T20 World Cup 2026: ಸೆಮಿಫೈನಲ್ಸ್‌ಗೆ ಪ್ರವೇಶಿಸಬಲ್ಲ 4 ತಂಡಗಳನ್ನು ಆರಿಸಿದ ಗ್ಲೆನ್ ಮೆಗ್ರಾಥ್!
ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಸೂಪರ್-8ರ ಹಂತಕ್ಕೆ ತಲುಪಿದೆ. ಆದರೆ, ಬಲಿಷ್ಠ ಆಸ್ಟ್ರೇಲಿಯಾ ತಂಡ ಲೀಗ್ ಹಂತದಿಂದಲೇ ಹೊರಬಿದ್ದಿದೆ. ಅಂದ ಹಾಗೆ ಆಸ್ಟ್ರೇಲಿಯಾ ದಿಗ್ಗಜ ಗ್ಲೆನ್ ಮೆಗ್ರಾಥ್ ಅವರು, ಸೆಮಿಫೈನಲ್‌ಗೆ ಪ್ರವೇಶಿಸಬಲ್ಲ ನಾಲ್ಕು ತಂಡಗಳನ್ನು ಆರಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಸೆಮೀಸ್‌ಗೇರಬಲ್ಲ 4 ತಂಡಗಳನ್ನು ಆರಿಸಿದ ಮೆಗ್ರಾಥ್. -
ನವದೆಹಲಿ: ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯು ನಿರ್ಣಾಯಕ ಹಂತಕ್ಕೆ ಬಂದಿದೆ. ಆದರೆ, ಬಲಿಷ್ಠ ಆಸ್ಟ್ರೇಲಿಯಾ (Australia) ತಂಡ ಗುಂಪು ಹಂತದಿಂದಲೇ ಹೊರ ಬಿದ್ದಿದೆ. ಶ್ರೀಲಂಕಾ ಹಾಗೂ ಜಿಂಬಾಬ್ವೆ ಎದುರಿನ ಪಂದ್ಯಗಳನ್ನು ಸೋಲುವ ಮೂಲಕ ಆಸೀಸ್ ಅಚ್ಚರಿ ರೀತಿಯಲ್ಲಿ ಟೂರ್ನಿಯಿಂದ ಹೊರಬಿದ್ದಿದೆ. ಆದರೆ, ಆಸೀಸ್ ವೇಗದ ಬೌಲಿಂಗ್ ದಿಗ್ಗಜ ಗ್ಲೆನ್ ಮೆಗ್ರಾಥ್ Glenn McGrath) ಅವರು ಈ ಬಾರಿ ಸೆಮಿಫೈನಲ್‌ಗೆ ಪ್ರವೇಶಿಸಬಲ್ಲ ನಾಲ್ಕು ತಂಡಗಳನ್ನು ಆಯ್ಕೆ ಮಾಡಿದ್ದಾರೆ.
ಅಂದ ಹಾಗೆ ಆಸ್ಟ್ರೇಲಿಯಾ ಕೂಡ ಟಿ20 ವಿಶ್ವಕಪ್ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿರುವ ತಂಡವಾಗಿತ್ತು. ಆದರೆ, ಅಚ್ಚರಿ ರೀತಿಯಲ್ಲಿ ಕಾಗರೂ ಪಡೆ ಟೂರ್ನಿಯಿಂದ ಹೊರಬಿದ್ದಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ, ಭಾರತ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಸೂಪರ್-8ರ ಹಂತಕ್ಕೆ ಪ್ರವೇಶ ಮಾಡಿವೆ. ಈ ಎಂಟು ತಂಡಗಳನ್ನು ತಲಾ ನಾಲ್ಕು ತಂಡಗಳನ್ನಾಗಿ ಎರಡು ಗುಂಪುಗಳನ್ನು ಮಾಡಲಾಗಿದೆ. ʻಎʼ ಗುಂಪಿನಲ್ಲಿ ಜಿಂಬಾಬ್ವೆ, ಭಾರತ, ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸ್ಥಾನ ಪಡೆದಿವೆ.
ಇನ್ನು ʻಬಿʼ ಗುಂಪಿನಲ್ಲಿ ನ್ಯೂಜಿಲೆಂಡ್, ಶ್ರೀಲಂಕಾ, ಇಂಗ್ಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಸ್ತಾನ ಪಡೆದಿವೆ. ಈ ಎರಡೂ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್ಸ್‌ಗೆ ಪ್ರವೇಶ ಮಾಡಲಿವೆ. ಅಂದ ಹಾಗೆ ಸೂಪರ್-8ರ ಹಂತದಲ್ಲಿ ಒಂದು ತಂಡಕ್ಕೆ ಮೂರು ಪಂದ್ಯಗಳಿವೆ. ಒಂದು ತಂಡ ಮೂರೂ ಪಂದ್ಯಗಳನ್ನು ಗೆದ್ದರೆ,ಸೆಮೀಸ್‌ಗೆ ಪ್ರವೇಶ ಮಾಡಲಿದೆ. ಎರಡು ಪಂದ್ಯಗಳನ್ನು ಗೆದ್ದರೂ ಕೂಡ ಅವಕಾಶ ಸಿಗಲಿದೆ.
IND vs NED: ಶಿವಂ ದುಬೆ ಅಬ್ಬರ, ನೆದರ್ಲೆಂಡ್ಸ್ ವಿರುದ್ಧವೂ ಗೆದ್ದು ಬೀಗಿದ ಭಾರತ ತಂಡ!
ಸೆಮಿಫೈನಲ್‌ಗೆ ಪ್ರವೇಶ ಮಾಡಬಲ್ಲ 4 ತಂಡಗಳನ್ನು ಆರಿಸಿದ ಮೆಗ್ರಾಥ್
ಆಸ್ಟ್ರೇಲಿಯಾ ಮಾಜಿ ವೇಗಿ ಗ್ಲೆಮ್ ಮೆಗ್ರಾಥ್ ಅವರು ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದರು. ಈ ವೇಳೆ ಅವರಿಗೆ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಾವ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಬಹುದು ಎಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಮೆಗ್ರಾಥ್, ಭಾರತ, ನ್ಯೂಜಿಲೆಂಡ್, ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳನ್ನು ಆರಿಸಿದರು.
"ಮೊದಲನೇಯದಾಗಿ ನಾನು ಭಾರತ ತಂಡವನ್ನು ಆರಿಸುತ್ತೇನೆ, ಎರಡನೇ ತಂಡ ದಕ್ಷಿಣ ಆಫ್ರಿಕಾ ಹಾಗೂ ಮೂರನೇ ತಂಡವಾಗಿ ಇಂಗ್ಲೆಂಡ್ ತಂಡವನ್ನು ಆಯ್ಕೆ ಮಾಡುತ್ತೇನೆ. ಆದರೆ, ನಾಲ್ಕನೇ ತಂಡವನ್ನು ನಾನು ಪಾಕಿಸ್ತಾನ ಅಥವಾ ನ್ಯೂಜಿಲೆಂಡ್ ಪೈಕಿ ಒಂದು ತಂಡವನ್ನು ಆಯ್ಕೆ ಮಾಡಲು ಬಯಸುತ್ತೇನೆ," ಎಂದು ಗ್ಲೆನ್ ಮೆಗ್ರಾಥ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
IND vs NED: ಶಿವಂ ದುಬೆ ಅಬ್ಬರ, ನೆದರ್ಲೆಂಡ್ಸ್ ವಿರುದ್ಧವೂ ಗೆದ್ದು ಬೀಗಿದ ಭಾರತ ತಂಡ!
ಪಾಕಿಸ್ತಾನವನ್ನು ಕಿವೀಸ್ ಹಿಂದಿಕ್ಕಬಹುದು
ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಸಾಧಾರಣ ಪ್ರದರ್ಶನವನ್ನು ತೋರುತ್ತಿದೆ. ಎ ಗುಂಪಿನಲ್ಲಿ ಪಾಕಿಸ್ತಾನ ತಂಡ, ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಪಡೆದಿತ್ತು. ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ವಿರುದ್ದ ಪಾಕ್ ಸೋಲು ಅನುಭವಿಸಿತ್ತು. ಭಾರತ ಬಿಟ್ಟರೆ ಇನ್ನುಳಿದ ತಂಡಗಳು ಕಡಿಮೆ ಸಾಮರ್ಥ್ಯ ಹೊಂದಿರುವ ಕಾರಣ, ಪಾಕ್ ಗೆದ್ದಿತ್ತು. ಆದರೆ, ಸೂಪರ್-8ರಲ್ಲಿ ಪಾಕಿಸ್ತಾನ ತಂಡಕ್ಕೆ ಕಠಿಣ ಸವಾಲು ಎದುರಾಗಲಿದೆ.