ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025: ʻಭಾರತ ತಂಡವನ್ನು ಪಾಕಿಸ್ತಾನ ಸೋಲಿಸಲಿದೆʼ-ಅಕಿಬ್‌ ಜಾವೇದ್‌ ಭವಿಷ್ಯ!

ಮುಂಬರುವ 2025ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪಾಕ್‌ ಸೆಲೆಕ್ಟರ್‌ ಆಕಿಬ್‌ ಜಾವೇದ್‌, ಭಾರತ ತಂಡವನ್ನು ಪಾಕಿಸ್ತಾನ ತಂಡ ಸೋಲಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 13 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 9ರಲ್ಲಿ ಗೆದ್ದು ಮೇಲುಗೈ ಸಾಧಿಸಿದೆ.

ಭಾರತವನ್ನು ಪಾಕ್‌ ತಂಡ ಸೋಲಿಸಲಿದೆ ಎಂದ ಅಕಿಬ್‌ ಜಾವೇದ್‌!

ಭಾರತವನ್ನು ಪಾಕಿಸ್ತಾನ ಸೋಲಿಸಲಿದೆ ಎಂದ ಆಕಿಬ್‌ ಜಾವೇದ್‌.

Profile Ramesh Kote Aug 17, 2025 9:07 PM

ನವದೆಹಲಿ: ಮುಂಬರುವ ಏಷ್ಯಾ ಕಪ್‌ (Asia Cup 2025) ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು (IND vs PAK) ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಹೈವೋಲ್ಟೇಜ್‌ ಪಂದ್ಯದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಂತೆ ಪಾಕಿಸ್ತಾನ ಸೆಲೆಕ್ಟರ್‌ ಆಕಿಬ್‌ ಜಾವೇದ್‌ (Aqib Javed) ಅವರು ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಭಾರತ (India) ತಂಡವನ್ನು ಪಾಕಿಸ್ತಾನ ಸೋಲಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಆದರೆ, ಭಾರತ ತಂಡವನ್ನು ಸೋಲಿಸುವುದು ಪಾಕ್‌ಗೆ ಅಷ್ಟೊಂದು ಸುಲಭವಲ್ಲ. ಏಕೆಂದರೆ ಮುಖಾಮುಖಿ ದಾಖಲೆಯಲ್ಲಿ ಟೀಮ್‌ ಇಂಡಿಯಾ ಮೇಲುಗೈ ಸಾಧಿಸಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಎದುರು ಪಾಕಿಸ್ತಾನದ ಮುಖಾಮುಖಿ ಅಂಕಿಅಂಶ ಉತ್ತಮವಾಗಿಲ್ಲ. ಇಲ್ಲಿಯ ತನಕ ಆಡಿದ 13 ಪಂದ್ಯಗಳಲ್ಲಿ ಈ ಎರಡೂ ತಂಡಗಳು ಕಾದಾಟ ನಡೆಸಿವೆ. ಇದರಲ್ಲಿ ಭಾರತ ತಂಡ 9ರಲ್ಲಿ ಗೆಲುವು ಪಡೆದಿದ್ದರೆ, ಪಾಕಿಸ್ತಾನ ತಂಡ ಕೇವಲ ಮೂರು ಪಂದ್ಯಗಳಲ್ಲಿ ಜಯಿಸಿದೆ ಅಷ್ಟೆ. ಇನ್ನುಳಿದ ಒಂದು ಪಂದ್ಯ ಟೈ ಆಗಿದೆ. 2007ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಪಂದ್ಯ ಟೈ ಆಗಿತ್ತು, ನಂತರ ಬೌಲ್‌ ಔಟ್‌ನಲ್ಲಿ ಟೀಮ್‌ ಇಂಡಿಯಾ ಗೆಲುವು ಪಡೆದಿತ್ತು.

Asia Cup 2025: ಭಾರತ ತಂಡದ ಆಯ್ಕೆಗೆ ಜಸ್‌ಪ್ರೀತ್‌ ಬುಮ್ರಾ ಲಭ್ಯ! ವರದಿ

ಪಾಕಿಸ್ತಾನ ತಂಡ 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಭಾರತ ನೀಡಿದ್ದ 182 ರನ್‌ಗಳ ಗುರಿಯನ್ನು ಬಾಬರ್‌ ಆಝಮ್‌ ನಾಯಕತ್ವದ ಪಾಕ್‌ ಗೆಲುವು ಪಡೆದಿತ್ತು. ಮುಖಾಮುಖಿ ದಾಖಲೆಯಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದ್ದರೂ ಪಾಕ್‌ ಸೆಲೆಕ್ಟರ್‌, ಪಾಕಿಸ್ತಾನ ತಂಡ, ಟೀಮ್‌ ಇಂಡಿಯಾವನ್ನು ಮಣಿಸಲಿದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

"ಪಾಕಿಸ್ತಾನ ಟಿ20 ತಂಡ ಭಾರತವನ್ನು ಸೋಲಿಸಬಹುದು. ಭಾರತದ ವಿರುದ್ಧ ಪಾಕಿಸ್ತಾನ ಪಂದ್ಯಗಳು ಯಾವಾಗಲೂ ದೊಡ್ಡದಾಗಿರುತ್ತವೆ. ಈ 17 ಸದಸ್ಯರ ಪಾಕ್‌ ತಂಡ ಯಾವುದೇ ತಂಡವನ್ನು ಸೋಲಿಸಬಹುದು. ನಾವು ಅವರ ಮೇಲೆ ಒತ್ತಡ ಹೇರಬಾರದು, ಆದರೆ ಈ ತಂಡದ ಬಗ್ಗೆ ನನಗೆ ಹೆಚ್ಚಿನ ಭರವಸೆ ಇದೆ," ಎಂದು ಜಾವೇದ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.

Pakistan Squad: ಬಾಬರ್‌ ಆಝಮ್‌ ಔಟ್‌, ಏಷ್ಯಾ ಕಪ್‌ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ!

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ಗುಂಪು ಹಂತದ ಪಂದ್ಯ ಸೆಪ್ಟಂಬರ್‌ 14 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಏಷ್ಯಾ ಕಪ್‌ ಪಾಕಿಸ್ತಾನ ತಂಡದಿಂದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ಬಾಬರ್‌ ಆಝಮ್‌ ಮತ್ತು ಮೊಹಮ್ಮದ್‌ ರಿಝ್ವಾನ್‌ ಅವರನ್ನು ಕೈ ಬಿಡಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಆಕಿಬ್‌ ಜಾವೇದ್‌, ಈ ಹಿರಿಯ ಆಟಗಾರರು ಚುಟುಕು ತಂಡಕ್ಕೆ ಕಮ್‌ಬ್ಯಾಕ್‌ ಮಾಡಲು ಅವಕಾಶವಿದೆ ಎಂದಿದ್ದಾರೆ.

ಸಾಹಿಬ್‌ಝಾದ್‌ ಫರ್ಹಾನ್‌, ಸೈಮ್‌ ಆಯುಬ್‌ ಹಾಗೂ ಫಖಾರ್‌ ಝಮಾನ್‌ ಅವರು ಪಾಕಿಸ್ತಾನ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದಾರೆ. ಅಂದ ಹಾಗೆ ಬಾಬರ್‌ ಆಝಮ್‌ ಮತ್ತು ಮೊಹಮ್ಮದ್‌ ರಿಝ್ವಾನ್‌ ಅವರು 2024ರ ಡಿಸೆಂಬರ್‌ನಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಒಂದೇ ಒಂದು ಟಿ20ಐ ಪಂದ್ಯವನ್ನು ಆಡಿಲ್ಲ. ಆದರೂ ಈ ಇಬ್ಬರೂ ಟಿ20ಐ ತಂಡಕ್ಕೆ ಮರಳಲಿದ್ದಾರೆಂಬ ಬಗ್ಗೆ ವಿಶ್ವಾಸವಿದೆ ಎಂದು ಪಾಕ್‌ ಸೆಲೆಕ್ಟರ್‌ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

Asia Cup 2025: ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ಸೂರ್ಯಕುಮಾರ್‌ ಯಾದವ್‌!

"ನಾವು ಅವರನ್ನು ಸಂಪೂರ್ಣವಾಗಿ ಬದಿಗಿಡುತ್ತಿದ್ದೇವೆ ಎಂದಲ್ಲ. ಪ್ರಸ್ತುತ ಆಯ್ಕೆಗಳು ಆಟಗಾರನು ಹೇಗೆ ಅಭಿವೃದ್ಧಿ ಹೊಂದುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತವೆ. ನಾನು ಸಾಹಿಬ್‌ಜಾದಾ ಫರ್ಹಾನ್, ಸೈಮ್ ಮತ್ತು ಫಖರ್‌ರ ಉದಾಹರಣೆಗಳನ್ನು ನೀಡಿದ್ದೇನೆ. ಸಾಹಿಬ್‌ಜಾದಾ ಪುನರಾಗಮನ ಮಾಡಿದರು, ಸೈಮ್ ಆರಂಭದಲ್ಲಿ ಕಷ್ಟಪಟ್ಟರು ಆದರೆ ನಂತರ ಪ್ರಭಾವ ಬೀರಿದರು," ಎಂದು ಅವರು ತಿಳಿಸಿದ್ದಾರೆ.

"ಯಾವುದೇ ಆಟಗಾರನ ವೃತ್ತಿಜೀವನದ ಮೇಲೆ ನೀವು ಮುದ್ರೆ ಒತ್ತಲು ಸಾಧ್ಯವಿಲ್ಲ - ಅವಕಾಶಗಳು ಯಾವಾಗಲೂ ಇರುತ್ತವೆ. ಇದೀಗ, ಅವರು ಬಿಗ್ ಬ್ಯಾಷ್ ಮತ್ತು ಪಿಎಸ್ಎಲ್‌ನಂತಹ ಲೀಗ್‌ಗಳಲ್ಲಿ ಅನುಭವವನ್ನು ಪಡೆಯುತ್ತಿದ್ದಾರೆ. ಯಾರು ಪ್ರದರ್ಶನ ನೀಡುತ್ತಾರೆಯೋ ಅವರು ಆಡುತ್ತಾರೆ ಮತ್ತು ಪ್ರದರ್ಶನ ನೀಡುವವರು ಮಾತ್ರ ಆಡಲು ಅರ್ಹರು," ಎಂದು ಜಾವೇದ್ ಹೇಳಿದ್ದಾರೆ.