ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಟಿ20 ವಿಶ್ವಕಪ್‌ ಚಾಪಿಯನ್ಸ್‌ ಭಾರತ ತಂಡಕ್ಕೆ 131 ಕೋಟಿ ರು ನಗದು ಬಹುಮಾನ ಘೋಷಿಸಿದ ಬಿಸಿಸಿಐ!

2026ರ ಐಸಿಸಿ ಟಿ20 ವಿಶ್ವಕಪ್‌ ಚಾಂಪಿಯನ್ಸ್‌ ಭಾರತ ತಂಡಕ್ಕೆ ಬಿಸಿಸಿಐ ಭರ್ಜರಿ ನಗದು ಬಹುಮಾನವನ್ನು ಘೋಷಿಸಿದೆ. ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡಕ್ಕೆ 131 ಕೋಟಿ ನಗದು ಬಹುಮಾನವನ್ನು ಪ್ರಕಟಿಸಿದೆ. 2024ರ ಟಿ20 ವಿಶ್ವಕಪ್‌ ಚಾಂಪಿಯನ್‌ ಆಗಿದ್ದ ವೇಳೆ ಅಂದಿನ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ 125 ಕೋಟಿ ರು. ಗಳನ್ನು ನೀಡಲಾಗಿತ್ತು.

ಟಿ20 ವಿಶ್ವಕಪ್‌ ಚಾಂಪಿಯನ್ಸ್‌ ಭಾರತಕ್ಕೆ 131 ಕೋಟಿ ರು ನಗದು ಬಹುಮಾನ!

ಟಿ20 ವಿಶ್ವಕಪ್‌ ಚಾಂಪಿಯನ್‌ ಭಾರತಕ್ಕೆ 131 ಕೋಟಿ ರು ನಗದು ಬಹುಮಾನ. -

Profile
Ramesh Kote Mar 10, 2026 3:53 PM

ನವದೆಹಲಿ: ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯಲ್ಲಿ ಚಾಂಪಿಯನ್‌ ಆದ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡಕ್ಕೆ (India) 131 ಕೋಟಿ ರು. ಗಳ ನಗದು ಬಹುಮಾನವನ್ನು ಬಿಸಿಸಿಐ (BCCI) ಮಾರ್ಚ್‌ 10 ರಂದು ಘೋಷಿಸಿದೆ. ಮಾರ್ಚ್‌ 8 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ 96 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಅಂದ ಹಾಗೆ 2024ರ ಟಿ20 ವಿಶ್ವಕಪ್‌ ಗೆದ್ದಿದ್ದ ರೋಹಿತ್‌ ಶರ್ಮಾ ನಾಯಕತ್ವದ ಟೀಮ್‌ ಇಂಡಿಯಾಗೆ ಬಿಸಿಸಿಐ 125 ಕೋಟಿ ರು ಗಳ ನಗದು ಬಹುಮಾನವನ್ನು ಘೋಷಿಸಿತ್ತು. ಇದೀಗ ಬಿಸಿಸಿಐ 6 ಕೋಟಿ ರು. ಹೆಚ್ಚುವರಿ ಮೊತ್ತವನ್ನು ನೀಡಲಿದೆ.

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತಂಡ, ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿತ್ತು. ಆ ಮೂಲಕ ಭಾರಿ ನಿರಾಶೆ ಅನುಭವಿಸಿತ್ತು. ಇದೀಗ ಅದೇ ಅಂಗಣದಲ್ಲಿ ಟೀಮ್‌ ಇಂಡಿಯಾ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ. ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಪಂದ್ಯ ಏಕಪಕ್ಷೀಯವಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ 255 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ 159 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಸೂರ್ಯಕುಮಾರ್‌ ಔಟ್‌, ಸಂಜು ಸ್ಯಾಮ್ಸನ್‌ ಇನ್‌! ಟಿ20 ವಿಶ್ವಕಪ್‌ ತಂಡವನ್ನು ಪ್ರಕಟಿಸಿದ ಐಸಿಸಿ!

ಸಂಜು ಸ್ಯಾಮ್ಸನ್‌ ಹ್ಯಾಟ್ರಿಕ್‌ ಅರ್ಧಶತಕ

ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್‌ ಅವರು ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ಹ್ಯಾಟ್ರಿಕ್‌ ಅರ್ಧಶತಕವನ್ನು ಬಾರಿಸಿದ್ದರು. ಅವರು 89 ರನ್‌ಗಳನ್ನು ಗಳಿಸಿದ್ದರು. ಇಶಾನ್‌ ಕಿಶನ್‌ ಹಾಗೂ ಅಭಿಷೇಕ್‌ ಶರ್ಮಾ ಅವರೂ ಅರ್ಧಶತಕವನ್ನು ಬಾರಿಸಿದ್ದರು. ಬಳಿಕ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್‌ ಪರ ಟಿಮ್‌ ಸೈಫರ್ಟ್‌ ಅವರು ಸ್ಪೋಟಕ ಅರ್ಧಶತಕವನ್ನು ಸಿಡಿಸಿದ್ದು ಬಿಟ್ಟರೆ, ಇನ್ನುಳಿದವರು ವಿಫಲರಾದರು. ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್‌ ದಾಳಿ ನಡೆಸಿ ನಾಲ್ಕು ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌ ಮೂರು ವಿಕೆಟ್‌ ಕಿತ್ತರು.



6 ಕೋಟಿ ರು ಹೆಚ್ಚಿಸಿದ ಬಿಸಿಸಿಐ

2024ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದಿದ್ದ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರು. ಗಳ ನಗದು ಬಹುಮಾನವನ್ನು ನೀಡಿತ್ತು. ಈ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ, ರವೀಂದ್ರ ಜಡೇಜಾ ಕೂಡ ಆಡಿದ್ದರು. ಈ ಟೂರ್ನಿಯ ಬಳಿಕ ರೋಹಿತ್‌, ಕೊಹ್ಲಿ ಹಾಗೂ ಜಡೇಜಾ ಟಿ20ಐ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು. ಇದೀಗ ಸತತ ಎರಡನೇ ಬಾರಿ ಟಿ20 ವಿಶ್ವಕಪ್‌ ಗೆದ್ದ ಟೀಮ್‌ ಇಂಡಿಯಾ ಬಿಸಿಸಿಐ 131 ಕೋಟಿ ರು.ಗಳನ್ನು ಘೋಷಿಸುವ ಮೂಲಕ ಬಿಸಿಸಿಐ 6 ಕೋಟಿ ರು. ಗಳ ನಗದು ಬಹುಮಾನವನ್ನು ಹೆಚ್ಚಿಸಿದೆ.

IND vs NZ: ಸಂಜು ಸ್ಯಾಮ್ಸನ್‌ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್‌ ಗೆದ್ದ ಭಾರತ!

2026ರ ಟೂರ್ನಿಯಲ್ಲಿ ಭಾರತ ಪ್ರಾಬಲ್ಯ

ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪ್ರಾಬಲ್ಯ ಸಾಧಿಸಿದೆ. ಲೀಗ್‌ ಹಂತದಲ್ಲಿ ಮೂರೂ ಪಂದ್ಯಗಳನ್ನು ಗೆದ್ದಿದ್ದ ಭಾರತ, ಸೂಪರ್‌-8ರ ಹಂತದಲ್ಲಿ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿತ್ತು. ಇದನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ಬೀಗಿತ್ತು. ಅಂದ ಹಾಗೆ ಕಳೆದ ವರ್ಷ ಮಹಿಳಾ ಟಿ20 ವಿಶ್ವಕಪ್‌ ಗೆದ್ದಿದ್ದ ಭಾರತ ಮಹಿಳಾ ತಂಡಕ್ಕೂ ಬಿಸಿಸಿಐ 51 ಕೋಟಿ ರು. ಗಳ ನಗದು ಬಹುಮಾನವನ್ನು ಘೋಷಿಸಿತ್ತು.