ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಭಾರತದ ವಿರುದ್ಧ ಭರ್ಜರಿ ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ಡ್ಯಾರಿಲ್ ಮಿಚೆಲ್!

ಭಾರತ ವಿರುದ್ದದ ಮೂರನೇ ಏಕದಿನ ಪಂದ್ಯದಲ್ಲಿಯೂ ನ್ಯೂಜಿಲೆಂಡ್‌ ತಂಡದ ಹಿರಿಯ ಬ್ಯಾಟ್ಸ್‌ಮನ್‌ ಡ್ಯಾರಿಲ್‌ ಮಿಚೆಲ್‌ ಅವರು ಶತಕ ಬಾರಿಸಿದರು. ಈ ಇನಿಂಗ್ಸ್‌ ಮೂಲಕ ಅವರು ಭಾರತದ ವಿರುದ್ಧ ಅತಿ ಹೆಚ್ಚು ಒಡಿಐ ಶತಕ ಬಾರಿಸಿದ ವಿದೇಶಿ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಮಿಚೆಲ್‌ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.

ಭಾರತದ ವಿರುದ್ಧ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಡ್ಯಾರಿಲ್‌ ಮಿಚೆಲ್!

ಡ್ಯಾರಿಲ್‌ ಮಿಚೆಲ್‌ ಭಾರತದಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. -

Profile
Ramesh Kote Jan 18, 2026 7:09 PM

ಇಂದೋರ್: ಇಲ್ಲಿನ ಹೋಳ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ (IND vs NZ) ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ (New Zealand) ತಂಡಗಳು ಕಾದಾಟ ನಡೆಸಿದವು. ಉಭಯ ತಂಡಗಳು ಸರಣಿಯಲ್ಲಿ 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿರುವುದರಿಂದ ಈ ಪಂದ್ಯ ಎರಡೂ ತಂಡಗಳಿಗೂ ನಿರ್ಣಾಯಕವಾಗಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾದ ಪ್ರವಾಸಿ ನ್ಯೂಜಿಲೆಂಡ್ ತಂಡ 337 ರನ್ ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಡ್ಯಾರಿಲ್ ಮಿಚೆಲ್ (Daryl Mitchell) ಅವರ ಪಾತ್ರ ಮಹತ್ವದ್ದಾಗಿದೆ. 131 ಎಸೆತಗಳಲ್ಲಿ 15 ಫೋರ್ ಹಾಗೂ ಮೂರು ಸಿಕ್ಸರ್ ಗಳೊಂದಿಗೆ ಬರೋಬ್ಬರಿ 137 ರನ್ ಬಾರಿಸಿ ತಂಡಕ್ಕೆ ನೆರವಾದರು. ಇದಲ್ಲದೆ, ಮಿಚೆಲ್ ಏಕದಿನ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

ಭಾರತದ ಅವರು 8 ಇನಿಂಗ್ಸ್‌ಗಳನ್ನಾಡಿದ್ದು, ಅದರಲ್ಲಿ ನಾಲ್ಕು ಶತಕ ಬಾರಿಸಿದ್ದಾರೆ. ಆ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಪ್ರವಾಸಿ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಐದು ಶತಕಗಳೊಂದಿಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಇದ್ದಾರೆ.

IND vs NZ: ಮೂರನೇ ಪಂದ್ಯದಲ್ಲಿ ಶತಕ ಬಾರಿಸಿ ಬಾಬರ್‌ ಆಝಮ್‌ ದಾಖಲೆ ಸರಿಗಟ್ಟಿದ ಡ್ಯಾರಿಲ್‌ ಮಿಚೆಲ್!

ಭಾರತದಲ್ಲಿ ಅತಿ ಹೆಚ್ಚು ಒಟಿಐ ಶತಕ ಬಾರಿಸಿದವರು

ಎಬಿ ಡಿ ವಿಲಿಯರ್ಸ್: 5 ಶತಕಗಳು

ಡ್ಯಾರಿಲ್ ಮಿಚೆಲ್‌: 4 ಶತಕಗಳು

ಕ್ವಿಂಟನ್ ಡಿ ಕಾಕ್: 3 ಶತಕಗಳು

ಕ್ರಿಸ್ ಗೇಲ್-: 3 ಶತಕಗಳು

ರಿಕಿ ಪಾಂಟಿಂಗ್: 3 ಶತಕಗಳು

ಸಲ್ಮಾನ್ ಬಟ್: 3 ಶತಕಗಳು

ಮಾರ್ಲನ್‌ ಸ್ಯಾಮುಯೆಲ್ಸ್: 3 ಶತಕಗಳು



ಈ ಮೂಲಕ ಕ್ರಿಕೆಟ್ ದಿಗ್ಗಜರಾದ ಕ್ವಿಂಟನ್ ಡಿಕಾಕ್, ಕ್ರಿಸ್ ಗೇಲ್, ರಿಕಿ ಪಾಂಟಿಂಗ್, ಸಲ್ಮಾನ್ ಭಟ್ ಹಾಗೂ ಮರ್ಲಾನ್ ಸ್ಯಾಮುಯೆಲ್ಸ್ ಅವರ ದಾಖಲೆಯನ್ನು ಇದೀಗ ಕಿವೀಸ್ ಆಟಗಾರ ಡ್ಯಾರಿಲ್ ಮಿಚೆಲ್ ಹಿಂದಿಕ್ಕಿದ್ದಾರೆ.

ಶ್ರೀಲಂಕಾ ಆಟಗಾರನ ಸುದೀರ್ಘ ದಾಖಲೆಯೊಂದನ್ನು ಮುರಿದ ಮಿಚೆಲ್

ಡ್ಯಾರಿಲ್ ಮಿಚೆಲ್ ಮೂರು ಪಂದ್ಯಗಳ ಸರಣಿಯಲ್ಲಿ ಭಾರತದ ವಿರುದ್ಧ 300 ಕ್ಕೂ ಹೆಚ್ಚು ರನ್ ಗಳಿಸಿದ ಪ್ರವಾಸಿ ತಂಡದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆ ಈ ಹಿಂದೆ ಶ್ರೀಲಂಕಾದ ರಾಯ್ ಡಯಾಸ್ ಹೆಸರಿನಲ್ಲಿತ್ತು.

IND vs NZ: ಡ್ರೆಸ್ಸಿಂಗ್‌ ರೂಂಗೆ ತೆರಳುತ್ತಿದ್ದ ಡ್ಯಾರಿಲ್‌ ಮಿಚೆಲ್‌ರನ್ನು ತಳ್ಳಿದ ವಿರಾಟ್‌ ಕೊಹ್ಲಿ! ವಿಡಿಯೊ

ಭಾರತದ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪ್ರವಾಸಿ ಆಟಗಾರನೊಬ್ಬ ಗಳಿಸಿದ ಅತಿ ಹೆಚ್ಚು ರನ್‌ಗಳು

ಡ್ಯಾರಿಲ್ ಮಿಚೆಲ್: 352 ರನ್ (2026)

ರಾಯ್ ಡಯಾಸ್: 262 ರನ್ (1982)

ಮಾರ್ಲನ್ ಸ್ಯಾಮುಯೆಲ್ಸ್: 254 ರನ್ (2014)

ಆರೋನ್ ಫಿಂಚ್: 250 ರನ್ (2017)

ಎಬಿ ಡಿ ವಿಲಿಯರ್ಸ್: 241 ರನ್ (2010)

ಇನ್ನು ಈ ಪಂದ್ಯದಲ್ಲಿ ಭಾರತ ತಂಡ 337 ರನ್ ಚೇಸ್ ಮಾಡಿ ತವರಿನಲ್ಲಿ ಸರಣಿ ಮೂಡಿಗೇರೀಸಿಕೊಳ್ಳುವ ತವಕದಲ್ಲಿದೆ.