಎಲ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 10ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಎರಡು ಬಾರಿ ಬಾರಿಸಿದ ಮೊದಲ ಭಾರತೀಯ ಆಟಗಾರರಾಗಿದ್ದಾರೆ. ಈ ಸಾಧನೆಯನ್ನು ಲೀಗ್ ಇತಿಹಾಸದಲ್ಲಿ ಅವರಿಗಿಂತ ಹೆಚ್ಚು ಬಾರಿ ಮಾಡಿರುವವರು ಕೇವಲ ಕ್ರಿಸ್‌ ಗೇಲ್‌ (4 ಬಾರಿ) ಮಾತ್ರ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ ಒಂದು ಇನಿಂಗ್ಸ್‌ನಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ್ದು ಇದೇ ಅಭಿಷೇಕ್‌ ಪಾಲಿಗೆ ಐದನೇ ಬಾರಿ. ಭಾರತೀಯರ ಪಾಲಿಗೆ ಅಭಿಷೇಕ್‌ ಅಗ್ರ ಸ್ಥಾನದಲ್ಲಿದ್ದಾರೆ. ಈ ದಾಖಲೆಯನ್ನು ಈ ಹಿಂದೆ ಶ್ರೇಯಸ್‌ಅಯ್ಯರ್‌ (4 ಬಾರಿ) ಹೊಂದಿದ್ದರು.