AFG vs SA: ಅಫ್ಘಾನಿಸ್ತಾನ ಎದುರು ಎರಡನೇ ಸೂಪರ್ ಓವರ್ ಥ್ರಿಲ್ಲರ್ ಗೆದ್ದ ದಕ್ಷಿಣ ಆಫ್ರಿಕಾ!
AFG vs SA Match Highlights: ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ನಡುವಣ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 13ನೇ ಪಂದ್ಯದಲ್ಲಿ ಎರಡು ಸೂಪರ್ ಓವರ್‌ಗಳ ಮೂಲಕ ತೀವ್ರ ರೋಚಕತೆಯನ್ನು ಕೆರಳಿಸಿತ್ತು. ಆದರೆ, ಡೇವಿಡ್ ಮಿಲ್ಲರ್ ಅವರ ಅಬ್ಬರದ ನೆರವಿನಿಂದ ದಕ್ಷಿಣ ಆಫ್ರಿಕಾ ಎರಡನೇ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿತು.
ಆಫ್ಘನ್ ಎದುರು ಸೂಪರ್ ಓವರ್ ಥ್ರಿಲ್ಲರ್ ಗೆದ್ದ ದಕ್ಷಿಣ ಆಫ್ರಿಕಾ. -
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ (SA vs AFG) ನಡುವಣ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಡಿ ಗುಂಪಿನ 13ನೇ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು. ಎರಡನೇ ಸೂಪರ್ ಓವರ್‌ನಲ್ಲಿ ಡೇವಿಡ್ ಮಿಲ್ಲರ್ (David Miller) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ಅಫ್ಘಾನಿಸ್ತಾನ ತಂಡವನ್ನು ಮಣಿಸಿತು. ರೆಹಮಾನುಲ್ಲಾ ಗುರ್ಬಾಝ್ ಅವರ ಹ್ಯಾಟ್ರಿಕ್ ಸಿಕ್ಸರ್ ಹೊರತಾಗಿಯೂ ಅಫ್ಘಾನಿಸ್ತಾನ ತಂಡ, ಆರಂಭಿಕ ಎರಡು ಎಸೆತಗಳಲ್ಲಿ ರನ್ ಗಳಿಸದ ಪರಿಣಾಮ ಅಂತಿಮ ಎಸೆತದಲ್ಲಿ ಸೋಲು ಒಪ್ಪಿಕೊಂಡಿತು. ಅಂತಿಮವಾಗಿ ಗೆಲುವಿನ ಅದೃಷ್ಟ ಹರಿಣ ಪಡೆಗೆ ಲಭಿಸಿತು.
ನಿಗದಿತ 20 ಓವರ್‌ಗಳ ಪಂದ್ಯದಲ್ಲಿ ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮೊತ್ತ 187 ರನ್‌ಗಳ ಮೂಲಕ ಟೈ ಆಗಿತ್ತು. ಆ ಮೂಲಕ ಅಂಪೈರ್‌ಗಳು ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋದರು. ಮೊದಲನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ತಂಡ, ಆರು ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್‌ಗಳನ್ನು ಕಲೆ ಹಾಕಿತು. ಬಳಿಕ 18 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ಒಂದು ವಿಕೆಟ್ ಕಳೆದುಕೊಂಡರೂ 17 ರನ್‌ಗಳನ್ನು ಗಳಿಸಿತು. ಕೊನೆಯ ಎಸೆತದಲ್ಲಿ ಹರಿಣ ಪಡೆಗೆ 7 ರನ್ ಗೆಲ್ಲಲು ಬೇಕಿದ್ದಾಗ, ಟ್ರಿಸ್ಟನ್ ಸ್ಟಬ್ಸ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಎರಡನೇ ಸೂಪರ್ ಓವರ್‌ಗೆ ಕರೆದೊಯ್ದರು.
ಎಬಿಡಿ ವಿಲಿಯರ್ಸ್ ಟಿ20 ವಿಶ್ವಕಪ್ ದಾಖಲೆ ಮುರಿದ ಕ್ವಿಂಟನ್ ಡಿ ಕಾಕ್
ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಪರ ಟ್ರಿಸ್ಟನ್ ಸ್ಟಬ್ಸ್ ಒಂದು ಸಿಕ್ಸರ್ ಬಾರಿಸಿದರೆ, ಡೇವಿಡ್ ಮಿಲ್ಲರ್ ಎರಡು ಸಿಕ್ಸರ್ ಬಾರಿಸಿದರು. ಆ ಮೂಲಕ ದಕ್ಷಿಣ ಆಫ್ರಿಕಾ ತಂಡ ಆರು ಎಸೆತಗಳಲ್ಲಿ 23 ರನ್ ಗಳಿಸಿತು. ಬಳಿಕ ಗುರಿಯನ್ನು ಹಿಂಬಾಲಿಸಿದ ಆಫ್ಘನ್ ತಂಡ, ಆರಂಭಿಕ ಎರಡು ಎಸೆತಗಳಲ್ಲಿ ಒಂದು ವಿಕೆಟ್ ಕಳೆದುಕೊಂಡಿತು ಬಳಿಕ ಕೊನೆಯ ನಾಲ್ಕು ಎಸೆತಗಳಲ್ಲಿ 24 ರನ್ ಅಗತ್ಯವಿದ್ದಾಗ ರೆಹಮಾನುಲ್ಲಾ ಗುರ್ಬಾಝ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರು. ಕೊನೆಯ ಎಸೆತದಲ್ಲಿ ಆರು ರನ್ ಬೇಕಿದ್ದಾಗ, ಕೇಶವ್ ಮಹಾರಾಜ ವೈಡ್ ಹಾಕಿದರು. ನಂತರ 5 ರನ್ ಬೇಕಿದ್ದಾಗ ಸಿಕ್ಸರ್ ಹೊಡೆಯಲು ಪ್ರಯತ್ನಿ ಗುರ್ಬಾಝ್ ಕ್ಯಾಚ್ ಕೊಟ್ಟರು.
🚨 MATCH RESULT 🚨
— Proteas Men (@ProteasMenCSA) February 11, 2026
No script could have written this! Absolute cinema at the Narendra Modi Stadium! 🎬🔥
An extraordinary contest comes to a breathtaking close as #TheProteas seal victory in the most dramatic fashion! 🇿🇦
Two Super Overs were needed to decide this epic Group D… pic.twitter.com/cnxWIjBKqw
187 ರನ್ ಕಲೆ ಹಾಕಿದ್ದ ದಕ್ಷಿಣ ಆಫ್ರಿಕಾ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ, ಕ್ವಿಂಟನ್ ಡಿ ಕಾಕ್ ಹಾಗೂ ರಯಾನ್ ರಿಕೆಲ್ಟನ್ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 187 ರನ್‌ಗಳನ್ನು ಕಲೆ ಹಾಕಿತ್ತು. ಅದ್ಭುತವಾಗಿ ಬ್ಯಾಟ್ ಮಾಡಿದ್ದ ಕ್ವಿಂಟನ್ ಡಿ ಕಾಕ್, 41 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 59 ರನ್‌ಗಳನ್ನು ಸಿಡಿಸಿದ್ದರು. ಇವರ ಜೊತೆಗೆ 114 ರನ್‌ಗಳ ಜೊತೆಯಾಟವನ್ನು ಆಡಿದ್ದ ರಯಾನ್ ರಿಕೆಲ್ಟನ್ ಕೂಡ ಅರ್ಧಶತಕವನ್ನು ಬಾರಿಸಿದರು. ಇವರು ಆಡಿದ ಕೇವಲ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 5 ಬೌಂಡರಿಗಳೊಂದಿಗೆ 61 ರನ್ ಸಿಡಿಸಿದರು. ಆಫ್ಘನ್ ಪರ ಅಝಮತ್‌ವುಲ್ಲಾ ಒಮರ್ಜಾಯ್ ಅವರು ಮೂರು ವಿಕೆಟ್ ಪಡೆದರೆ, ರಶೀದ್ ಖಾನ್ ಎರಡು ವಿಕೆಟ್ ಕಿತ್ತರು.
A brilliant display of bowling from Lungi Ngidi was vital in helping South Africa edge past Afghanistan👏
— ICC (@ICC) February 11, 2026
He is the @aramco POTM🏅
📝: https://t.co/imSDJnHAdr pic.twitter.com/WENxmHwmYz
ರೆಹಮಾನುಲ್ಲಾ ಗುರ್ಬಾಝ್ ಸ್ಪೋಟಕ ಬ್ಯಾಟಿಂಗ್
188 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಅಫ್ಘಾನಿಸ್ತಾನ ತಂಡದ ಪರ ಎಲ್ಲರ ಗಮನ ಸೆಳೆದಿದ್ದು ಆರಂಭಿಕ ಬ್ಯಾಟ್ಸ್‌ಮನ್ ರೆಹಮಾನುಲ್ಲಾ ಗುರ್ಬಾಝ್. ಒಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳಿದರೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ದೀರ್ಘಾವಧಿ ಬ್ಯಾಟ್ ಮಾಡಿದ ರೆಹಮಾನುಲ್ಲಾ ಗುರ್ಬಾಝ್, 42 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 84 ರನ್ ಸಿಡಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಯಾರೂ ಸಾಥ್ ನೀಡದ ಕಾರಣ, ಆಫ್ಘನ್ ತಂಡ, 19.4 ಓವರ್‌ಗಳಿಗೆ 187 ರನ್‌ಗಳಿಗೆ ಆಲ್‌ಔಟ್ ಆಯಿತು. ಕಗಿಸೊ ರಬಾಡ ಕೊನೆಯ ಓವರ್‌ನಲ್ಲಿ ಒಂದು ಸಿಕ್ಸರ್ ಹೊಡೆಸಿಕೊಂಡರೂ ಒಂದು ವಿಕೆಟ್ ಕಿತ್ತು ಸೂಪರ್ ಓವರ್‌ಗೆ ಕರೆದುಕೊಂಡು ಹೋದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್ಗಿಡಿ 3 ವಿಕೆಟ್ ಕಿತ್ತರು.