IPL 2026 Auction: 25.20 ಕೋಟಿ ರು ಪಡೆದ ಬೆನ್ನಲ್ಲೆ ಕೆಕೆಆರ್‌ಗೆ ನಿರಾಶೆ ಮೂಡಿಸಿದ ಕ್ಯಾಮೆರಾನ್ ಗ್ರೀನ್!
2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮಿನಿ ಹರಾಜಿನಲ್ಲಿ 25.20 ಕೋಟಿ ರು. ಗಳಿಗೆ ಸೋಲ್ಸ್ ಆಗಿದ್ದ ಆಸ್ಟ್ರೇಲಿಯಾ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಗೋಲ್ಡನ್ ಡಕೌಟ್ ಆಗಿದ್ದಾರೆ. ಆದರೆ, ಲಿಯಾಮ್ ಲಿವಿಂಗ್‌ಸ್ಟೋನ್ ಹಾಗೂ ಆರ್‌ಸಿಬಿ ವೆಂಕಟೇಶ್ ಅಯ್ಯರ್ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ.
ಆರ್‌ಸಿಬಿಗೆ ಸೇರಿದ ಬೆನ್ನಲ್ಲೆ 70 ರನ್ ಬಾರಿಸಿದ ವೆಂಕಟೇಶ್ ಅಯ್ಯರ್. -
ನವದೆಹಲಿ: ಡಿಸೆಂಬರ್ 16 ರಂದು ನಡೆದಿದ್ದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025 Mini Auction) ಟೂರ್ನಿಯಲ್ಲಿ ಅತಿ ಹೆಚ್ಚಿನ ಹಣವನ್ನು ಪಡೆದ ಹಲವು ಆಟಗಾರರು ಒಂದು ದಿನದ ಬೆನ್ನಲ್ಲೆ ತಮ್ಮ ಪ್ರದರ್ಶನಗಳಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. ಮಿನಿ ಹರಾಜಿನಲ್ಲಿ 25.20 ಕೋಟಿ ರು. ಗಳಿಗೆ ಕೋಲ್ಕತಾ ನೈಟ್ ರೈಡರ್ಸ್‌ಗೆ (KKR) ಸೇರಿದ್ದ ಆಸೀಸ್ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ (Cameron Green) ಅವರು ಇಂಗ್ಲೆಂಡ್ ವಿರುದ್ಧ ಆಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಡಕ್‌ಔಟ್ ಆಗಿದ್ದಾರೆ. ಅವರು ಆಡಿದ ಕೇವಲ ಎರಡನೇ ಎಸೆತದಲ್ಲಿ ಜೋಫ್ರಾ ಆರ್ಚರ್‌ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದಾರೆ.
ಮಿನಿ ಹರಾಜಿನಲ್ಲಿ ಕ್ಯಾಮೆರಾನ್ ಗ್ರೀನ್ ಪ್ರಮುಖ ಕೇಂದ್ರ ಬಿಂದುವಾಗಿದ್ದರು. ಇವರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡಗಳು ಭಾರಿ ಪೈಪೋಟಿಯನ್ನು ನಡೆಸಿದ್ದವು. ಆದರೆ, ಅಂತಿಮವಾಗಿ ಕೋಲ್ಕತಾ ಫ್ರಾಂಚೈಸಿ ದಾಖಲೆಯ ಮೊತ್ತಕ್ಕೆ ಆಸೀಸ್ ಆಲ್‌ರೌಂಡರ್ ಅನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಆದರೆ, ದುಬಾರಿ ಮೊತ್ತವನ್ನು ಜೇಬಿಗಿಳಸಿಕೊಂಡ ಒಂದು ದಿನದ ಬೆನ್ನಲ್ಲೆ ಆಸೀಸ್ ಆಲ್‌ರೌಂಡರ್ ಕೋಲ್ಕತಾ ಫ್ರಾಂಚೈಸಿಗೆ ನಿರಾಶೆ ಮೂಡಿಸಿದ್ದಾರೆ. ಅಡಿಲೇಡ್ ಓವಲ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿದ ಗ್ರೀನ್ ಕೇವಲ ಎರಡೇ ಎರಡು ಎಸೆತಗಳಲ್ಲಿ ಔಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಆ ಮೂಲಕ ಕೋಲ್ಕತಾ ಫ್ರಾಂಚೈಸಿಗೆ ನಿರಾಶೆ ಮೂಡಿಸಿದ್ದಾರೆ.
IPL 2026: ಕೊಹ್ಲಿ-ಸಾಲ್ಟ್ ಓಪನರ್ಸ್; ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಿಷ್ಠ ಪ್ಲೇಯಿಂಗ್ XI
ಮಿಂಚಿದ ಆರ್‌ಸಿಬಿ ಆಲ್‌ರೌಂಡರ್
ಮಿನಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 7 ಕೋಟಿ ರು. ಗಳನ್ನು ಪಡೆದು ಬಂದಿರುವ ವೆಂಕಟೇಶ್ ಅಯ್ಯರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದಾರೆ. ಅಚ್ಚರಿ ಎಂಬಂತೆ ವೆಂಕಟೇಶ್ ಕಳೆದ ಮೆಗಾ ಹರಾಜಿನಲ್ಲಿ 23.75 ಕೋಟಿ ರು. ಗಳನ್ನು ಪಡೆದಿದ್ದರು. ಆದರೆ, ಈಗ ಆರ್‌ಸಿಬಿಗೆ 7 ಕೋಟಿ ರು ಗಳಿಗೆ ಬಂದಿದ್ದಾರೆ. ಇವರು ಮಿನಿ ಹರಾಜಿನಲ್ಲಿ 7 ಕೋಟಿ ರು.ಗಳನ್ನು ಪಡೆದ ಒಂದು ದಿನದ ಬೆನ್ನಲ್ಲೆ ಮಧ್ಯ ಪ್ರದೇಶ ತಂಡದ ಬ್ಯಾಟ್ಸ್‌ಮನ್, ಪಂಜಾಬ್ ವಿರುದ್ಧ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಬಿ ಗುಂಪಿನ ಸೂಪರ್ ಲೀಗ್ ಪಂದ್ಯದಲ್ಲಿ 42 ಎಸೆತಗಳಲ್ಲಿ 70 ರನ್‌ಗಳನ್ನು ಬಾರಿಸಿದ್ದಾರೆ. ಈ ಪಂದ್ಯದಲ್ಲಿ ಮಧ್ಯ ಪ್ರದೇಶ ಗೆದ್ದಿಲ್ಲವಾದರೂ, ಅಯ್ಯರ್ ಪ್ರದರ್ಶನದಿಂದ ಆರ್‌ಸಿಬಿಗೆ ಸಂತಸವಾಗಿರುವುದಂತೂ ಗ್ಯಾರೆಂಟಿ.
IPL 2026 Auction: ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡದ ಬಲಾಬಲ ಹೇಗಿದೆ?
ಸ್ಪೋಟಕ ಅರ್ಧಶತಕ ಸಿಡಿಸಿದ ಲಿವಿಂಗ್‌ಸ್ಟೋನ್
ಮಂಗಳವಾರ ನಡೆದಿದ್ದ ಐಪಿಎಲ್ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರ ಲಿಯಾಮ್ ಲಿವಿಂಗ್‌ಸ್ಟೋನ್ ಮೊದಲನೇ ಸುತ್ತಿನಲ್ಲಿ ಅನ್‌ಸೋಲ್ಡ್ ಆಗಿದ್ದರು. ನಂತರ ಎರಡನೇ ಸುತ್ತಿನಲ್ಲಿ ಅವರನ್ನು ಖರೀದಿಸಲು ಒಟ್ಟು ನಾಲ್ಕು ತಂಡಗಳು ಆಸಕ್ತಿಯನ್ನು ತೋರಿಸಿದ್ದವು. ಆದರೆ, ಅಂತಿಮವಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡ 13 ಕೋಟಿ ರು. ಗಳಿಗೆ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ಖರೀದಿಸುವಲ್ಲಿ ಸಫಲವಾಯಿತು. ಇದೀಗ ಅವರು 13 ಕೋಟಿ ರು.ಗೆ ಸೋಲ್ಡ್ ಆದ ಒಂದು ದಿನದ ಬೆನ್ನಲ್ಲೆ ಲಿವಿಂಗ್‌ಸ್ಟೋನ್, ಅಬು ದಾಬಿ ನೈಟ್ ರೈಡರ್ಸ್ ಪರ 49 ಎಸೆತಗಳಲ್ಲಿ 76 ರನ್‌ಗಳನ್ನು ಸಿಡಿಸಿದ್ದಾರೆ. ಆ ಮೂಲಕ ಡೆಸೆರ್ಟ್ ವೈಪರ್ಸ್ ವಿರುದ್ಧ ತಮ್ಮ ತಂಡವನ್ನು ಗೆಲ್ಲಿಸಿದ್ದರು.