ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಸಮಗ್ರ ವೈದ್ಯಕೀಯ ಶಿಕ್ಷಣ ಪರಿಸರ ವ್ಯವಸ್ಥೆ ಬಿಡುಗಡೆ

ಈ ಯೋಜನೆಯ ಅಂಗವಾಗಿ ಸ್ಟಡಿ ಎಂಬಿಬಿಎಸ್, ಸ್ಟಡಿ ನೀಟ್ ಪಿಜಿ, ಸ್ಟಡಿ ಎಫ್‌ಎಂಜಿಇ ಹಾಗೂ ಗ್ಲೋಬಲ್ ಮೆಡಿಕಲ್ ಕೆರಿಯರ್ ಪಾತ್‌ವೇಸ್ ಎಂಬ ನಾಲ್ಕು ಪ್ರಮುಖ ವಿನೂತನ ಯೋಜನೆ ಗಳನ್ನು ಪರಿಚಯಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಶೈಕ್ಷಣಿಕ ಅಧ್ಯಯನ ಹಾಗೂ ವೃತ್ತಿಪರ ಬೆಳವಣಿಗೆಯ ಹಾದಿಯಲ್ಲಿ ಸಂಪೂರ್ಣ ನೆರವು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಸಮಗ್ರ ವೈದ್ಯಕೀಯ ಶಿಕ್ಷಣ ಪರಿಸರ ವ್ಯವಸ್ಥೆ ಬಿಡುಗಡೆ

-

Profile
Ashok Nayak Nov 4, 2026 8:55 PM

ಕತಾರ್‌ನ ದೋಹಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಾಗತಿಕ ವೈದ್ಯಕೀಯ ಶಿಕ್ಷಣ ಮತ್ತು ಮೆಡ್‌ಎಡ್‌ಟೆಕ್ ಸಂಸ್ಥೆ, ಬೆಂಗಳೂರಿನ ಬ್ಲೂ ಏಟ್ರಿಯಾದಲ್ಲಿ ಆಯೋಜಿಸಲಾಗಿದ್ದ ಸ್ಟಡಿಮೆಡಿಕ್ ಗ್ಲೋಬಲ್ ಮೆಡಿಕಲ್ ಕೆರಿಯರ್ ಸಮಿಟ್ 2026 ಸಮಾವೇಶದಲ್ಲಿ ತನ್ನ ನೂತನ ಸಮಗ್ರ ಪದವಿ ಪೂರ್ವ ವೈದ್ಯಕೀಯ ಶಿಕ್ಷಣ ಪರಿಸರ ವ್ಯವಸ್ಥೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಈ ಮಹತ್ವದ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಗೌರವಾನ್ವಿತ ಸಚಿವರಾದ ಡಾ.ಶರಣ ಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಾಲನೆ ನೀಡಿದರು.

ಈ ಯೋಜನೆಯ ಅಂಗವಾಗಿ ಸ್ಟಡಿ ಎಂಬಿಬಿಎಸ್, ಸ್ಟಡಿ ನೀಟ್ ಪಿಜಿ, ಸ್ಟಡಿ ಎಫ್‌ಎಂಜಿಇ ಹಾಗೂ ಗ್ಲೋಬಲ್ ಮೆಡಿಕಲ್ ಕೆರಿಯರ್ ಪಾತ್‌ವೇಸ್ ಎಂಬ ನಾಲ್ಕು ಪ್ರಮುಖ ವಿನೂತನ ಯೋಜನೆ ಗಳನ್ನು ಪರಿಚಯಿಸಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಶೈಕ್ಷಣಿಕ ಅಧ್ಯಯನ ಹಾಗೂ ವೃತ್ತಿಪರ ಬೆಳವಣಿಗೆಯ ಹಾದಿಯಲ್ಲಿ ಸಂಪೂರ್ಣ ನೆರವು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: Bangalore News: ​ಶ್ರೀ ಕೃಷ್ಣ ರುಕ್ಮಿಣಿ ಸ್ಕೂಲ್ ಆಫ್ ಲಾದಲ್ಲಿ ಫ್ರೆಷರ್ಸ್ ಡೇ ಹಾಗೂ ಕನ್ನಡ ರಾಜ್ಯೋತ್ಸವ

2016ರಲ್ಲಿ ಕೇರಳದಲ್ಲಿ ಆರಂಭವಾದ ಸ್ಟಡಿಮೆಡಿಕ್ ಸಂಸ್ಥೆಯು ಇಂದು ಪ್ರಮುಖ ಅಂತರ ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ವೇದಿಕೆಯಾಗಿ ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯು ಇದುವರೆಗೆ 2,50,000 ಕ್ಕೂ ಹೆಚ್ಚು ಆರೋಗ್ಯ ಕ್ಷೇತ್ರದ ವೃತ್ತಿಪರರಿಗೆ ತರಬೇತಿ ನೀಡಿದ್ದು, 1,00,000 ಕ್ಕೂ ಅಧಿಕ ವೈದ್ಯಕೀಯ ಅಭ್ಯರ್ಥಿಗಳಿಗೆ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಮಾರ್ಗದರ್ಶನ ಮಾಡಿದೆ. ವಿಶ್ವದಾದ್ಯಂತ 200 ಕ್ಕೂ ಹೆಚ್ಚು ತಜ್ಞ ಮಾರ್ಗದರ್ಶಕರು ಮತ್ತು ಕೋರ್ಸ್ ನಿರ್ದೇಶಕರ ಬಲಿಷ್ಠ ಜಾಲದೊಂದಿಗೆ ಸಂಸ್ಥೆಯು 23 ಪ್ರಮುಖ ವೈದ್ಯಕೀಯ ಶಿಕ್ಷಣ ವಿಭಾಗಗಳಲ್ಲಿ ಸೇವೆ ಒದಗಿಸುತ್ತಿದೆ.

ಸಂಸ್ಥೆಯ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಟಡಿ ಎಂಬಿಬಿಎಸ್, ಒಂದೇ ಚಂದಾ ದಾರಿಕೆಯ ಅಡಿಯಲ್ಲಿ ಎಂಬಿಬಿಎಸ್ ಕೋರ್ಸ್‌ನ ನಾಲ್ಕೂ ವೃತ್ತಿಪರ ವರ್ಷಗಳ ಅಧ್ಯಯನವನ್ನು ಒಳಗೊಂಡಿರುವ ಒಂದು ಸಮಗ್ರ ಕಲಿಕಾ ತಾಣವಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ಸಾಮರ್ಥ್ಯಾಧಾರಿತ ವೈದ್ಯಕೀಯ ಶಿಕ್ಷಣ (ಸಿಬಿಎಂಇ) ಪಠ್ಯಕ್ರಮಕ್ಕೆ ಸಂಪೂರ್ಣವಾಗಿ ಅನುಗುಣವಾಗಿರುವ ಈ ವೇದಿಕೆಯು, 2,500 ಕ್ಕೂ ಹೆಚ್ಚು ವಿಷಯಗಳು, 77,000 ಡಿಜಿಟಲ್ ಕಲಿಕಾ ಸಂಪನ್ಮೂಲಗಳು, 50,000 ಬಹುಆಯ್ಕೆ ಮಾದರಿಯ ಪ್ರಶ್ನೆಗಳು, ವಿಶ್ವವಿದ್ಯಾಲಯ ಪರೀಕ್ಷಾ ಮಾದರಿಯ 12,000 ಉತ್ತರ ಕೈಪಿಡಿಗಳು ಹಾಗೂ ಹಿಂದಿನ ವರ್ಷಗಳ 5,500 ಪ್ರಶ್ನೋತ್ತರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.

medic 2

ಈ ಕಲಿಕಾ ವ್ಯವಸ್ಥೆಯು ಓದುವುದು, ನೆನಪಿಸಿಕೊಳ್ಳುವುದು, ಅನ್ವಯಿಸುವುದು ಮತ್ತು ಪರಿಣತಿ ಸಾಧಿಸುವುದು ಎಂಬ ನಾಲ್ಕು ಹಂತಗಳ ವ್ಯವಸ್ಥಿತ ಕಲಿಕಾ ವಿಧಾನವನ್ನು ಅಳವಡಿಸಿಕೊಂಡಿದೆ. ವಿದ್ಯಾರ್ಥಿಗಳಲ್ಲಿ ಮೂಲ ಪರಿಕಲ್ಪನೆಗಳ ಸ್ಪಷ್ಟ ಗ್ರಹಿಕೆ, ವಿಶ್ವವಿದ್ಯಾಲಯ ಪರೀಕ್ಷೆಗಳ ಸಿದ್ಧತೆ ಮತ್ತು ಪ್ರಾಯೋಗಿಕ ಕ್ಲಿನಿಕಲ್ ಜ್ಞಾನವನ್ನು ಗಟ್ಟಿಗೊಳಿಸಲು ಇದನ್ನು ವಿಶೇಷವಾಗಿ ರೂಪಿಸ ಲಾಗಿದೆ.

ಇವುಗಳ ಜೊತೆಗೆ, ಸ್ಟಡಿ ನೀಟ್ ಪಿಜಿ ಉಪಕ್ರಮವು ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯ ಸಿದ್ಧತೆಗೆ ಬಲ ನೀಡಿದರೆ, ಸ್ಟಡಿ ಎಫ್‌ಎಂಜಿಇ ವಿದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿ ಬರುವ ಭಾರತೀಯ ಪದವೀಧರರಿಗೆ ಪೂರಕವಾಗಿರಲಿದೆ. ಹಾಗೆಯೇ, ಗ್ಲೋಬಲ್ ಮೆಡಿಕಲ್ ಕೆರಿಯರ್ ಪಾತ್‌ವೇಸ್ ವಿಭಾಗವು PLAB/UKMLA, USMLE ಮತ್ತು AMC ಸೇರಿದಂತೆ ಜಾಗತಿಕ ಮಟ್ಟದ ವೈದ್ಯಕೀಯ ಪರೀಕ್ಷೆಗಳನ್ನು ಎದುರಿಸಲು ಸಮಗ್ರ ಮಾರ್ಗದರ್ಶನ ನೀಡಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟಡಿಮೆಡಿಕ್ ಸಂಸ್ಥೆಯ ಸಹ-ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯಾಚರಣಾಧಿಕಾರಿ (ಸಿಓಓ) ಡಾ. ಸೌಮ್ಯಾ ಎನ್.ಎಸ್. ಅವರು, "ವೈದ್ಯಕೀಯ ಕಾಲೇಜಿನ ಪ್ರವೇಶದ ಮೊದಲ ವರ್ಷದಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುಣಮಟ್ಟದ ವೈದ್ಯಕೀಯ ಶಿಕ್ಷಣವನ್ನು ಸುಲಭವಾಗಿ ತಲುಪುವಂತೆ ಮಾಡುವುದು ನಮ್ಮ ಸಂಸ್ಥೆಯ ಮೂಲ ದೂರದೃಷ್ಟಿ ಯಾಗಿದ್ದು, ಈ ಹೊಸ ಉಪಕ್ರಮವು ನಮ್ಮ ಆ ಬದ್ಧತೆಯನ್ನು ನಿರೂಪಿಸುತ್ತದೆ" ಎಂದು ತಿಳಿಸಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಅನಿಲ್ ಕುಮಾರ್ ಮಾತನಾಡಿ, "ತಂತ್ರಜ್ಞಾನ ಬೆಂಬಲಿತ ಜಾಗತಿಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ನಿರ್ಮಿಸುವ ನಮ್ಮ ಪಯಣದಲ್ಲಿ ಈ ನೂತನ ವಿಸ್ತರಣೆಯು ಅತ್ಯಂತ ಪ್ರಮುಖ ಹಾಗೂ ಕಾರ್ಯತಂತ್ರದ ಮೈಲಿಗಲ್ಲಾ ಗಿದೆ" ಎಂದು ಸಂತಸ ವ್ಯಕ್ತಪಡಿಸಿದರು.

ಈ ವಿನೂತನ ಯೋಜನೆಯ ಮೂಲಕ ಪದವಿಪೂರ್ವ ವೈದ್ಯಕೀಯ ಕಲಿಕೆ, ಸ್ನಾತಕೋತ್ತರ ಪರೀಕ್ಷಾ ತಯಾರಿ ಮತ್ತು ಅಂತರರಾಷ್ಟ್ರೀಯ ವೈದ್ಯಕೀಯ ವೃತ್ತಿ ಅವಕಾಶಗಳನ್ನು ಒಂದೇ ಸಮಗ್ರ ಡಿಜಿಟಲ್ ವೇದಿಕೆಯಡಿಯಲ್ಲಿ ಬೆಸೆಯುವ ಮಹತ್ವದ ಗುರಿಯನ್ನು ಸ್ಟಡಿಮೆಡಿಕ್ ಸಂಸ್ಥೆ ಹೊಂದಿದೆ.