IPL 2026: LSG ಪರ ಬೆಂಚ್ ಕಾಯುತ್ತಿರುವ ಅರ್ಜುನ್ ತೆಂಡೂಲ್ಕರ್‌ಗೆ ಬೇರೆ ತಂಡದಲ್ಲಿ ಚಾನ್ಸ್!
Arjun Tendulkar joins ARCS Andheri: ಲಖನೌ ಸೂಪರ್ ಜಯಂಟ್ಸ್ ತಂಡದಲ್ಲಿ ಬೆಂಚ್ ಕಾಯುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು, ಟಿ20 ಮುಂಬೈ ಲೀಗ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಎಆರ್‌ಸಿಎಸ್ ಅಂಧೇರಿ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಟಿ20 ಮುಂಬೈ ಲೀಗ್ ಆಡಲಿರುವ ಅರ್ಜುನ್ ತೆಂಡೂಲ್ಕರ್. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಲಖನೌ ಸೂಪರ್ ಜಯಂಟ್ಸ್ ತಂಡದ ಪರ ಇನ್ನೂ ಒಂದೂ ಪಂದ್ಯವನ್ನು ಆಡದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ (Arjun Tendulkar) ಬೇರೊಂದು ಟೂರ್ನಿಯಲ್ಲಿ ಆಡಲು ಅವಕಾಶ ಸಿಕ್ಕಿದೆ. ಮೇ 2 ರಂದು ನಡೆದಿದ್ದ ಟಿ20 ಮುಂಬೈ ಲೀಗ್ (T20 Mumbai League) ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮರಿ ತೆಂಡೂಲ್ಕರ್ ಅವರನ್ನು ಎಆರ್‌ಸಿಎಸ್ ಅಂಧೇರಿ ತಂಡ 10 ಲಕ್ಷ ರು. ಗಳಿಗೆ ಖರೀದಿಸಿದೆ. ಅವರು ಗೋವಾ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದರೂ ಆಲ್‌ರೌಂಡರ್‌ಗೆ ಮುಂಬೈ ಲೀಗ್‌ನಲ್ಲಿ ಆಡಲು ಅವಕಾಶವನ್ನು ಕಲ್ಪಿಸಲಾಗಿದೆ.
ಗೋವಾ ಆಲ್‌ರೌಂಡರ್ ಮೂಲ ಬೆಲೆ ಎರಡು ಲಕ್ಷ ರು ಗಳಿಗೆ ಟಿ20 ಮುಂಬೈ ಲೀಗ್ ಹರಾಜಿಗೆ ಎಂಟ್ರಿ ಕೊಟ್ಟರು, ಇವರನ್ನು ಖರೀದಿಸುವ ಸಲುವಾಗಿ ತಂಡಗಳ ನಡುವೇ ಭಾರಿ ಪೈಪೋಟಿ ನಡೆದಿತ್ತು. ಅವರು ಬೆಲೆ 400% ಏರಿಕೆಯಾಯಿತು. ಅಂತಿಮವಾಗಿ ಎಆರ್‌ಸಿಎಸ್ ಅಂಧೇರಿ ತಂಡ ಸಚಿನ್ ಪುತ್ರನನ್ನು ಖರೀದಿಸುವಲ್ಲಿ ಯಶಸ್ವಿಯಾಯಿತು.
2024ರ ಹಾಗೂ 2026ರ ಐಸಿಸಿ ಟಿ20 ವಿಶ್ವಕಪ್ ಗೆದ್ದಿದ್ದ ಟೀಮ್ ಇಂಡಿಯಾ ಆಲ್‌ರೌಂಡರ್ ಶಿವಂ ದುಬೇ ಅವರೊಂದಿಗೆ ಎಆರ್‌ಸಿಎಸ್ ಅಂಧೇರಿ ತಂಡದಲ್ಲಿ ಅರ್ಜುನ್ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲಿದ್ದಾರೆ. ಮುಂಬರುವ ಸೀಸನ್ ನಿಮಿತ್ತ ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಲ್‌ರೌಂಡರ್ ಅನ್ನು 20 ಲಕ್ಷ ರು ಮೂಲ ಬೆಲೆಗೆ ಉಳಿಸಿಕೊಂಡಿದೆ. ಶನಿವಾರ ನಡೆದಿದ್ದ ಹರಾಜಿನಲ್ಲಿ ಮುಶೀರ್ ಖಾನ್ ಅವರನ್ನು ಕೂಡ ಅಂಧೇರಿ ತಂಡ 11 ಲಕ್ಷ ರು. ಗಳಿಗೆ ಖರೀದಿಸಿದೆ.
ಐಪಿಎಲ್ ಟೂರ್ನಿಯಲ್ಲಿ ಎಲ್‌ಎಸ್‌ಜಿ ತಂಡದಲ್ಲಿ ಅರ್ಜುನ್ ತೆಂಡೂಲ್ಕರ್ ಅವರು ಪಡೆಯುವ ಮೊತ್ತದಲ್ಲಿ ಶೇ 33 ರಷ್ಟು ಹಣವನ್ನು ಟಿ20 ಮುಂಬೈ ಲೀಗ್‌ನಲ್ಲಿ ಪಡೆಯಲಿದ್ದಾರೆ. 2026ರ ಐಪಿಎಲ್ ಟೂರ್ನಿಯ ನಿಮಿತ್ತ ಲಖನೌ ಫ್ರಾಂಚೈಸಿಯು ಟ್ರೇಡ್ ಡೀಲ್ ಮೂಲಕ ಮುಂಬೈ ತಂಡದಿಂದ ಅರ್ಜುನ್ ತೆಂಡೂಲ್ಕರ್ ಅವರನ್ನು ಮೂಲ ಬೆಲೆ 30 ಲಕ್ಷ ರು. ಗಳಿಗೆ ಖರೀದಿಸಿತ್ತು. ಆದರೆ, ಅವರಿಗೆ ರಿಷಭ್ ಪಂತ್ ನಾಯಕತ್ವದ ತಂಡದ ಪರ ಇನ್ನೂ ಒಂದೇ ಒಂದು ಪಂದ್ಯವನ್ನು ಕೂಡ ಆಡಿಲ್ಲ.
ಅರ್ಜುನ್ ತೆಂಡೂಲ್ಕರ್‌ಗೆ ವಿಶೇಷ ಅನುಮತಿ
ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಪ್ರಸ್ತುತ ಇಲ್ಲದೇ ಇದ್ದರೂ ಅರ್ಜುನ್‌ಗೆ ಈ ಟೂರ್ನಿಯಲ್ಲಿ ಭಾಗವಹಿಸಲು ವಿಶೇಷ ಅನುಮತಿ ನೀಡಲಾಗಿದೆ. ಎಡಗೈ ಆಲ್‌ರೌಂಡರ್ 2022-23 ಸಾಲಿನಿಂದ ದೇಶಿ ಕ್ರಿಕೆಟ್‌ನಲ್ಲಿ ಗೋವಾ ತಂಡದ ಪರ ಆಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಮಾಜಿ ಆಟಗಾರನಾದ ಅರ್ಜುನ್ ತಮ್ಮ ವೃತ್ತಿಜೀವನವನ್ನು ಎಂಸಿಎ ಮೂಲಕ ಆರಂಭಿಸಿದ್ದರೂ, ಹೆಚ್ಚಿನ ಅವಕಾಶಗಳಿಗಾಗಿ ಬೇರೆ ತಂಡಕ್ಕೆ ಸೇರ್ಪಡೆಯಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಅವರು ಮುಂಬೈ ಪರ ಕೇವಲ ಎರಡು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
ಅರ್ಜುನ್ ಮುಂಬೈನಲ್ಲಿ ಜನಿಸಿದ್ದು, ಟಿ20 ಮುಂಬೈ ಲೀಗ್‌ನಲ್ಲಿ ಆಡಲು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಕಳೆದ ವರ್ಷ ಅವರು ಬೇರೆ ರಾಜ್ಯ ಕ್ರಿಕೆಟ್ ಮಂಡಳಿ ಅಡಿಯಲ್ಲಿ ಯಾವುದೇ ಲೀಗ್ ಆಡಿರಲಿಲ್ಲ. ಬಿಸಿಸಿಐ ನಿಯಮಗಳ ಪ್ರಕಾರ, ಒಬ್ಬ ಆಟಗಾರು ಐಪಿಎಲ್ ಜೊತೆಗೆ ಒಂದು ವರ್ಷದಲ್ಲಿ ಒಂದು ಲೀಗ್ ಆಡಬಹುದು. ಇನ್ನು ಪುದುಚೇರಿ ಪರ ಆಡುವ ಸಿದ್ದಾಂತ್ ಆದ್ಧಾತ್ ರಾವ್‌ಗೂ ಈ ಅವಕಾಶವನ್ನು ನೀಡಲಾಗಿದೆ. ಜೂನ್ ಮೊದಲ ವಾರದಂದು ಈ ಟೂರ್ನಿ ಆರಂಭವಾಗಲಿದೆ.