IND vs IRE: ಭಾರತ ತಂಡದಲ್ಲಿ ಭುವನೇಶ್ವರ್ ಕುಮಾರ್‌ಗೆ ಚಾನ್ಸ್ ನೀಡಬೇಕಿತ್ತೆಂದ ಕೆ ಶ್ರೀಕಾಂತ್!
IND vs IRE: ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20ಐ ಸರಣಿಯ ಭಾರತ ತಂಡದಲ್ಲಿ ಹಿರಿಯ ವೇಗಿ ಭುವನೇಶ್ವರ್ ಕುಮಾರ್‌ಗೆ ಅವಕಾಶ ನೀಡಬೇಕಿತ್ತೆಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲನೇ ಟಿ20ಐ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಅವರು ಈ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.
ಭಾರತ ಟಿ20 ತಂಡದಲ್ಲಿ ಭುವನೇಶ್ವರ್ ಕುಮಾರ್‌ಗೆ ಸ್ಥಾನ ನೀಡಬೇಕಿತ್ತೆಂದ ಕೆ ಶ್ರೀಕಾಂತ್. -
ನವದೆಹಲಿ: ಐರ್ಲೆಂಡ್ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ (IND vs IRE) 34 ರನ್‌ಗಳಿಂದ ಭಾರತ ತಂಡ ಸೋಲು ಅನುಭವಿಸಿದ ಬಳಿಕ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth) ಅವರು ಬೌಲಿಂಗ್ ವಿಭಾಗವನ್ನು ಟೀಕಿಸಿದ್ದಾರೆ. ಅಲ್ಲದೆ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ್ದ ಆರ್‌ಸಿಬಿ ವೇಗಿ ಭುವನೇಶ್ವರ್ ಕುಮಾರ್‌ಗೆ (Bhuvneshwar kumar) ಭಾರತ ಟಿ20ಐ ತಂಡದಲ್ಲಿ ನೇರವಾಗಿ ಸ್ಥಾನವನ್ನು ನೀಡಬೇಕಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಲ್‌ಫಾಸ್ಟ್‌ನಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಐರ್ಲೆಂಡ್ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 182 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, 148 ರನ್‌ಗಳಿಗೆ ಆಲ್‌ಔಟ್ ಆಗಿತ್ತು. ಈ ಪಂದ್ಯದಲ್ಲಿ ಪ್ರಸಿಧ್ ಕೃಷ್ಣ ತನ್ನ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ 57 ರನ್‌ಗಳನ್ನು ನೀಡಿದ್ದರು. ಈ ಬಲಗೈ ವೇಗಿ ಸಾಕಷ್ಟು ಎಸೆತಗಳನ್ನು ಸ್ಲಾಟ್‌ನಲ್ಲಿ ಹಾಕಿದ್ದರು ಎಂದು ಹೇಳಿದ್ದಾರೆ. ಈ ಕಾರಣದಿಂದ ಎದುರಾಳಿ ಬ್ಯಾಟರ್‌ಗಳು ಬೌಂಡರಿ-ಸಿಕ್ಸರ್‌ಗಳನ್ನು ಸಿಡಿಸಿದ್ದರು.
2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಲ್ಲ ಎಂದ ಸಂಜಯ್ ಮಾಂಜ್ರೇಕರ್!
"ಪ್ರಸಿಧ್ ಕೃಷ್ಣ ಒಳ್ಳೆಯ ಲೆನ್ತ್ ಬೌಲ್ ಮಾಡುತ್ತಿದ್ದರು. ಅವರು ಸ್ಕಾಟ್‌ನಲ್ಲಿ ಚೆಂಡನ್ನು ಪರಿಪೂರ್ಣವಾಗಿ ಹಾಕುತ್ತಿದ್ದರು. ಪ್ರಸಿಧ್ ಕೃಷ್ಣ ಹಾಗೂ ವಾಷಿಂಗ್ಟನ್ ಸುಂದರ್ ಅವರ ನಡುವಣ ಐದು ಓವರ್‌ಗಳು ಭಾರತ ತಂಡಕ್ಕೆ ಹಿನ್ನಡೆಯನ್ನು ತಂದುಕೊಟ್ಟವು. ಅಂದ ಹಾಗೆ ಭುವನೇಶ್ವರ್ ಕುಮಾರ್ ಅವರು ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ಸ್ವಯಂಚಾಲಿತ ಆಯ್ಕೆಯಾಗಿದ್ದಾರೆ. ಬ್ಯಾಟ್ಸ್‌ಮನ್‌ಗಳು ಚೆಂಡನ್ನು ಹೊಡೆಯಲು ಸೂಕ್ತವಾದ ರೀತಿ ವೇಗ ಹಾಗೂ ಲೆನ್ತ್ ಅನ್ನು ಪ್ರಸಿಧ್ ಕೃಷ್ಣ ಹಾಕುತ್ತಿದ್ದರು. ಇವರು ಐಪಿಎಲ್ ಟೂರ್ನಿಯಲ್ಲಿ ಉತ್ತಮವಾಗಿ ಬೌಲ್ ಮಾಡಿರಲಿಲ್ಲ," ಎಂದು ಕೆ ಶ್ರೀಕಾಂತ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
2026ರ ಐಪಿಎಲ್ ಟೂರ್ನಿಯಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದ್ದರು. ಆರ್‌ಸಿಬಿ ವೇಗಿ ಆಡಿದ 16 ಪಂದ್ಯಗಳಲ್ಲಿ 28 ವಿಕೆಟ್ ಕಬಳಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಕೇವಲ 7.95ರ ಎಕಾನಮಿ ದರದೊಂದಿಗೆ ಟೂರ್ನಿಯ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಕೇವಲ ಒಂದು ವಿಕೆಟ್ ಅಂತರದಲ್ಲಿ ಅವರು ಪರ್ಪಲ್ ಕ್ಯಾಪ್ ವಂಚಿತರಾಗಿದ್ದರು.
IND vs IRE: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆ ಸಾಧ್ಯತೆ!
ಭಾರತದ ಬೌಲಿಂಗ್ ಅನ್ನು ಟೀಕಿಸಿದ ಕೆ ಶ್ರೀಕಾಂತ್
ಇದರ ನಡುವೆಯೇ ಐರ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಬೌಲಿಂಗ್ ಪ್ರದರ್ಶನವನ್ನು ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ತೀವ್ರವಾಗಿ ಟೀಕಿಸಿದರು. "ಪ್ರಸಿಧ್ ಕೃಷ್ಣ ಮತ್ತು ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ ಅತ್ಯಂತ ಕಳಪೆಯಾಗಿತ್ತು," ಎಂದು ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದರು.
ಐಪಿಎಲ್‌ನಲ್ಲಿ ಅತ್ಯುತ್ತಮ ಲಯದಲ್ಲಿದ್ದ ಭುವನೇಶ್ವರ್ ಕುಮಾರ್‌ರಂತಹ ಅನುಭವಿ ಬೌಲರ್‌ಗೆ ಅವಕಾಶ ನೀಡದೆ, ಪರಿಣಾಮಕಾರಿಯಾಗಿ ಬೌಲಿಂಗ್ ಮಾಡದ ಆಟಗಾರರನ್ನು ಕಣಕ್ಕಿಳಿಸಿರುವುದು ಸರಿಯಾದ ನಿರ್ಧಾರವಲ್ಲ ಎಂಬ ಅಭಿಪ್ರಾಯವೂ ಕ್ರಿಕೆಟ್ ವಲಯದಲ್ಲಿ ಕೇಳಿಬರುತ್ತಿದೆ.
"ಭಾರತ ತಂಡದ ಒಟ್ಟಾರೆ ಬೌಲಿಂಗ್ ಸಾಮಾನ್ಯವಾಗಿತ್ತು. ಪ್ರತಿಯೊಬ್ಬರೂ ಉತ್ತಮವಾಗಿ ಬೌಲ್ ಮಾಡಿದ್ದರು, ಆದರೆ ಪ್ರಸಿಧ್ ಕೃಷ್ಣ ಮತ್ತು ವಾಷಿಂಗ್ಟನ್ ಸುಂದರ್ ಅವರು ಮಾತ್ರ ಭಯಾಕನವಾಗಿ ಬೌಲ್ ಮಾಡಿದ್ದರು. ಸುಂದರ್ ಐಪಿಎಲ್ ಟೂರ್ನಿಯಲ್ಲಿ ಉತ್ತಮವಾಗಿ ಬೌಲ್ ಮಾಡಿರಲಿಲ್ಲ. ಶಿವಂ ದುಬೆ ಆಶ್ಚರ್ಯಕರವಾಗಿ ಬೌಲರ್ ಆಗಿ ಮಾರಕವಾಗಿ ಕಾಣಿಸಿಕೊಂಡರು. ಅವರು ಐಪಿಎಲ್‌ಗಿಂತ ಹೆಚ್ಚು ಆತ್ಮವಿಶ್ವಾಸದ ಅಂತಾರಾಷ್ಟ್ರೀಯ ಆಟಗಾರನಾಗಿ ಕಾಣುತ್ತಾರೆ," ಎಂದು ಶ್ರೀಕಾಂತ್ ಶ್ಲಾಘಿಸಿದ್ದಾರೆ.