BAN vs SA: 6 ವಿಕೆಟ್ ಸಾಧನೆಯ ಮೂಲಕ 130 ವರ್ಷಗಳ ಹಳೆಯ ದಾಖಲೆ ಮುರಿದ ಸೈಮನ್ ಹಾರ್ಮರ್!
ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ಸಾಧನೆ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಎಡಗೈ ಸ್ಪಿನ್ನರ್ 130 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇವರ ಸ್ಪಿನ್ ಮೋಡಿಯ ಬಲದಿಂದ ಹರಿಣ ಪಡೆ ಮೊದಲನೇ ಟೆಸ್ಟ್ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದುಕೊಂಡಿತು.
130 ವರ್ಷಗಳ ಹಳೆಯ ದಾಖಲೆ ಮುರಿದ ಸೈಮನ್ ಹಾರ್ಮರ್. -
ಜೋಹನ್ಸ್ಬರ್ಗ್: ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ (BAN vs SA) ದಕ್ಷಿಣ ಆಫ್ರಿಕಾ ಸ್ಪಿನ್ನರ್ ಸೈಮನ್ ಹಾರ್ಮರ್ (Simon Harmer) ಅವರು ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದರು. ಅವರು ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ಗಳ ಸಾಧನೆ ಮಾಡುವ ಮೂಲಕ 130 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇವರ ಸ್ಪಿನ್ ಮೋಡಿಯ ಬಲದಿಂದ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಇಲ್ಲಿನ ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಸೈಮನ್ ಹಾರ್ಮರ್ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರು ಬೌಲ್ ಮಾಡಿದ್ದ 16 ಓವರ್ಗಳಲ್ಲಿ 83 ರನ್ಗಳನ್ನು ಗಳಿಸಿ ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಇವರನ್ನು ಬಾಂಗ್ಲಾ ಬ್ಯಾಟರ್ಗಳು ಮೆಟ್ಟಿ ನಿಂತಿದ್ದರು. ಇದರ ಫಲವಾಗಿ ಬಾಂಗ್ಲಾದೇಶ ತಂಡ ಪ್ರಥಮ ಇನಿಂಗ್ಸ್ನಲ್ಲಿ 400 ರನ್ಗಳನ್ನು ಕಲೆ ಹಾಕಿತ್ತು.
ಆದರೆ, ಎರಡನೇ ಇನಿಂಗ್ಸ್ನಲ್ಲಿ ದಕ್ಷಿಣ ಸ್ಪಿನ್ನರ್ ಸೈಮನ್ ಹಾರ್ಮರ್ ಅವರು ತಮ್ಮ ಸ್ಪಿನ್ ಮೋಡಿಯ ಮೂಲಕ ಬಾಂಗ್ಲಾದೇಶ ಬ್ಯಾಟ್ಸ್ಮನ್ಗಳಿಗೆ ಪರದಾಡುವಂತೆ ಮಾಡಿದ್ದರು. ಅವರು ಬೌಲ್ ಮಾಡಿದ್ದ 12.3 ಓವರ್ಗಳಿಗೆ 51 ರನ್ ನೀಡಿ 6 ವಿಕೆಟ್ಗಳ ಸಾಧನೆಯನ್ನು ಮಾಡಿದರು. ಆ ಮೂಲಕ ಎದುರಾಳಿ ಬಾಂಗ್ಲಾದೇಶ ತಂಡವನ್ನು ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 168 ರನ್ಗಳಿಗೆ ಆಲ್ಔಟ್ ಮಾಡಲು ಆತಿಥೇಯರಿಗೆ ನೆರವು ನೀಡಿದರು.