AFG vs SL: ಅಫ್ಘಾನಿಸ್ತಾನ ಟಿ20 ತಂಡದ ನಾಯಕತ್ವದಿಂದ ರಶೀದ್ ಖಾನ್‌ಗೆ ಗೇಟ್‌ಪಾಸ್!
AFG vs SL: ಶ್ರೀಲಂಕಾ ವಿರುದ್ಧ ನಡೆಯಲಿರುವ ಬಹು-ಸ್ವರೂಪಗಳ ಸರಣಿಗೆ ತಂಡಗಳನ್ನು ಘೋಷಿಸುವ ವೇಳೆ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ, ತನ್ನ ಟಿ20ಐ ತಂಡದ ನಾಯಕ ಸ್ಥಾನದಿಂದ ರಶೀದ್ ಖಾನ್ ಅವರನ್ನು ವಜಾಗೊಳಿಸಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಅಫ್ಘಾನಿಸ್ತಾನ ಟಿ20 ತಂಡದ ನಾಯಕತ್ವದಿಂದ ರಶೀದ್ ಖಾನ್‌ಗೆ ಕೊಕ್. -
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಅಫ್ಘಾನಿಸ್ತಾನ ತಂಡ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ವಿಫಲವಾದ ಹಿನ್ನಲೆಯಲ್ಲಿ ಆಫ್ಘನ್ ಟಿ20ಐ ತಂಡದ ನಾಯಕತ್ವದಿಂದ ರಶೀದ್ ಖಾನ್ (Rashid Khan) ಅವರನ್ನು ವಜಾಗೊಳಿಸಲಾಗಿದೆ. ಬುಧವಾರ, ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸರಣಿಗಾಗಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ACB)) ಒಡಿಐ ಮತ್ತು ಟಿ20ಐ ತಂಡಗಳನ್ನು ಪ್ರಕಟಿಸಿದೆ. ಟಿ20ಐ ತಂಡದ ಹೊಸ ನಾಯಕರಾಗಿ ಇಬ್ರಾಹಿಂ ಝದ್ರಾನ್ ಅವರನ್ನು ನೇಮಕ ಮಾಡಲಾಗಿದೆ. ವಿಶ್ವಕಪ್ ಬಳಿಕ ಎಸಿಬಿ ಮುಖ್ಯ ಕಾರ್ಯನಿರ್ವಾಹಕ ನಸೀಬ್ ಖಾನ್ ತಂಡದೊಳಗಿನ ರಚನೆ ಮತ್ತು ನಾಯಕತ್ವದಲ್ಲಿ ಬದಲಾವಣೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ದೃಢಪಡಿಸಿದ್ದರು.
ಇಬ್ರಾಹಿಂ ಝದ್ರಾನ್ ಅವರನ್ನು ಟಿ20ಐ ತಂಡದ ನಾಯಕರಾಗಿ ನೇಮಕ ಮಾಡಿದ ಬಳಿಕ ಎಸಿಬಿ ಮುಖ್ಯ ಆಯ್ಕೆದಾರ ಅಹ್ಮದ್ ಶಾ ಸುಲೈಮಾಂಖಿಲ್ ಮಾತನಾಡಿ, “ರಶೀದ್ ಖಾನ್ ಅವರ ಉಪನಾಯಕನಾಗಿ ಸೇವೆ ಸಲ್ಲಿಸಿದ್ದ ಇಬ್ರಾಹಿಂ ಝದ್ರಾನ್ ಈಗ ಈ ಫಾರ್ಮ್ಯಾಟ್‌ನಲ್ಲಿ ಅಫ್ಘಾನಿಸ್ತಾನದ ನಿಯಮಿತ ನಾಯಕರಾಗಲಿದ್ದಾರೆ. ರಶೀದ್ ಖಾನ್ ಅವರ ಅಮೂಲ್ಯ ಕೊಡುಗೆಗಳಿಗೆ ನಾವು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಮತ್ತು ಈ ಮಹತ್ವದ ಹೊಸ ಹೊಣೆಗಾರಿಕೆಯಲ್ಲಿ ಇಬ್ರಾಹಿಂ ಝದ್ರಾನ್ ಅವರಿಗೆ ಯಶಸ್ಸನ್ನು ಹಾರೈಸುತ್ತೇವೆ," ಎಂದು ಹೇಳಿದ್ದಾರೆ.
IND vs ENG: ಸೆಮಿಫೈನಲ್‌ಗೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸೂಚಿಸಿದ ಮೈಕಲ್ ವಾನ್!
ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ ಎಡಗೈ ವೇಗದ ಬೌಲರ್ ಫಝಲ್ಹಕ್ ಫಾರೂಖಿ, ಗುಲ್ಬದಿನ್ ನೈಬ್ ಮತ್ತು ಮೊಹಮ್ಮದ್ ಇಶಾಕ್ ಅವರನ್ನು ಈ ಬಾರಿ ಒಡಿಐ ಹಾಗೂ ಟಿ20ಐ ಎರಡೂ ತಂಡಗಳಿಂದ ಕೈಬಿಡಲಾಗಿದೆ. ಇದೇ ವೇಳೆ, ಎಡಗೈ ಸ್ಪಿನ್ ಬೌಲಿಂಗ್ ಆಲ್-ರೌಂಡರ್ ಶರಫುದ್ದೀನ್ ಅಶ್ರಫ್, ಎಡಗೈ ವೇಗದ ಬೌಲರ್ ಫರೀದ್ ಅಹ್ಮದ್ ಮತ್ತು ಟಾಪ್-ಆರ್ಡರ್ ವಿಕೆಟ್‌ಕೀಪರ್ ಬ್ಯಾಟರ್ ನೂರ ರಹ್ಮಾನ್ ಅವರನ್ನು ಟಿ20ಐ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಅಬುಧಾಬಿಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ತಮ್ಮ ಕೊನೆಯ ಒಡಿಐ ಪಂದ್ಯದಲ್ಲಿ ಐದು ವಿಕೆಟ್ ಹಾಲ್ ಪಡೆದು ಮ್ಯಾನ್ ಆಫ್ ದಿ ಮ್ಯಾಚ್ ಪ್ಲೇಯರ್ ಪಡೆದಿದ್ದ ಬಿಲಾಲ್ ಸಾಮಿ ಅವರು ಒಡಿಐ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ ಮತ್ತು ಟಿ20ಐ ರಿಸರ್ವ್ ತಂಡದಲ್ಲಿಯೂ ಕಾಣಿಸಿಕೊಂಡಿದ್ದಾರೆ.
🚨 SQUAD ANNOUNCEMENT ALERT! 🚨
— Afghanistan Cricket Board (@ACBofficials) March 5, 2026
Here are our squads for the upcoming White Ball Series against Sri Lanka. 👍
Read More: https://t.co/2y6o5AfgF5 pic.twitter.com/QKcz0FGoVp
ನಂಗ್ಯಾಲ್ ಖರೋತಿ ಮತ್ತು ಇಜಾಜ್ ಅಹ್ಮದ್‌ಜಾಯ್ ಟಿ20ಐ ರಿಸರ್ವ್ ತಂಡದಲ್ಲಿ ಸಮಿ ಅವರೊಂದಿಗೆ ಸೇರಿದ್ದಾರೆ, ತಂಡಿಸ್ ಕ್ಯೂ, ಬಶೀರ್ ಅಹ್ಮದ್, ಮೊಹಮ್ಮದ್ ಸಲೀಮ್ ಸಾಫಿ ಮತ್ತು ಕೈಸ್ ಅಹ್ಮದ್ ಒಡಿಐ ರಿಸರ್ವ್ ಪೂಲ್‌ನಲ್ಲಿ ಸೇರಿದ್ದಾರೆ. ಅಫ್ಘಾನಿಸ್ತಾನ ಮಾರ್ಚ್ 13ರಂದು ಶಾರ್ಜಾಹ್‌ನಲ್ಲಿ ಆರಂಭವಾಗುವ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಎದುರಿಸಲಿದೆ, ನಂತರ ಮಾರ್ಚ್ 20ರಿಂದ ದುಬೈನಲ್ಲಿ ನಡೆಯುವ ಮೂರು ಪಂದ್ಯಗಳ ಒಡಿಐ ಸರಣಿಗೆ ಪಯಣಿಸಲಿದೆ.
ಅಫ್ಘಾನಿಸ್ತಾನ ಟಿ20ಐ ತಂಡ: ಇಬ್ರಾಹಿಂ ಝದ್ರಾನ್ (ನಾಯಕ), ರಹಮನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ನೂರ್ ಅಹ್ಮದ್ (ವಿಕೆಟ್ ಕೀಪರ್), ಸೆದಿಕುಲ್ಹಾ ಅಟಲ್, ದಾರ್ವಿಸ್ ರಸೂಲಿ, ಶಹಿದುಲ್ಹಾ ಕಮಲ್, ಅಜಮತ್‌ಉಲ್ಲಾ ಒಮರ್ಜಾತ್, ಮೊಹಮ್ಮದ್ ನಬಿ, ಶರಫುದ್ದಿನ್ ಅಶ್ರಫ್, ರಶೀದ್ ಖಾನ್, ನೂರ್ ಅಹ್ಮದ್, ನುಜೀಬ್ ಉರ್ ರೆಹಮಾನ್, ಝಿಯಾ ಉರ್ ರೆಹಮಾನ್, ಫರೀದ್ ಅಹ್ಮದ್ ಮಲಿಕ್ ಹಾಗೂ ಅಬ್ದುಲ್ ಅಹ್ಮದ್‌ಜಾಯ್
ಮೀಸಲು ಆಟಗಾರರು: ನಂಗ್ಯಾಲ್ ಖಾರೋತಿ, ಬಿಲಾಲ್ ಸಮಿ, ಇಜಾಝ್ ಅಹಮದ್‌ಜಾಯ್
ಅಫ್ಘಾನಿಸ್ತಾನ ಒಡಿಐ ತಂಡ: ಹಝಮತ್‌ವುಲ್ಲಾ ಶಾಹಿದಿ(ನಾಯಕ), ರಹಮತ್ ಶಾ (ಉಪ ನಾಯಕ), ರಹಮಾನ್‌ವುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೆಡಿಕುಲ್ಲಾ ಅಟಲ್, ದಾರ್ವಿಶ್ ರಸೂಲಿ, ಅಝಮತ್‌ವುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖಾರೋತಿ, ಎಎಂ ಘಜಾನ್‌ಫರ್, ಝಿಯಾ ಉರ್ ರೆಹಮಾನ್ ಶರಫಿ, ಫರೀದ್ ಅಹ್ಮದ್ ಮಲಿಕ್ ಹಾಗೂ ಬಿಲಾಲ್ ಸಮಿ
ಮೀಸಲು ಆಟಗಾರರು: ಕ್ವಿಯಾಸ್ ಅಹ್ದ್, ಮೊಹಮ್ಮದ್ ಸಲೀಮ್ ಸಫಿ ಹಾಗೂ ಬಶೀರ್ ಅಹ್ಮದ್