ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ತಮ್ಮ ವೇಗದ ಎಸೆತದ ಮೂಲಕ ಯಶಸ್ವಿ ಜೈಸ್ವಾಲ್‌ ಬ್ಯಾಟ್‌ ಮುರಿದ ಕ್ರಿಸ್‌ ವೋಕ್ಸ್‌!

ಇಂಗ್ಲೆಂಡ್ ತಂಡದ ವೇಗಿ ಕ್ರಿಸ್ ವೋಕ್ಸ್ ಅವರ ಮಾರಕ ಎಸೆತ ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್‌ಗೆ ತಗುಲಿತು. ಆ ಹೊಡೆತ ರಕ್ಷಣಾತ್ಮಕವಾಗಿತ್ತು, ಆದರೆ ಇದರ ಹೊರತಾಗಿಯೂ ಚೆಂಡು ಬಡಿದ ಅವರ ಬ್ಯಾಟ್ ಮುರಿಯಿತು. ಇದರ ನಂತರ ಯಶಸ್ವಿ ಜೈಸ್ವಾಲ್ ಆಶ್ಚರ್ಯಚಕಿತರಾದರು. ನಂತಗರ ಬೇರೆ ಬ್ಯಾಟ್‌ ಪಡೆದ ಆಟವನ್ನು ಮುಂದುವರಿಸಿದರು.

IND vs ENG: ಯಶಸ್ವಿ ಜೈಸ್ವಾಲ್‌ ಬ್ಯಾಟ್‌ ಮುರಿದ ಕ್ರಿಸ್‌ ವೋಕ್ಸ್‌!

ಯಶಸ್ವಿ ಜೈಸ್ವಾಲ್‌ ಬ್ಯಾಟ್‌ ಮುರಿದ ಕ್ರಿಸ್‌ ವೋಕ್ಸ್‌.

Profile Ramesh Kote Jul 23, 2025 6:17 PM

ಮ್ಯಾಂಚೆಸ್ಟರ್: ಕ್ರಿಸ್ ವೋಕ್ಸ್ (Chris Woaks) ಅವರ ಬಿರುಗಾಳಿಯ ಚೆಂಡು ಬ್ಯಾಟ್‌ ಮಾಡುತ್ತಿದ್ದ ಯಶಸ್ವಿ ಜೈಸ್ವಾಲ್‌(Yashasvi Jaiswal) ಅವರ ಬ್ಯಾಟ್ ಅನ್ನು ಮುರಿಯಿತು. ಇದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ತಂಡದ ಸ್ಟಾರ್ ಓಪನರ್ ಯಶಸ್ವಿ ಜೈಸ್ವಾಲ್ ಆಘಾತಕ್ಕೊಳಗಾದರು. ಚೆಂಡು ಬ್ಯಾಟ್‌ನ ಹ್ಯಾಂಡಲ್‌ಗೆ ಬಡಿದು ಅಲ್ಲಿಂದ ಮುರಿದುಹೋಯಿತು. ಇದಾದ ನಂತರ, ಯಶಸ್ವಿ ಜೈಸ್ವಾಲ್ ಆಶ್ಚರ್ಯದಿಂದ ಬ್ಯಾಟ್ ಅನ್ನು ಪರಿಶೀಲಿಸುತ್ತಲೇ ಇದ್ದರು ಮತ್ತು ಸ್ವಲ್ಪ ಸಮಯದ ನಂತರ ಅವರು ಡ್ರೆಸ್ಸಿಂಗ್ ರೂಮ್ ಕಡೆಗೆ ಬೆರಳು ತೋರಿಸಿದರು. ಇದರೊಂದಿಗೆ, ಕರುಣ್ ನಾಯರ್ 3-4 ಬ್ಯಾಟ್‌ಗಳೊಂದಿಗೆ ಮೈದಾನಕ್ಕೆ ಓಡಿ ಬಂದರು. ಇದಾದ ನಂತರ ಯಶಸ್ವಿ ಜೈಸ್ವಾಲ್ ಬ್ಯಾಟ್ ಬದಲಾಯಿಸಿದರು. ನಾಲ್ಕನೇ ಟೆಸ್ಟ್‌ ಪಂದ್ಯದ (IND vs ENG) ಮೊದಲನೇ ದಿನ ಪ್ರಥಮ ಇನಿಂಗ್ಸ್‌ನ 9ನೇ ಓವರ್‌ನ 5ನೇ ಎಸೆತದಲ್ಲಿ ಈ ಘಟನೆ ನಡೆಯಿತು.

ಪಂದ್ಯ ಪ್ರಾರಂಭವಾಗುವ ಮುನ್ನ ಮ್ಯಾಂಚೆಸ್ಟರ್‌ನಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಆದ್ದರಿಂದ ಪಿಚ್‌ ಬೌಲರ್‌ಗಳಿಗೆ ನೆರವು ನೀಡುವ ರೀತಿ ಕಾಣುತ್ತಿತ್ತು. ಈ ಕಾರಣದಿಂದಲೇ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಕಂಡೀಷನ್ಸ್‌ ಅನ್ನು ಚೆನ್ನಾಗಿ ಬಳಿಸಿಕೊಂಡ ಇಂಗ್ಲಿಷ್ ವೇಗಿ ಕ್ರಿಸ್‌ ವೋಕ್ಸ್‌ ಹೊಸ ಚೆಂಡಿನಲ್ಲಿ ಮಾರಕ ದಾಳಿಯನ್ನು ನಡೆಸಿದರು. ಕ್ರಿಸ್‌ ವೋಕ್ಸ್ ಮತ್ತು ಜೋಫ್ರಾ ಆರ್ಚರ್ ಮೊದಲನೇ ಸ್ಪೆಲ್‌ನಲ್ಲಿ ವಿಕೆಟ್‌ ಪಡೆಯದಿದ್ದರೂ ಮಾರಕ ದಾಳಿ ನಡೆಸಿದ್ದರು. ಇದರ ನಡುವೆ ಯಶಸ್ವಿ ಜೈಸ್ವಾಲ್ ಅವರ ಬ್ಯಾಟ್ ಮುರಿಯಿತು.

IND vs ENG: ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅನ್ಶುಲ್‌ ಕಾಂಬೋಜ್‌ ಯಾರು?

ಕ್ರಿಸ್ ವೋಕ್ಸ್ ಉತ್ತಮ ಲೆನ್ತ್‌ ಎಸೆದಿದ್ದರು. ಚೆಂಡು ಪುಟಿದ ನಂತರ ಯಶಸ್ವಿ ಜೈಸ್ವಾಲ್‌ ರಕ್ಷಣಾತ್ಮಕ ಹೊಡೆತವನ್ನು ಆಡಲು ಪ್ರಯತ್ನಿಸಿದರು ಮತ್ತು ಅವರ ಬ್ಯಾಟ್ ಮುರಿದುಹೋಯಿತು. ಪಂದ್ಯವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಬೇಕಾಯಿತು. ಕರುಣ್ ನಾಯರ್ ಬ್ಯಾಟ್ ಹಿಡಿದು ಮೈದಾನಕ್ಕೆ ತಲುಪಿದ ನಂತರವೇ ಪಂದ್ಯವನ್ನು ಪುನರಾರಂಭಿಸಲು ಸಾಧ್ಯವಾಯಿತು.



ಇದಕ್ಕೂ ಮುನ್ನ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತ ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದ್ದು, ಕರುಣ್ ನಾಯರ್, ನಿತೀಶ್ ರೆಡ್ಡಿ ಮತ್ತು ಆಕಾಶ್‌ ದೀಪ್ ಬದಲಿಗೆ ಸಾಯಿ ಸುದರ್ಶನ್, ಶಾರ್ದುಲ್ ಠಾಕೂರ್ ಮತ್ತು ಡೆಬ್ಯೂಟಂಟ್‌ ಅನ್ಶುಲ್ ಕಾಂಬೋಜ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇಂಗ್ಲೆಂಡ್ ಕೂಡ ಒಂದು ಬದಲಾವಣೆಯನ್ನು ಮಾಡಿದ್ದು, ಲಾರ್ಡ್ಸ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಶೋಯೆಬ್ ಬಶೀರ್ ಬದಲಿಗೆ ಸ್ಪಿನ್ನರ್ ಲಿಯಾಮ್ ಡಾಸನ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಮುನ್ನಡೆಯಲ್ಲಿದೆ.