Nightclub Controversy: ಎರಡನೇ ಟೆಸ್ಟ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಕಳೆದುಕೊಂಡ ಬೆನ್ ಸ್ಟೋಕ್ಸ್, ಗಸ್ ಅಟ್ಕಿನ್ಸನ್!
ಲಂಡನ್ ನೈಟ್ ಕ್ಲಬ್ ವಿವಾದದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಇಂಗ್ಲೆಂಡ್ ತಂಡದಲ್ಲಿ ನಾಯಕ ಬೆನ್ ಸ್ಟೋಕ್ಸ್ ಹಾಗೂ ಗಸ್ ಅಟ್ಕಿನ್ಸನ್ ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಎರಡನೇ ಟೆಸಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಜೋ ರೂಟ್ ಮುನ್ನಡೆಸಲಿದ್ದಾರೆಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.
ಎರಡನೇ ಟೆಸ್ಟ್ ಪಂದ್ಯದಿಂದ ಬೆನ್ ಸ್ಟೋಕ್ಸ್, ಗಸ್ ಅಟ್ಕಿನ್ಸನ್ ಔಟ್. -
ನವದೆಹಲಿ: ಲಂಡನ್ ನೈಟ್ ಕ್ಲಬ್ ವಿವಾದಕ್ಕೆ ಸಂಬಂಧ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಹಾಗೂ ಅವರ ಸಹ ಆಟಗಾರ ಗಸ್ ಅಟ್ಕಿನ್ಸನ್ (Gus Atkinson) ಅವರಿಗೆ ಭಾರಿ ಹಿನ್ನಡೆಯಾಗಿದೆ. ನ್ಯೂಜಿಲೆಂಡ್ ಎದುರು ಎರಡನೇ ಟೆಸ್ಟ್ ಪಂದ್ಯದ (ENG vs NZ) ಇಂಗ್ಲೆಂಡ್ ತಂಡದಿಂದ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರನ್ನು ಕೈ ಬಿಡಲಾಗಿದೆ. ಮಿಡ್‌ನೈಟ್ ಕರ್ಪ್ಯೂ ಉಲ್ಲಂಘಿಸಿದ ಪರಿಣಾಮ ಇನ್ನೂ ಈ ಪ್ರಕರಣ ತನಿಖೆ ನಡೆಯುತ್ತಿದ್ದು, ಬೆನ್ ಸ್ಟೋಕ್ಸ್ ಅವರ ನಾಯಕತ್ವಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಹಾಗೂ ಆಲ್‌ರೌಂಡರ್ ಗಸ್ ಅಟ್ಕಿನ್ಸನ್ ಅವರು ಜೂನ್ 17ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಬುಧವಾರ ದೃಢಪಡಿಸಿದೆ.
ತಂಡದ ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಈ ಇಬ್ಬರು ಆಟಗಾರರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಮಂಡಳಿ ತಿಳಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಿದ ಬಳಿಕ, ಲಂಡನ್‌ನ ನೈಟ್‌ಕ್ಲಬ್ ಒಂದರಲ್ಲಿ ನಡೆದ ಗಲಾಟೆಯಲ್ಲಿ ಅವರು ಭಾಗಿಯಾಗಿದ್ದರೆಂಬ ಆರೋಪವೂ ಕೇಳಿಬಂದಿದೆ.
Night club Controversy: ಮೊದಲನೇ ಟೆಸ್ಟ್ ಗೆದ್ದ ಬೆನ್ನಲ್ಲೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದ ಬೆನ್ ಸ್ಟೋಕ್ಸ್!
ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳ್ಳುವವರೆಗೆ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆ ಇಂಗ್ಲೆಂಡ್ ತಂಡಕ್ಕೆ ಮಹತ್ವದ ಹಿನ್ನಡೆಯಾಗಿ ಪರಿಣಮಿಸಿದ್ದು, ಸರಣಿಯ ಮುಂದಿನ ಹಂತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಎರಡನೇ ಟೆಸ್ಟ್‌ನಲ್ಲಿ ಜೋ ರೂಟ್ ನಾಯಕ
ಜೋ ರೂಟ್ ಅವರು ಬೆನ್ ಸ್ಟೋಕ್ಸ್ ಅವರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ, ‘ಬ್ಯಾಝ್ ಬಾಲ್’ ಯುಗದಲ್ಲಿ ಇಂಗ್ಲೆಂಡ್‌ನ ಪರ ಅತಿ ಹೆಚ್ಚು ರನ್ ಗಳಿಸಿರುವ ರೂಟ್ ಮೊದಲ ಬಾರಿ ನಾಯಕತ್ವ ವಹಿಸಲಿದ್ದಾರೆ. ಅಲ್ಲದೆ, 2022ರ ಮಾರ್ಚ್ ಬಳಿಕ ಅವರು ಮೊದಲ ಬಾರಿ ಟೆಸ್ಟ್ ತಂಡದ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ.
Joe Root will lead the team as Interim Captain at the Kia Oval.
— England Cricket (@englandcricket) June 10, 2026
Click below for our 15-player squad for the 2nd Test 📝
“ಪ್ರಸ್ತುತ ನಡೆಯುತ್ತಿರುವ ತನಿಖೆಯ ಹಿನ್ನೆಲೆಯಲ್ಲಿ ಬೆನ್ ಸ್ಟೋಕ್ಸ್ ಮತ್ತು ಗಸ್ ಅಟ್ಕಿನ್ಸನ್ ಅವರನ್ನು ಜೂನ್ 17ರಂದು ಕಿಯಾ ಓವಲ್ ಮೈದಾನದಲ್ಲಿ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಗೆ ಪರಿಗಣಿಸಲಾಗಿಲ್ಲ” ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ವಿರುದ್ಧದ ತನಿಖೆ ಮುಂದುವರಿದಿರುವ ಕಾರಣ, ಇಂಗ್ಲೆಂಡ್ ತಂಡವು ಎರಡನೇ ಟೆಸ್ಟ್ ಪಂದ್ಯದಲ್ಲಿ ಹೊಸ ನಾಯಕತ್ವದೊಂದಿಗೆ ಕಣಕ್ಕಿಳಿಯಲಿದೆ. ಈ ಬೆಳವಣಿಗೆಯಿಂದ ಜೋ ರೂಟ್ ಮತ್ತೊಮ್ಮೆ ನಾಯಕತ್ವದ ಜವಾಬ್ದಾರಿ ಹೊತ್ತು ತಂಡವನ್ನು ಮುನ್ನಡೆಸುವ ಅವಕಾಶ ಪಡೆದಿದ್ದಾರೆ.
ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸನ್ನಿ ಬಾಕರ್, ಶೋಯೆಬ್ ಬಶೀರ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಜೋರ್ಡನ್ ಕಾಕ್ಸ್, ಬೆನ್ ಡಕೆಟ್, ಮ್ಯಾಥ್ಯೂ ಫಿಷರ್, ಎಮಿಲಿಯೊ ಗೇ, ಜೇಮ್ಸ್ ರಿವ್, ಒಲ್ಲಿ ರಾಬಿನ್ಸನ್, ಜೇಮಿ ಸ್ಮಿತ್, ಜಾಶ್ ಟಾಂಗ್