ಆಸ್ಟ್ರೇಲಿಯಾ ವಿರುದ್ಧ ಮೊದಲ ಒಡಿಐ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ!
AUS vs BAN 2nd ODI Highlights: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಬಾಂಗ್ಲಾದೇಶ ತಂಡ, ಎರಡನೇ ಏಕದಿನ ಪಂದ್ಯದಲ್ಲಿ 5 ವಿಕೆಟ್ ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಬಾಂಗ್ಲಾದೇಶ ತಂಡ 2-0 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.
ಆಸ್ಟ್ರೇಲಿಯಾ ಎದುರು ಒಡಿಐ ಸರಣಿ ಗೆದ್ದ ಬಾಂಗ್ಲಾದೇಶ. -
ನವದೆಹಲಿ: ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಬಾಂಗ್ಲಾದೇಶ (Bangaladesh) ತಂಡ, ಎರಡನೇ ಏಕದಿನ ಪಂದ್ಯದಲ್ಲಿಯೂ (AUS vs BAN) ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ಗಳ (ಡಿಎಲ್‌ಎಸ್ ನಿಯಮ) ಗೆಲುವು ಪಡೆಯಿತು. ಆ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಬಾಂಗ್ಲಾದೇಶ ತಂಡ ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು. ಇದರೊಂದಿಗೆ ಇದೇ ಮೊಟ್ಟ ಮೊದಲ ಬಾರಿ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಇತಿಹಾಸವನ್ನು ನಿರ್ಮಿಸಿದೆ.
ಡಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯಕ್ಕೆ ಮಳೆ ಕಾಟ ನೀಡಿತ್ತು. ಈ ಹಿನ್ನೆಲೆಯಲ್ಲಿ ಡಿಎಲ್‌ಎಸ್ ನಿಯಮದ ಪ್ರಕಾರ ಬಾಂಗ್ಲಾದೇಶ ತಂಡಕ್ಕೆ 41 ಓವರ್‌ಗಳಲ್ಲಿ 192 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಬಾಂಗ್ಲಾ, ಸೌಮ್ಯ ಸರ್ಕಾರ್, ನಜ್ಮುಲ್ ಹುಸೇನ್ ಶಾಂಟೊ ಹಾಗೂ ತೌಹಿದ್ ಹೃದಾಯ್ ಅವರ ಬ್ಯಾಟಿಂಗ್ ಬಲದಿಂದ ಇನ್ನೂ 36 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಬೀಗಿತ್ತು.
IND vs AFG: ಮೊಹಿಂದರ್ ಅಮರನಾಥ್ ದಾಖಲೆ ಮುರಿಯುವ ಸನಿಹದಲ್ಲಿ ರೋಹಿತ್ ಶರ್ಮಾ!
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯಾ ತಂಡ 42 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳನ್ನು ಕಲೆ ಹಾಕಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪ್ರಥಮ ಇನಿಂಗ್ಸ್ ಅನ್ನು ಇಲ್ಲಿಗೇ ನಿಲ್ಲಿಸಲಾಯಿತು. ಈ ವೇಳೆ ಮಾರ್ನಸ್ ಲಾಬುಶೇನ್ (ಅಜೇಯ 55 ರನ್) ಹಾಗೂ ಮತ್ತೊಂದು ತುದಿಯಲ್ಲಿ ನೇಥನ್ ಎಲ್ಲಿಸ್ ಇದ್ದರು. ಇದಕ್ಕೂ ಮುನ್ನ ಕ್ಸಿವಿಯರ್ ಬಾರ್ಲೆಟ್ ನಿರ್ಣಾಯಕ 52 ರನ್‌ಗಳನ್ನು ಕಲೆ ಹಾಕಿದ್ದರು.
ಬಾಂಗ್ಲಾದೇಶ ತಂಡದ ಹೊಸ ಚೆಂಡಿನ ಬೌಲರ್‌ಗಳಾದ ಮುಸ್ತಾಫಿಝುರ್ ರೆಹಮಾನ್ ಹಾಗೂ ಟಾಸ್ಕಿನ್ ಅಹ್ಮದ್ ಅವರು ತಮಾ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಒಡಿಐ ಸರಣಿಯ ಗೆಲುವಿನ ಬಳಿಕ ಬಾಂಗ್ಲಾದೇಶ ತಂಡ, ತವರಿನಲ್ಲಿ ಸತತ ಐದು 50 ಓವರ್‌ಗಳ ಸರಣಿ ಗೆದ್ದಂತಾಯಿತು. ಇದಕ್ಕೂ ಮುನ್ನ ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ತಂಡ ಒಡಿಐ ಸರಣಿಗಳನ್ನು ಗೆದ್ದಿತ್ತು.
A historic milestone for Bangladesh Cricket. FIRST-EVER ODI SERIES WIN AGAINST AUSTRALIA. 🇧🇩🏏
— Bangladesh Cricket (@BCBtigers) June 11, 2026
Dutch-Bangla Bank Bangladesh vs Australia ODI Series 2026#BCB #Bangladesh #Cricket #BANvAUS #Tigers pic.twitter.com/BKxzA92OrK
ಎರಡನೇ ಏಕದಿನ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಬಾಂಗ್ಲಾದೇಶ ತಂಡದ ಉಪ ನಾಯಕ ನಜ್ಮುಲ ಹುಸೇನ್ ಶಾಂಟೊ ಮಾತನಾಡಿದರು. ಅವರು,"ತುಂಬಾ ಅದ್ಭುತ ಭಾವನೆಗಳು ಉಂಟಾಗುತ್ತಿವೆ. ಈ ಸರಣಿಯಲ್ಲಿ ನಾವು ಆಡಿದ ಹಾದಿ ಹಾಗೂ ನಾವು ತೋರಿದ ಧೈರ್ಯದಿಂದ ತುಂಬಾ ಸಂತಸವಿದೆ," ಎಂದು ಹೇಳಿದ್ದಾರೆ.
ಸಚಿನ್, ಕೊಹ್ಲಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ವೈಭವ್ ಸೂರ್ಯವಂಶಿ ಹೊಂದಿದ್ದಾರೆ: ಡೇಲ್ ಸ್ಟೇನ್!
"ಕಳೆದ ಕೆಲ ತಿಂಗಳುಗಳಿಂದ ನಾವು ತುಂಬಾ ಕಠಿಣ ಪರಿಶ್ರಮವನ್ನು ಪಟ್ಟಿದ್ದೇವೆ ಹಾಗೂ ಇದರ ಪ್ರತಿಫಲ ಕಳೆದ ಎರಡು ಪಂದ್ಯಗಳಲ್ಲಿ ಸಿಕ್ಕಿದೆ ಹಾಗೂ ಇದು ನಿಜಕ್ಕೂ ಅಸಾಧಾರಣವಾಗಿದೆ. ಈ ತಂಡದ ಭಾಗವಾಗಿರುವುದಕ್ಕೆ ನಿಜಕ್ಕೂ ಹೆಮ್ಮೆ ಎನಿಸುತ್ತಿದೆ," ಎಂದು ನಜ್ಮುಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಅಗ್ರ ದರ್ಜೆಯ ಆಟಗಾರರ ಅನಪಸ್ಥಿತಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ತಂಡ ಏಷ್ಯಾ ಉಪ ಖಂಡದಲ್ಲಿ ಸತತ ಎರಡು ಏಕದಿನ ಸರಣಿಗಳಲ್ಲಿ ಸೋಲು ಅನುಭವಿಸಿದೆ. ಇದಕ್ಕೂ ಮುನನ ಪಾಕಿಸ್ತಾನ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನು1-2 ಅಂತರದಲ್ಲಿ ಸೋಲು ಅನುಭವಿಸಿತ್ತು.