ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ಶ್ರೀಲಂಕಾ ತಂಡದ ವೀಕ್ನೆಸ್‌ ಬಹಿರಂಗಪಡಿಸಿದ ಆಕಾಶ್‌ ಚೋಪ್ರಾ!

2025ರ ಏಷ್ಯಾಕಪ್‌ ಟೂರ್ನಿಯು ಸೆಪ್ಟೆಂಬರ್‌ 9 ರಂದು ಅಧಿಕೃತವಾಗಿ ಆರಂಭವಾಗಲಿದೆ. ಇದರ ನಡುವೆ ಶ್ರೀಲಂಕಾ ಬೌಲರ್‌ಗಳ ದೌರ್ಬಲ್ಯಗಳ ಕುರಿತು ಮಾತನಾಡಿದ ಆಕಾಶ್‌ ಚೋಪ್ರಾ, ತಂಡದಲ್ಲಿ ಸ್ಥಿರ ಬೌಲರ್‌ಗಳ ಕೊರತೆ ಕಾಡುತ್ತಿದೆ ಮತ್ತು ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ಹಾಗೂ ತಂಡಕ್ಕೆ ಸ್ಥಿರವಾಗಿ ವಿಕೆಟ್‌ ತಂದು ಕೊಡುವ ಬೌಲರ್‌ಗಳು ಕೊರತೆ ಹೆಚ್ಚಿದೆ ಎಂದಿದ್ದಾರೆ.

ಶ್ರೀಲಂಕಾ ತಂಡದ ವೀಕ್ನೆಸ್‌ ಬಹಿರಂಗಪಡಿಸಿದ ಆಕಾಶ್‌ ಚೋಪ್ರಾ!

ಶ್ರೀಲಂಕಾ ತಂಡದ ವೀಕ್‌ನೆಸ್‌ ಬಗ್ಗೆ ಮಾತನಾಡಿದ ಆಕಾಶ್‌ ಚೋಪ್ರಾ! -

Profile Ramesh Kote Sep 5, 2025 8:39 PM

ದುಬೈ: ಮುಂಬರುವ ಏಷ್ಯಾಕಪ್‌ (Asia Cup 2025) ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ತಂಡಗಳ ರೇಸ್‌ನಲ್ಲಿ ಶ್ರೀಲಂಕಾ (Sri lanka) ತಂಡ ಕೂಡ ಇದೆ. ಈ ಟೂರ್ನಿಗೆ 16 ಆಟಗಾರರ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ಇದೀಗ ಶ್ರೀಲಂಕಾ ತಂಡದ ಬೌಲಿಂಗ್‌ ವಿಭಾಗದ ಬಗ್ಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ (Aakash Chopra) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ವೇಗದ ಬೌಲಿಂಗ್‌ ವಿಭಾಗದಲ್ಲಿ ಶ್ರೀಲಂಕಾ ಬೌಲರ್‌ಗಳು ತುಂಬಾ ನಿರಾಶಾಯಕ ಪ್ರದರ್ಶನ ತೋರುತ್ತಿದ್ದಾರೆ. ಲಂಕಾ ಪಡೆಯ ಪ್ರಬಲ ಬೌಲಿಂಗ್‌ ಅಸ್ತ್ರವಾದ ಮತೀಶ ಪತಿರಣ ಕೆಲವೊಮ್ಮೆ ಅಡ್ಡ ದಾರಿ ಹಿಡಿಯುತ್ತಾರೆ. ಇನ್ನುಳಿದ ಕೆಲವು ಆಟಗಾರರ ಸ್ಥಿರ ಪ್ರದರ್ಶನದ ಕೊರತೆಯಿದಾಗಿ ಬೌಲಿಂಗ್‌ ವೈಫಲ್ಯಕ್ಕೆ ಮುಖ್ಯ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಚೋಪ್ರಾ, "ವೇಗಿಗಳಿಗೆ ಸ್ವಲ್ಪ ಸ್ಥಿರತೆ ಬೌಲಿಂಗ್‌ ಸಮಸ್ಯೆಯಿದೆ. ದುಷ್ಮಂತ ಚಮೀರ ಸಂಪೂರ್ಣವಾಗಿ ಮಾರಕವಾಗಬಹುದು ಮತ್ತು ಕೆಲವೊಮ್ಮೆ ಭಯಾನಕವಾಗಬಹುದು. ಮತೀಶ ಪತಿರಣ ಮತ್ತೆ ಮಾರಕವಾಗಬಹುದು ಮತ್ತು ಕೆಲವೊಮ್ಮೆ ಅವರು ವೈಡ್ ಬೌಲಿಂಗ್ ಮಾಡಲು ಪ್ರಾರಂಭಿಸಿದಾಗ, ಒಂದು ವರ್ಷದಲ್ಲಿ ಯಾರೂ ಅವರಿಗಿಂತ ಹೆಚ್ಚು ವೈಡ್ ಬೌಲಿಂಗ್ ಮಾಡಿಲ್ಲ. ಬಿನುರ ಫರ್ನಾಂಡೊ ಅವರು ಆಡಿದರೆ, ಅವರ ಎಸೆತ ಸ್ವಿಂಗ್ ಆಗುತ್ತಿದ್ದರೆ ತುಂಬಾ ಒಳ್ಳೆಯದು. ಆದರೆ ಅವರು ಸ್ವಲ್ಪ ಅಸ್ಥಿರ ಪ್ರದರ್ಶನವನ್ನು ತೋರುತ್ತಿದ್ದಾರೆ," ಎಂದರು.

Asia Cup 2025: ಭಾರತ ತಂಡದಲ್ಲಿರುವ ಮೌಲ್ಯಯುತ ಆಟಗಾರನನ್ನು ಹೆಸರಿಸಿದ ಅಜಿಂಕ್ಯಾ ರಹಾನೆ!

"ಗಾಯಗಳು ಒಂದು ಸಮಸ್ಯೆ ಎಂದು ನಾನು ಭಾವಿಸುತ್ತೇನೆ. ಹಲವು ಆಟಗಾರರು ಗಾಯಗಳಿಂದ ಹಿಂತಿರುಗುತ್ತಿದ್ದಾರೆ. ನೀವು ಗಾಯದಿಂದ ಹಿಂತಿರುಗಿದಾಗ, ನಿಮ್ಮನ್ನು ಯಾರೂ ಪರೀಕ್ಷೆಗೆ ಒಳಪಡಿಸುವುದಿಲ್ಲ. ನಾವು ವಾನಿಂದು ಹಸರಂಗ ಬಗ್ಗೆ ಮಾತನಾಡುತ್ತಿದ್ದೇವೆ, ಆದರೆ ಅವರು ಗಾಯದಿಂದ ಹಿಂತಿರುಗುತ್ತಿದ್ದಾರೆ. ಅವರು ಅಷ್ಟು ಚೆನ್ನಾಗಿ ಆಡದಿದ್ದರೆ ಏನು? ಶ್ರೀಲಂಕಾ ತಂಡ ಅವರ ಮೇಲೆ ಬಹಳಷ್ಟು ಅವಲಂಬಿತವಾಗಿದೆ," ಎಂದು ತಿಳಿಸಿದ್ದಾರೆ.

ಗಾಯದ ಸಮಸ್ಯೆಗಳಿಂದಾಗಿಯೂ ಶ್ರೀಲಂಕಾ ಬೌಲಿಂಗ್‌ ವಿಭಾಗ ವೀಕ್‌ ಆಗಿದೆ. ಪಂದ್ಯದ ವೇಳೆ ಗಾಯಕ್ಕೆ ತುತ್ತಾದ ಹಲವು ಆಟಗಾರರು ತಂಡದಿಂದ ದೂರ ಉಳಿಯಬೇಕಾದ ಅನಿವಾರ್ಯತೆ ಎದುರಾಯಿತು. ಉದಾಹರಣೆಗೆ ಗಮಿಸುವುದಾದರೆ, ವಾನಿಂದು ಹಸರಂಗ 77 ಟಿ20ಐ ಇನಿಂಗ್ಸ್‌ಗಳಲ್ಲಿ 6.98ರ ಎಕಾನಮಿಯಲ್ಲಿ 131 ವಿಕೆಟ್‌ ಕಬಳಿಸಿದ್ದಾರೆ. ಆದಾಗ್ಯೂ ಜುಲೈ 8 ರಂದು ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ಕೂಡ ತಂಡದ ಹಿನ್ನಡೆಗೆ ಮುಖ್ಯ ದೌರ್ಬಲ್ಯ," ಎಂದು ಅವರ ಹೇಳಿದ್ದಾರೆ.

Asia Cup 2025: ಸಂಜು ಸ್ಯಾಮ್ಸನ್‌ಗೆ ಬ್ಯಾಟಿಂಗ್‌ ಕ್ರಮಾಂಕ ಸೂಚಿಸಿದ ಮೊಹಮ್ಮದ್‌ ಕೈಫ್‌!

ಶ್ರೀಲಂಕಾದ 2022ರ ಏಷ್ಯಾಕಪ್‌ ಪ್ರದರ್ಶನ ನೆನಪಿಸಿದ ಚೋಪ್ರಾ

"ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ಗೆ ತಲುಪುವ ತಂಡ ಎಂದು ನಾವು ಹೇಳುತ್ತಿದ್ದ ತಂಡ ಶ್ರೀಲಂಕಾ. ಆದಾಗ್ಯೂ, ಕುಸಿತ ಪ್ರಾರಂಭವಾದಾಗ, ಆ ತಂಡ ಟೀಕೆಗಳನ್ನು ಎದುರಿಸುತ್ತದೆ. ಆದ್ದರಿಂದ 2022ರಲ್ಲಿ ನೀವು ಮಾಡಿದ್ದನ್ನು ಪುನರಾವರ್ತಿಸಲು ಇದು ಒಂದು ಅವಕಾಶ. ಕಳೆದುಹೋದ ವೈಭವವನ್ನು ಮರಳಿ ಪಡೆಯಿರಿ. ಇದು ಸುಲಭದ ತಂಡವಲ್ಲ. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾದ ಎರಡು ತಂಡಗಳು ಮಾತ್ರ ಮುನ್ನಡೆಯುತ್ತವೆ. ನಾನು ಹಾಂಗ್ ಕಾಂಗ್ ಅನ್ನು ಈಗಿನಿಂದಲೇ ಕೈಬಿಡುತ್ತಿದ್ದೇನೆ. ಈ ಗುಂಪಿನಿಂದ ಮುನ್ನಡೆಯುವುದು ಯಾರಿಗೂ ಅಷ್ಟು ಸುಲಭವಲ್ಲ, ಆದರೆ ಶ್ರೀಲಂಕಾ ಉತ್ತಮ ತಂಡವಾಗಿರುವುದರಿಂದ ನೀವು ಅವರನ್ನು ಬೆಂಬಲಿಸಬೇಕು," ಎಂದು ಆಕಾಶ್‌ ಚೋಪ್ರಾ ತಿಳಿಸಿದ್ದಾರೆ.