BCCI Naman Awards: ʻಪಾಲಿ ಉಮ್ರಿಗರ್ʼ ಪ್ರಶಸ್ತಿಗೆ ಭಾಜನರಾದ ಶುಭಮನ್ ಗಿಲ್, ಸ್ಮೃತಿ ಮಂಧಾನಾ!
ಬಿಸಿಸಿಐನ ಗೌರವಾನ್ವಿತ ನಮನ್ ಪ್ರಶಸ್ತಿಗಳ ಕಾರ್ಯಕ್ರಮದಲ್ಲಿ ದೇಶದ ಅತ್ಯುತ್ತಮ ಕ್ರಿಕೆಟ್ ಆಟಗಾರರನ್ನು ಗೌರವಿಸಲಾಗಿದೆ. ಈ ಪಟ್ಟಿಯಲ್ಲಿ ಶುಭಮನ್ ಗಿಲ್, ರಾಹುಲ್ ದ್ರಾವಿಡ್ ಮತ್ತು ಸ್ಮೃತಿ ಮಂಧಾನ ಅವರಂತಹ ದಿಗ್ಗಜರ ಹೆಸರುಗಳಿವೆ.ಗಿಲ್ ಹಾಗೂ ಮಂಧಾನಾ ಅವರು ಪಾಲಿ ಉಮ್ರಗರ್ ಪ್ರಶಸ್ತಿಗಳಿಗೆ ಭಾಜಜರಾಗಿದ್ದಾರೆ. ಪ್ರಶಸ್ತಿ ಪಡೆದವರ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಬಿಸಿಸಿಐನ ನಮನ್ ಪ್ರಶಸ್ತಿಗಳು. -
ನವದೆಹಲಿ: ಮಾರ್ಚ್ 15 ಭಾರತೀಯ ಕ್ರಿಕೆಟ್‌ಗೆ ನಿಜವಾಗಿಯೂ ವಿಶೇಷ ದಿನವಾಗಿದೆ. ನವದೆಹಲಿಯಲ್ಲಿ ನಡೆದಿದ್ದ 2026 ರ ಬಿಸಿಸಿಐ ನಮನ್ (BCCI Naman Awards) ಪ್ರಶಸ್ತಿಗಳು, ಭಾರತೀಯ ಕ್ರಿಕೆಟ್ ದಂತಕಥೆಗಳು ಮತ್ತು ಉದಯೋನ್ಮುಖ ತಾರೆಯರ ಅದ್ಧೂರಿ ಸಭೆಗೆ ಸಾಕ್ಷಿಯಾದವು. ಸಮಾರಂಭದಲ್ಲಿ, ಅಂತಾರಾಷ್ಟ್ರೀಯ, ದೇಶಿ ಮತ್ತು ಜೂನಿಯರ್ ಹಂತಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಆಟಗಾರರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಪ್ರಮುಖ ಅಂಶವೆಂದರೆ 'ಕರ್ನಲ್ ಸಿ.ಕೆ. ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ', ಇದನ್ನು ಮಾಜಿ ದಿಗ್ಗಜರಾದ ರೋಜರ್ ಬಿನ್ನಿ, ರಾಹುಲ್ ದ್ರಾವಿಡ್ (Rahul Dravid) ಮತ್ತು ಮಿಥಾಲಿ ರಾಜ್ (Mitahli Raj) ಅವರ ಅಮೂಲ್ಯ ಕೊಡುಗೆಗಳನ್ನು ಗುರುತಿಸಿ ನೀಡಲಾಯಿತು.
ಪ್ರಸ್ತುತ ತಲೆಮಾರಿನ ಟೀಮ್ ಇಂಡಿಯಾದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್ ಅವರನ್ನು 2024-25 ಸಾಲಿನ 'ಅತ್ಯುತ್ತಮ ಅಂತಾರಾಷ್ಟ್ರೀಯ ಪುರುಷ ಕ್ರಿಕೆಟಿಗ' (ಪಾಲಿ ಉಮ್ರಿಗರ್ ಪ್ರಶಸ್ತಿ) ಎಂದು ಹೆಸರಿಸಲಾಯಿತು. ಇದರ ನಡುವೆ, ಮಹಿಳಾ ಕ್ರಿಕೆಟ್‌ನಲ್ಲಿ, ಸ್ಮೃತಿ ಮಂಧಾನ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು, ಐದನೇ ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಮಂಧಾನಾ ಈ ಋತುವನ್ನು ಮಹಿಲಾ ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿ ಮುಗಿಸಿದರೆ, ದೀಪ್ತಿ ಶರ್ಮಾ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ʻಶ್ರೇಯಸ್ ಅಯ್ಯರ್‌ರನ್ನು ರಿಲೀಸ್ ಮಾಡಬಾರದಿತ್ತುʼ-ಕೋಲ್ಕತಾ ಫ್ರಾಂಚೈಸಿಯನ್ನು ಟೀಕಿಸಿದ ಅನಿಲ್ ಕುಂಬ್ಳೆ!
ಹರ್ಷಿತ್ ರಾಣಾಗೂ ಸನ್ಮಾನ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಆರಂಭಕ್ಕಾಗಿ ವೇಗದ ಬೌಲರ್ ಹರ್ಷಿತ್ ರಾಣಾ ಪುರುಷರ ವಿಭಾಗದಲ್ಲಿ ಬೆಸ್ಟ್ ಡೆಬ್ಯೂ ಪ್ರಶಸ್ತಿಗೆ ಭಾಜರಾಗಿದ್ದಾರೆ.ಇತ್ತೀಚಿನ ಮುಗಿದಿದ್ದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅವರು ಆಡಬೇಕಾಗಿತ್ತು. ಆದರೆ, ಗಾಯದ ಕಾರಣ ಅವರು ತಪ್ಪಿಸಿಕೊಂಡಿದ್ದರು. ಮಹಿಳಾ ವಿಭಾಗದಲ್ಲಿ ಶ್ರೀ ಚರಣಿ ಬೆಸ್ಟ್ ಡೆಬ್ಯೂ ಪ್ರಶಸ್ತಿಯನ್ನು ಸ್ವೀಕರಿಸಿದರು. ದೇಶಿ ಕ್ರಿಕೆಟ್‌ನಲ್ಲಿ ಮುಂಬೈನ ಆಯುಷ್ ಮ್ಹಾತ್ರೆ ಮತ್ತು ವಿದರ್ಭದ ಹರ್ಷ್ ದುಬೆ ಅವರು ತಮ್ಮ ಸರ್ವತೋಮುಖ ಪ್ರದರ್ಶನದಿಂದ ಎಲ್ಲರನ್ನೂ ಮೆಚ್ಚಿಸುವ ಮೂಲಕ ಆಟದಲ್ಲಿ ಪ್ರಾಬಲ್ಯ ಸಾಧಿಸಿದರು.
🚨 𝗣𝗼𝗹𝗹𝘆 𝗨𝗺𝗿𝗶𝗴𝗮𝗿 𝗔𝘄𝗮𝗿𝗱 🚨
— BCCI (@BCCI) March 15, 2026
Dominating attacks and delivering big runs when it mattered most 🫡
Congratulations to #TeamIndia captain Shubman Gill on being named 𝐁𝐞𝐬𝐭 𝐈𝐧𝐭𝐞𝐫𝐧𝐚𝐭𝐢𝐨𝐧𝐚𝐥 𝐂𝐫𝐢𝐜𝐤𝐞𝐭𝐞𝐫 – 𝐌𝐞𝐧 🏆👏#NamanAwards | @ShubmanGill pic.twitter.com/IozcgwWyOD
ಯುವ ಆಟಗಾರರಿಗೂ ಮನ್ನಣೆ
ಕ್ರಿಕೆಟ್ ಅನ್ನು ಉತ್ತೇಜಿಸುವ ಉದ್ದೇಶದಿಂದ ಬಿಸಿಸಿಐ ಹಿರಿಯ ಆಟಗಾರರನ್ನು ಮಾತ್ರವಲ್ಲದೆ ಅಂಡರ್-16, ಅಂಡರ್-19 ಮತ್ತು ಅಂಡರ್-23 ಹಂತಗಳಲ್ಲಿರುವ ಆಟಗಾರರನ್ನು ಸಹ ಗೌರವಿಸಿತು. 'ಅತ್ಯುತ್ತಮ ಅಂಪೈರ್' ಪ್ರಶಸ್ತಿಯನ್ನು ಉಲ್ಹಾಸ್ ಗಂಧೆ ಪಡೆದರು, ಆದರೆ ದೇಶಿ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) 'ಅತ್ಯುತ್ತಮ ರಾಜ್ಯ ಸಂಘ' ಪ್ರಶಸ್ತಿಯನ್ನು ಪಡೆದುಕೊಂಡಿತು.
1⃣8⃣0⃣0⃣ runs
— BCCI (@BCCI) March 15, 2026
3⃣6⃣ matches
7⃣ centuries
Elegance, consistency and a year to remember ✨#TeamIndia vice-captain Smriti Mandhana bags the 𝐁𝐞𝐬𝐭 𝐈𝐧𝐭𝐞𝐫𝐧𝐚𝐭𝐢𝐨𝐧𝐚𝐥 𝐂𝐫𝐢𝐜𝐤𝐞𝐭𝐞𝐫 – 𝐖𝐨𝐦𝐞𝐧 award for the 5⃣th time 🏆👏#NamanAwards | @mandhana_smriti pic.twitter.com/u9KlB1CTON
ಅಂತಾರಾಷ್ಟ್ರೀಯ ಕ್ರಿಕೆಟ್ ಸಾಧಕರಿಗೆ ಪ್ರಶಸ್ತಿಗಳು
ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿ: ರೋಜರ್ ಬಿನ್ನಿ, ರಾಹುಲ್ ದ್ರಾವಿಡ್, ಮಿಥಾಲಿ ರಾಜ್
ಶ್ರೇಷ್ಠ ಅಂತಾರಾಷ್ಟ್ರೀಯ ಪುರುಷ ಕ್ರಿಕೆಟಿಗ (2024-25): ಶುಭಮನ್ ಗಿಲ್
ಶ್ರೇಷ್ಠ ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿ (2024-25): ಸ್ಮೃತಿ ಮಂಧಾನಾ
ಶ್ರೇಷ್ಠ ಅಂತಾರಾಷ್ಟ್ರೀಯ ಬೆಸ್ಟ್ ಡೆಬ್ಯೂ (ಪುರುಷರು): ಹರ್ಷಿತ್ ರಾಣಾ
ಶ್ರೇಷ್ಠ ಅಂತಾರಾಷ್ಟ್ರೀಯ ಬೆಸ್ಟ್ ಡೆಬ್ಯೂ (ಮಹಿಳೆಯರು) ಎನ್. ಶ್ರೀ ಚರಣಿ
ಒಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳು (ಮಹಿಳೆಯರು): ಸ್ಮೃತಿ ಮಂಧಾನಾ
ಒಡಿಐ ಕ್ರಿಕೆಟ್‌ಲ್ಲಿ ಅತಿ ಹೆಚ್ಚು ವಿಕೆಟ್‌ಗಳು (ಮಹಿಳೆಯರು): ದೀಪ್ತಿ ಶರ್ಮಾ
The Wall 👌
— BCCI (@BCCI) March 15, 2026
A mentor 🙌
An enduring pillar of Indian cricket 🇮🇳
From standing tall in the toughest battles to guiding the next generation of stars, his contribution to the game is immeasurable 🫡🫡
The legendary Rahul Dravid is honoured with the 𝐂𝐨𝐥. 𝐂.𝐊. 𝐍𝐚𝐲𝐮𝐝𝐮… pic.twitter.com/ZEw7NoCVAt
ದೇಶಿ ಪ್ರಶಸ್ತಿಗಳು
ಲಾಲಾ ಅಮರನಾಥ್ ಪ್ರಶಸ್ತಿ (ಶ್ರೇಷ್ಠ ಆಲ್‌ರೌಂಡರ್): ಆಯುಷ್ ಮ್ಹಾತ್ರೆ (ದೇಶಿ ಸೀಮಿತ ಓವರ್‌ಗಳು)
ಲಾಲಾ ಅಮರನಾಥ್ ಪ್ರಶಸ್ತಿ (ರಣಜಿ ಟ್ರೋಫಿ ಆಲ್‌ರೌಂಡರ್) ಹರ್ಷ್ ದುಬೆ (ವಿದರ್ಭ)
ಮಾಧವರಾವ್ ಸಿಂಧಿಯಾ ಪ್ರಶಸ್ತಿ (ಅತ್ಯುತ್ತಮ ರನ್‌ಗಳು - ರಣಜಿ) ವೈ ವಿ ರಾಥೋಡ್ (ಎಲೈಟ್) / ಸ್ನೇಹಲ್ ಕೌಥಂಕರ್ (ಪ್ಲೇಟ್) ವಿದರ್ಭ / ಗೋವಾ
ಮಾಧವರಾವ್ ಸಿಂಧಿಯಾ ಪ್ರಶಸ್ತಿ: (ಹೆಚ್ಚು ವಿಕೆಟ್ - ರಣಜಿ) ಹರ್ಷ ದುಬೆ (ಎಲೈಟ್) / ಸುಚಿತ್ ಜೆ (ಪ್ಲೇಟ್) ವಿದರ್ಭ / ನಾಗಾಲ್ಯಾಂಡ್
ಜಗಮೋಹನ್ ದಾಲ್ಮಿಯಾ ಟ್ರೋಫಿ (ಅತ್ಯುತ್ತಮ ಮಹಿಳಾ ಜೂನಿಯರ್): ಇರಾ ಜಾಧವ್ ಮುಂಬೈ
ಜಗಮೋಹನ್ ದಾಲ್ಮಿಯಾ ಟ್ರೋಫಿ (ಅತ್ಯುತ್ತಮ ಮಹಿಳಾ ಹಿರಿಯ): ಶಫಾಲಿ ವರ್ಮಾ ಹರಿಯಾಣ
ಎಂಎ ಚಿದಂಬರಂ ಟ್ರೋಫಿ (U23 ಕರ್ನಲ್, ಸಿಕೆ ನಾಯುಡು ಟ್ರೋಫಿ): ಮ್ಯಾಕ್ನೀಲ್ ಎಚ್‌ಎನ್ (ರನ್ಸ್) / ವಿಕ್ಕಿ ಓಸ್ತ್ವಾಲ್ (ವಿಕೆಟ್ಸ್) ಕರ್ನಾಟಕ / ಮಹಾರಾಷ್ಟ್ರ
ಎಂ.ಎ. ಚಿದಂಬರಂ ಟ್ರೋಫಿ (U19 ಕೂಚ್ ಬೆಹಾರ್ ಟ್ರೋಫಿ): ನಿತ್ಯ ಜೆ. ಪಾಂಡ್ಯ (ರನ್ಸ್) / ಹೇಮಚುದೇಶನ್ ಜೆ. (ವಿಕೆಟ್ಸ್) ಬರೋಡಾ / ತಮಿಳುನಾಡು
ಜಗಮೋಹನ್ ದಾಲ್ಮಿಯಾ ಟ್ರೋಫಿ (U16 ವಿಜಯ್ ಮರ್ಚೆಂಟ್ ಟ್ರೋಫಿ): ಶಂತನು ಸಿಂಗ್ (ರನ್) / ಯಶವರ್ಧನ್ ಸಿಂಗ್ ಚೌಹಾಣ್ (ವಿಕೆಟ್) ಉತ್ತರ ಪ್ರದೇಶ / ಮಧ್ಯ ಪ್ರದೇಶ
ಅತ್ಯುತ್ತಮ ದೇಶೀಯ ಅಂಪೈರ್: ಉಲ್ಹಾಸ್ ಗಂಧೆ ವಿದರ್ಭ
ದೇಶಿ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ: ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ರಾಜ್ಯ ಅಸೋಸಿಯೇಷನ್