ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಸಿಎಸ್‌ಕೆ ತೆಗೆದುಕೊಂಡ ʻರಿಟೈರ್ಡ್‌ ಔಟ್‌ʼ ನಿರ್ಧಾರದ ಬಗ್ಗೆ ಆಯುಷ್‌ ಮ್ಹಾತ್ರೆ ಪ್ರಾಮಾಣಿಕ ಅಭಿಪ್ರಾಯ!

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ತೆಗೆದುಕೊಂಡ ರಿಟೈರ್ಡ್‌ ಔಟ್‌ ನಿರ್ಧಾರದ ಬಗ್ಗೆ ಬ್ಯಾಟ್ಸ್‌ಮನ್‌ ಆಯುಷ್‌ ಮ್ಹಾತ್ರೆ ಪ್ರತಿಕ್ರಿಯಿಸಿದ್ದಾರೆ. ವೈಯಕ್ತಿಕ ಪ್ರದರ್ಶನಕ್ಕಿಂತ ತಂಡ ನನ್ನ ಪಾಲಿಗೆ ಮುಖ್ಯ ಎಂದು ಅವರು ತಿಳಿಸಿದ್ದಾರೆ.

IPL 2026: ರಿಟೈರ್ಡ್‌ ಔಟ್‌ ಬಗ್ಗೆ ಆಯುಷ್‌ ಪ್ರಾಮಾಣಿಕ ಅಭಿಪ್ರಾಯ!

ರಿಟೈರ್ಡ್‌ ಔಟ್‌ ಬಗ್ಗೆ ಆಯುಷ್‌ ಮ್ಹಾತ್ರೆ ಹೇಳಿಕೆ. -

Profile
Ramesh Kote Apr 12, 2026 4:57 PM

ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದ ಸಮಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತೆಗೆದುಕೊಂಡ ʻರಿಟೈರ್ಡ್‌ ಔಟ್‌ʼ ನಿರ್ಧಾರದ ಬಗ್ಗೆ ಯುವ ಬ್ಯಾಟ್ಸ್‌ಮನ್‌ ಆಯುಷ್‌ ಮ್ಹಾತ್ರೆ (Ayush Mahtre) ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನನ್ನ ವೈಯಕ್ತಿಕ ಪ್ರದರ್ಶನಕ್ಕಿಂತ ತಂಡದ ಹಿತಾಸಕ್ತಿ ನನಗೆ ತುಂಬಾ ಮುಖ್ಯ ಎಂಬುದನ್ನು ಸಿಎಸ್‌ಕೆ ಬ್ಯಾಟ್ಸ್‌ಮನ್‌ ಉಲ್ಲೇಖಿಸಿದ್ದಾರೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಶತಕ ಹಾಗೂ ಆಯುಷ್‌ ಮ್ಹಾತ್ರೆ ಅರ್ಧಶತಕದ ಬಲದಿಂದ ಸಿಎಸ್‌ಕೆ 19ನೇ ಸೀಸನ್‌ನಲ್ಲಿ ಮೊದಲ ಜಯ ದಾಖಲಿಸಿತು.

ಶನಿವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್‌ ವಿಕೆಟ್‌ ಒಪ್ಪಿಸಿದ ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಆಯುಷ್‌ ಮ್ಹಾತ್ರೆ, 36 ಎಸೆತಗಳಲ್ಲಿ 59 ರನ್‌ಗಳನ್ನು ಗಳಿಸಿದ್ದರು ಹಾಗೂ ಸಿಎಸ್‌ಕೆ 18ನೇ ಓವರ್‌ನಲ್ಲಿ 175 ರನ್‌ಗಳನ್ನು ಕಲೆ ಹಾಕಿತ್ತು. ಈ ವೇಳೆ ಡೆತ್‌ ಓವರ್‌ನಲ್ಲಿ ರನ್‌ ರೇಟ್‌ ಹೆಚ್ಚಿಸುವ ಸಲುವಾಗಿ ಸಿಎಸ್‌ಕೆ ಮ್ಯಾನೇಜ್‌ಮೆಂಟ್‌, ಆಯುಷ್‌ ಮ್ಹಾತ್ರೆ ಅವರನ್ನು ರಿಟೈರ್ಟ್‌ ಔಟ್‌ ನಿರ್ಧಾರವನ್ನು ತೆಗೆದುಕೊಂಡು, ಶಿವಂ ದುಬೇಗೆ ಬ್ಯಾಟ್‌ ಮಾಡಲು ಅವಕಾಶವನ್ನು ನೀಡಿತು ಕಲ್ಪಿಸಿತು.

CSK vs DC: 59 ರನ್‌ ಗಳಿಸಿದ ಬಳಿಕ ಆಯುಷ್‌ ಮ್ಹಾತ್ರೆ ರಿಟೈರ್ಡ್‌ ಔಟ್‌ ತೆಗೆದುಕೊಂಡಿದ್ದೇಕೆ? ಕಾರಣ ಇಲ್ಲಿದೆ!

ಪಂದ್ಯದ ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಆಯುಷ್‌ ಮ್ಹಾತ್ರೆ, "ಅದರಲ್ಲೇನೂ ವಿಶೇಷತೆ ಇರಲಿಲ್ಲ. ನಾನು ಬ್ಯಾಟ್‌ ಮಾಡುತ್ತಿದ್ದೆ ಮತ್ತು ತಂಡಕ್ಕೆ ದೊಡ್ಡ ಶಾಟ್‌ಗಳ ಅಗತ್ಯವಿತ್ತು. ಶಿವಂ ಕೂಡ ದೊಡ್ಡ ಶಾಟ್‌ಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ. ನನ್ನ ಕಡೆಯಿಂದ ಕೊನೆಯಲ್ಲಿ ದೊಡ್ಡ ಹೊಡೆತಗಳು ಬಂದಿರಲಿಲ್ಲ, ಆದ್ದರಿಂದ ಟೀಮ್‌ ಮ್ಯಾನೇಜ್‌ಮೆಂಟ್‌ ಈ ನಿರ್ಧಾರ ತೆಗೆದುಕೊಂಡಿತು. ಪಂದ್ಯದಲ್ಲಿ ಇದೆಲ್ಲವೂ ನಡೆಯುತ್ತದೆ,” ಎಂದು ತಿಳಿಸಿದ್ದಾರೆ.

ಸಿಎಸ್‌ಕೆ ಮ್ಯಾನೇಜ್‌ಮೆಂಟ್‌ ತೆಗೆದುಕೊಂಡ ನಿರ್ಧಾರ ಫಲ ನೀಡಿತು. ಶಿವಂ ದುಬೇ ಕೇವಲ 10 ಎಸೆತಗಳಲ್ಲಿ 20 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 212 ರನ್‌ಗಳನ್ನು ಕಲೆ ಹಾಕಿತು.

CSK vs DC: ಸಂಜು ಸ್ಯಾಮ್ಸನ್‌ ಭರ್ಜರಿ ಶತಕ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಜಯ!

ಸಂಜು ಸ್ಯಾಮ್ಸನ್‌ ಜೊತೆಗೆ 113 ರನ್‌ ಕಲೆ ಹಾಕಿದ್ದ ಮ್ಹಾತ್ರೆ

ಇನಿಂಗ್ಸ್‌ನ ಆರಂಭದಲ್ಲೇ ಮ್ಹಾತ್ರೆ ಮಹತ್ವದ ಬ್ಯಾಟಿಂಗ್‌ ನಡೆಸಿ ಎರಡನೇ ವಿಕೆಟ್‌ಗೆ ಸಂಜು ಸ್ಯಾಮ್ಸನ್ ಜೊತೆಗೆ 113 ರನ್‌ಗಳ ಜೊತೆಯಾಟವನ್ನು ಆಡಿದರು. ಈ ಜೊತೆಯಾಟವು ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸಿಎಸ್‌ಕೆ ತಂಡದ ಎರಡನೇ ಅತಿ ಹೆಚ್ಚು ಜೊತೆಯಾಟವಾಗಿದೆ. ಋತುರಾಜ್ ಗಾಯಕ್ವಾಡ್ ಅವರ ಆರಂಭಿಕ ವಿಕೆಟ್ ಕಳೆದುಕೊಂಡ ನಂತರ, ಈ ಜೊತೆಯಾಟ ಇನಿಂಗ್ಸ್‌ನ ಸ್ಥಿರಗೊಳಿಸಿ ಮಧ್ಯ ಓವರ್‌ಗಳಲ್ಲಿ ಸಮತೋಲನದ ರನ್‌ಗತಿಯನ್ನು ಕಾಪಾಡಿತು.

ಬಳಿಕ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 189 ರನ್‌ಗಳಿಗೆ ಆಲ್‌ಔಟ್ ಮಾಡುವಲ್ಲಿ ವೇಗಿಗಳಾದ ಜೇಮಿ ಓವರ್ಟನ್‌ ಹಾಗೂ ಅನ್ಷುಲ್‌ ಕಾಂಬೋಜ್‌ ನೆರವು ನೀಡಿದರು. ಇದರೊಂದಿಗೆ 23 ರನ್‌ಗಳ ಜಯ ಸಾಧಿಸಿ, 2026ರ ಐಪಿಎಲ್ ಟೂರ್ನಿಯಲ್ಲಿ ತಮ್ಮ ಮೊದಲ ಗೆಲುವನ್ನು ದಾಖಲಿಸಿತು.