ENG vs PAK: ನಿಧಾನಗತಿಯ ಬ್ಯಾಟಿಂಗ್‌ನೊಂದಿಗೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಬಾಬರ್ ಆಝಮ್!
ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಮ್ ಅವರ ನಿಧಾನಗತಿಯ ಬ್ಯಾಟಿಂಗ್ ಮುಂದುವರಿದಿದೆ. ಮಂಗಳವಾರ ಅವರು ಇಂಗ್ಲೆಂಡ್ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8ರ ಪಂದ್ಯದಲ್ಲಿಯೂ 24 ಎಸೆತಗಳಲ್ಲಿ 25 ರನ್ ಗಳಿಸಿದರು. ತಮ್ಮ ಸ್ಲೋ ಇನಿಂಗ್ಸ್ ಮೂಲಕ ಆಝಮ್ ಅನಗತ್ಯ ದಾಖಲೆಯೊಂದನ್ನು ಹೆಗಲೇರಿಸಿಕೊಂಡಿದ್ದಾರೆ.
ಸ್ಲೋ ಬ್ಯಾಟಿಂಗ್ ಮೂಲಕ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಬಾಬರ್. -
ಪಲ್ಲೆಕೆಲೆ: ಪಾಕಿಸ್ತಾನ ತಂಡದ ಹಿರಿಯ ಬ್ಯಾಟ್ಸ್‌ಮನ್ ಬಾಬರ್ ಅಝಮ್ (Babar Azam) ಅವರ ನಿಧಾನಗತಿಯ ಬ್ಯಾಟಿಂಗ್ ಟಿ20ಐ ಕ್ರಿಕೆಟ್‌ನಲ್ಲಿ ಮುಂದುವರಿದಿದೆ. ಇದೀಗ ಇಂಗ್ಲೆಂಡ್ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ತಮ್ಮ ಎರಡನೇ ಸೂಪರ್-8ರ ಪಂದ್ಯದಲ್ಲಿಯೂ (ENG vs PAK) ಮಾಜಿ ನಾಯಕ ಸ್ಲೋ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇಲ್ಲಿನ ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆಡಿದ 24 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್ ವೇಗಿ ಜೇಮಿ ಓವರ್ಟನ್ ಪಾಕ್ ಮಾಜಿ ನಾಯಕನನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರೊಂದಿಗೆ ಬಾಬರ್ ಆಝಮ್ ಅವರ ಸ್ಟ್ರೈಕ್ ರೇಟ್ ಮತ್ತೊಮ್ಮೆ ಮುನ್ನೆಲೆಗೆ ಬಂದಿತು.
ಕ್ರೀಸ್‌ನಲ್ಲಿ ಸಮಯ ಕಳೆದರೂ, ಬಾಬರ್ ಆಝಮ್ ತಮ್ಮ ಇನಿಂಗ್ಸ್ ಅನ್ನು ದೊಡ್ಡ ಮೊತ್ತವನ್ನಾಗಿ ಆಗಿ ಪರಿವರ್ತಿಸುವಲ್ಲಿ ವಿಫಲರಾದರು. 104ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ಬಾಬರ್, ತಮ್ಮ ರನ್ ರೇಟ್ ಅನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾಗ ಜೇಮೀ ಓವರ್ಟನ್ ಅವರ ನಿಖರವಾದ ಎಸೆತ ಸ್ಟಂಪ್‌ಗಳನ್ನು ಛಿದ್ರಗೊಳಿಸಿತು. ಸೈಮ್ ಆಯುಬ್ ಅವರ ವೈಫಲ್ಯದ ನಂತರ, ಬಾಬರ್ ಆಝಮ್ ದೊಡ್ಡ ಮತ್ತು ವೇಗದ ಬ್ಯಾಟಿಂಗ್ ನಡೆಸುವ ನಿರೀಕ್ಷೆಯಿತ್ತು, ಆದರೆ ಅವರು ಮತ್ತೊಮ್ಮೆ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು.
T20 World Cup: ಕೌಟುಂಬಿಕ ತುರ್ತು ಪರಿಸ್ಥಿತಿಯಿಂದಾಗಿ ಭಾರತ ತಂಡವನ್ನು ತೊರೆದ ರಿಂಕು ಸಿಂಗ್!
ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಬಾಬರ್ ಆಝಮ್
ಈ ಟೂರ್ನಿಯಲ್ಲಿ ಬಾಬರ್ ಆಝಮ್ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಬ್ಯಾಟ್ ಮಾಡಿದ್ದಾರೆ. ಇದರಲ್ಲಿ ಅವರು 22.75ರ ಸರಾಸರಿಯಲ್ಲಿ ಕೇವಲ 91 ರನ್ ಗಳಿಸಿದ್ದಾರೆ. ಬಾಬರ್ ಇತೀಚೆಗೆ ತಮ್ಮ ತಂಡದಲ್ಲಿ 4 ಅಥವಾ 5ನೇ ಕ್ರಮಾಂಕಕ್ಕೆ ಇಳಿದಿದ್ದರು.
ಅಂದ ಹಾಗೆ ಈ ಇನಿಂಗ್ಸ್‌ನೊಂದಿಗೆ ಬಾಬರ್ ಆಝಮ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅನಗತ್ಯ ದಾಖಲೆಯೊಂದನ್ನು ಹೆಗಲೇರಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ 500 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಬಾಬರ್ ಆಝಮ್ ಇದೀಗ ಅತ್ಯಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು 111.5ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಈ ವಿಷಯದಲ್ಲಿ ಅವರು ಮೊಹಮ್ಮದ್ ಹಫೀಜ್ ಮತ್ತು ಕುಮಾರ್ ಸಂಗಕ್ಕಾರ ಅವರನ್ನು ಮೀರಿಸಿದ್ದಾರೆ.
IND vs ZIM: ʻವಿರಾಟ್ ಕೊಹ್ಲಿ ತರ ಆಡಿʼ- ತಿಲಕ್ ವರ್ಮಾಗೆ ಮಹತ್ವದ ಸಲಹೆ ನೀಡಿದ ಮೊಹಮ್ಮದ್ ಕೈಫ್!
ಟಿ20 ವಿಶ್ವಕಪ್ ಟೂರ್ನಿಗಳಲ್ಲಿ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ ಬ್ಯಾಟರ್ಸ್
111.5 – ಬಾಬರ್ ಆಝಮ್*
111.8 – ಮೊಹಮ್ಮದ್ ಹಫೀಜ್‌ಕುಮಾರ
112.2-ಕುಮಾರ ಸಂಗಕ್ಕಾರ
112.5 – ಕೇನ್ ವಿಲಿಯಮ್ಸನ್
113.0 – ಮೊಹಮ್ಮದ್ ರಿಝ್ವಾನ್
ಸ್ಟ್ರೈಕ್ ರೇಟ್ ಬಗ್ಗೆ ವಿವಾದ
ಪ್ರಸ್ತುತ 140-150ರ ಸ್ಟ್ರೈಕ್ ರೇಟ್ ಸಾಮಾನ್ಯವೆಂದು ಪರಿಗಣಿಸಲಾಗಿರುವುದರಿಂದ ಬಾಬರ್ ಆಝಮ್ ಅವರ ನಿಧಾನಗತಿಯ ಬ್ಯಾಟಿಂಗ್ ಶೈಲಿಯನ್ನು ಪ್ರಶ್ನಿಸಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, 111 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುವುದು ತಂಡಕ್ಕೆ ಲಾಭಕ್ಕಿಂತ ಹೆಚ್ಚಾಗಿ ಹೊರೆಯಾಗಿ ಪರಿಣಮಿಸುತ್ತದೆ. ಪರಿಣಾಮವಾಗಿ,= ಟಿ20 ತಂಡದಲ್ಲಿ ಬಾಬರ್ ಆಝಮ್‌ಗೆ ನಿರಂತರವಾಗಿ ಅವಕಾಶಗಳನ್ನು ನೀಡುವ ಮೂಲಕ ಪಾಕಿಸ್ತಾನ ತಂಡ, ತನ್ನನ್ನು ತಾನೇ ಗುಂಡು ಹಾರಿಸಿಕೊಳ್ಳುತ್ತಿದೆ.